World Cup: ಭಾರತದಲ್ಲಿ ನಡೆಯುತ್ತಿರುವ 2023 ವಿಶ್ವಕಪ್‌ಗಾಗಿ ಅಧಿಕೃತ ಪ್ರಸಾರ ತಂಡದ ಭಾಗವಾಗಿದ್ದ ಪಾಕಿಸ್ತಾನದ ಕ್ರೀಡಾ ನಿರೂಪಕಿ ಜೈನಾಬ್ ಅಬ್ಬಾಸ್ ವಿಶ್ವಕಪ್ ಪಂದ್ಯಗಳ ನಡುವೆ ಇತ್ತೀಚೆಗೆ ಹಠಾತ್ ಭಾರತದಿಂದ ನಿರ್ಗಮಿಸಿದ್ದರು. ಹೈದರಾಬಾದ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನದ ಆರಂಭಿಕ ಪಂದ್ಯದ ವೇಳೆ ನಿರೂಪಕರಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದ ಜೈನಬ್ ಬಳಿಕ ದಿಢೀರನೆ ಭಾರತವನ್ನು ತೊರೆದಿದ್ದರು. ಈ ಬಗ್ಗೆ ಸಾಕಷ್ಟು ವಿವಾದಗಳು ಕೂಡ ಕೇಳಿಬಂದಿದ್ದವು. ಇದೀಗ, ತಮ್ಮ ಈ ನಿರ್ಧಾರದ ಬಗ್ಗೆ ಮೌನ ಮುರಿದಿರುವ ಜೈನಾಬ್ ಅಬ್ಬಾಸ್ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಪಾಕಿಸ್ತಾನದ ಕ್ರೀಡಾ ನಿರೂಪಕಿ ಝೈನಾಬ್ ಅಬ್ಬಾಸ್ ಅವರು ತಮ್ಮ ಅಧಿಕೃತ X ಖಾತೆಯಲ್ಲಿ ಇತ್ತೀಚೆಗೆ ಭಾರತದಿಂದ ಹಠಾತ್ ನಿರ್ಗಮನದ ಹಿಂದಿನ ಕಾರಣಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದು ಈ ರೀತಿ ಬರೆದಿದ್ದಾರೆ:
"ನಾನು ಯಾವಾಗಲೂ ಅತ್ಯಂತ ಅದೃಷ್ಟಶಾಲಿ ಮತ್ತು ನಾನು ಇಷ್ಟಪಡುವ ಕ್ರೀಡೆಯೊಂದಿಗೆ ಪ್ರಯಾಣಿಸಲು ಮತ್ತು ಪ್ರಸ್ತುತಪಡಿಸಲು ಸಿಕ್ಕ ಅವಕಾಶಗಳಿಗಾಗಿ ಕೃತಜ್ಞಳಾಗಿರುತ್ತೇನೆ - ಇದು ವಿಶೇಷವಾದದ್ದು."ನನ್ನ ವಾಸ್ತವ್ಯದ ಸಮಯದಲ್ಲಿ ಎಲ್ಲರೊಂದಿಗೆ ನನ್ನ ದೈನಂದಿನ ಸಂವಹನವು ದಯೆ, ಹರ್ಷಚಿತ್ತದಿಂದ ಕೂಡಿತ್ತು".
ಭಾರತದಲ್ಲಿ ತನ್ನ ವಾಸ್ತವ್ಯವು ಆಹ್ಲಾದಕರವಾಗಿತ್ತು. ಹರ್ಷಚಿತ್ತದಿಂದ ಮತ್ತು ಪರಿಚಿತತೆಯ ಭಾವದಿಂದ ತುಂಬಿತ್ತು. ನನ್ನನ್ನು ದೇಶ ಬಿಡುವಂತೆ ಯಾರೂ ಕೇಳಲಿಲ್ಲ ಅಥವಾ ಗಡಿಪಾರು ಮಾಡಲಿಲ್ಲ. ಆನ್‌ಲೈನ್‌ನಲ್ಲಿ ತನ್ನ ಹಿಂದಿನ ಪೋಸ್ಟ್‌ಗಳಿಗೆ ಪ್ರತಿಕ್ರಿಯೆಗಳಿಂದ ಹೆದರಿ ಮತ್ತು ಭಯಗೊಂಡಿದ್ದರಿಂದ ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಾಲೋಚಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಜೈನಾಬ್ ಹೇಳಿದ್ದಾರೆ.
ಇದನ್ನೂ ಓದಿ- Ind vs Pak ಪಂದ್ಯಕ್ಕಾಗಿ ಕಾತುರರಾಗಿರುವ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ನೀಡಿದ ರೈಲ್ವೇಸ್
ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ:
ಇದೇ ಸಂದರ್ಭದಲ್ಲಿ, 'ನನ್ನ ಸುರಕ್ಷತೆಗೆ ಯಾವುದೇ ಬೆದರಿಕೆ ಇಲ್ಲ, ಆದರೆ ಗಡಿಯ ಎರಡೂ ಬದಿಯಲ್ಲಿರುವ ನನ್ನ ಕುಟುಂಬ ಮತ್ತು ಸ್ನೇಹಿತರು ಆತಂಕಕ್ಕೊಳಗಾಗಿದ್ದಾರೆ. ಏನಾಯಿತು ಎಂಬುದನ್ನು ಪ್ರತಿಬಿಂಬಿಸಲು ನನಗೆ ಸ್ವಲ್ಪ ಸ್ಥಳ ಮತ್ತು ಸಮಯ ಬೇಕಿತ್ತು. ಪ್ರಸಾರವಾದ ಪೋಸ್ಟ್‌ಗಳಿಂದ ಉಂಟಾದ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಅಂತಹ ಭಾಷೆಗೆ ಯಾವುದೇ ಕ್ಷಮೆ ಅಥವಾ ಸ್ಥಳವಿಲ್ಲ. ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಝೈನಾಬ್ ಅಬ್ಬಾಸ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ (X) ನಲ್ಲಿ ಬರೆದಿದ್ದಾರೆ.
— zainab abbas (@ZAbbasOfficial) October 12, 2023
ಇದನ್ನೂ ಓದಿ- Team India Records: ಹೊಸ ದಾಖಲೆ ಬರೆದ ಟೀಂ ಇಂಡಿಯಾ ! ಕ್ರಿಕೆಟ್ ಜಗತ್ತಿನಲ್ಲಿ ನಡೆದೇ ಇಲ್ಲ ಈ ಕಮಾಲ್
ಏನಿದು ಪ್ರಕರಣ?
ಭಾರತದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ನಲ್ಲಿ ಭಾಗವಹಿಸುವುದಾಗಿ ಜೈನಾಬ್ ಅಬ್ಬಾಸ್ (35) ತನ್ನ 'ಎಕ್ಸ್' ಖಾತೆಯಲ್ಲಿ ಘೋಷಿಸಿದ್ದರು. ಈ ಬಳಿಕ ಟ್ವಿಟ್ಟರ್ ಇತ್ತೀಚಿನ 'ಎಕ್ಸ್' ಖಾತೆಯಲ್ಲಿ ಜೈನಾಬ್ ಅಬ್ಬಾಸ್ ಅವರ ಹಿಂದಿನ ಕೆಲವು ಪೋಸ್ಟ್‌ಗಳು ವೈರಲ್ ಆಗಿದ್ದವು. ಜೈನಾಬ್ ಅಬ್ಬಾಸ್ ಅವರ ಪೋಸ್ಟ್‌ಗಳಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ ಪ್ರಕರಣಗಳು ಅತಿ ಹೆಚ್ಚು ವೈರಲ್ ಆಗಿದ್ದವು. ಇವುಗಳನ್ನು ಉಲ್ಲೇಖಿಸಿ, "ಅವಹೇಳನಕಾರಿ" ಭಾರತ ವಿರೋಧಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಸ್ಥಳೀಯ ವಕೀಲರೊಬ್ಬರು ದೆಹಲಿಯಲ್ಲಿ ಆಕೆಯ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಬಳಿಕ ಪಾಕಿಸ್ತಾನದ ಕ್ರೀಡಾ ನಿರೂಪಕಿ ಭಾರತವನ್ನು ತೊರೆದಿದ್ದರು. ಝೈನಾಬ್ ಅಬ್ಬಾಸ್ ವೈಯಕ್ತಿಕ ಕಾರಣಗಳಿಂದ ಭಾರತವನ್ನು ತೊರೆದಿದ್ದಾರೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಂತರ ಮಾಹಿತಿ ನೀಡಿತ್ತು. ಇದೀಗ
ಝೈನಾಬ್ ಅಬ್ಬಾಸ್ ಅವರು ಗುರುವಾರ (ಅಕ್ಟೋಬರ್ 12) X (ಹಿಂದೆ ಟ್ವಿಟರ್) ಮೂಲಕ ಈ ವಿಷಯದ ಬಗ್ಗೆ ಅಧಿಕೃತ ಹೇಳಿಕೆಯೊಂದಿಗೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.