End Of Guru Chandal Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಈ ಹಿಂದೆ ಏಪ್ರಿಲ್ 22 ರಂದು, ಮೇಷ ರಾಶಿಗೆ ಗುರುವಿನ ಪ್ರವೇಶದಿಂದಾಗಿ ರಾಹು ಮತ್ತು ದೇವಗುರು ಬೃಹಸ್ಪತಿಯ ಅಶುಭ ಯೋಗ ರೂಪುಗೊಂಡಿತ್ತು. ಹೀಗಾಗಿ ಅಕ್ಟೋಬರ್ 30 ಅಂದು ಈ ಗುರು-ಚಂಡಾಲ ಯೋಗದ ಅಂತ್ಯದೊಂದಿಗೆ, ಅನೇಕ ರಾಶಿಗಳು ಜನರು ಭಾರಿ ನೆಮ್ಮದಿಯನ್ನು ಪಡೆಯಲಿದ್ದಾರೆ. ಇವರ ಜೀವನದಲ್ಲಿ ಮತ್ತೆ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, Spiritual News In Kannada
End Of Guru Rahu Yuti 2023: ವೈದಿಕ ಜೋತಿಷ್ಯ ಶಾಸ್ತ್ರದ ಪಕಾರ ಅಕ್ಟೋಬರ್ 30 ರಂದು ರಾಹು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಇದು ರಾಹು ಮತ್ತು ಗುರುವಿನಿಂದ ನಿರ್ಮಾಣಗೊಂಡ ಅಶುಭ ಯೋಗದ ಮೇಲೆ ತೆರೆ ಎಳೆಯಲಿದೆ. ರಾಹು ಮೇಷ ರಾಶಿಯಿಂದ ಹೊರಬಂದು ಹಿಮ್ಮುಖ ಚಲನೆಯಲ್ಲಿ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಬದಲಾವಣೆಯ ನಂತರ, ಮೇಷ ರಾಶಿಯಲ್ಲಿ ನಿರ್ಮಾಣಗೊಂಡ ಗುರು-ಚಾಂಡಾಲ ಯೋಗದಿಂದ ಜನರಿಗೆ ಮುಕ್ತಿಸಿಗಲಿದೆ. ಜ್ಯೋತಿಷಿಗಳ ಪ್ರಕಾರ, ಈ ಬದಲಾವಣೆಯ ನಂತರ, 3 ರಾಶಿಯ ಜನರ ಜೀವನದಲ್ಲಿ ಸುವರ್ಣಕಾಲ ಆರಂಭಗೊಳ್ಳಲಿದೆ. ತಾವು ಬಯಸಿದ ಉದ್ಯೋಗವನ್ನು ಪಡೆಯುವ ಈ ರಾಶಿಗಳ ಜನರ ಕನಸು ನನಸಾಗಬಹುದು ಅಥವಾ ಅವರು ವ್ಯಾಪಾರದಲ್ಲಿ ಅನೇಕ ಸುವರ್ಣ ಅವಕಾಶಗಳನ್ನು ಪಡೆಯಬಹುದು. ಆ 3 ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-ಶೀಘ್ರದಲ್ಲೇ ಗೃಹಲಕ್ಷ್ಮಿ ರಾಜಯೋಗ ನಿರ್ಮಾಣ, ವಿಷ್ಣುಪ್ರಿಯೆ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ರಾಜವೈಭವ ಪ್ರಾಪ್ತಿ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಮೇಷ ರಾಶಿ: ಮೇಷ ರಾಶಿಯ ಜನರಿಗೆ ಗುರು-ಚಾಂಡಾಲ ಯೋಗ ಅಂತ್ಯದಿಂದ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಕಳೆದ 7 ತಿಂಗಳುಗಳಿಂದ ನಿಮ್ಮ ರಾಶಿಯಲ್ಲಿ ಗುರು ಮತ್ತು ರಾಹುವಿನ ಅಶುಭ ಯೋಗ ನಿರ್ಮಾಣಗೊಂಡಿದೆ. ಅಕ್ಟೋಬರ್‌ನಲ್ಲಿ ಅದು ಮುಗಿದ ನಂತರ, ನಿಮ್ಮ ಒಳ್ಳೆಯ ದಿನಗಳು ಆರಂಭವಾಗಲಿವೆ. ನೀವು ಬಯಸಿದ ನೌಕರಿಗಾಗಿ ನಿಮಗೆ ಕರೆ ಬರುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಅನಿರೀಕ್ಷಿತ ಧನಲಾಭವಾಗಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಇದು ಉತ್ತಮ ಸಮಯ. ಸಮಯವು ಅನುಕೂಲಕರವಾಗಿದೆ.
ಸಿಂಹ ರಾಶಿ: ಗುರು ಮತ್ತು ರಾಹುವಿನ ಸಂಯೋಗದ ಅಂತ್ಯದೊಂದಿಗೆ, ಸಿಂಹ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ. ನಿಮ್ಮ ಆರೋಗ್ಯದ ಜೊತೆಗೆ. ತಂದೆಯ ಆರೋಗ್ಯವೂ ಸುಧಾರಿಸಲಿದೆ. ಆದಾಯ ಹೆಚ್ಚಾಗಲಿದೆ ಮತ್ತು ನೀವು ಉದ್ಯಮಿಗಳಾಗಿದ್ದರೆ ನಿಮಗೆ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ಸಂತಾನ ಸುಖದಿಂದ ವಂಚಿತರಾದವರಿಗೆ ಸಂತಾನ ಸುಖ ಪ್ರಾಪ್ತಿಯಾಗುವ ನಿರೀಕ್ಷೆ ಇದೆ. ವ್ಯಾಪಾರ ಸಂಬಂಧಗಳು ಸುಧಾರಿಸಲಿವೆ. ನೀವು ಧಾರ್ಮಿಕ ಮತ್ತು ಮಂಗಳಕರ ಕೆಲಸಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವವರಿಗೆ ಈ ಸಮಯವು ತುಂಬಾ ಫಲಪ್ರದವಾಗಿರುತ್ತದೆ.
ತುಲಾ ರಾಶಿ: ತುಲಾ ರಾಶಿಯ ಜನರು ಗುರು-ಚಾಂಡಲ್ ಯೋಗದ ಅಂತ್ಯದ ಶುಭ ಫಲಿತಾಂಶಗಳು ಪಡೆಯಲಿದ್ದಾರೆ. ತುಲಾ ರಾಶಿಯ ಮೇಲೆ ರಾಹು ಮತ್ತು ಗುರು ನೇರ ದೃಷ್ಟಿ ಬೀರಿದ್ದಾರೆ. ಹೀಗಾಗಿ ರಾಹುವಿನ ಮೀನ ಪ್ರವೇಶ ತುಲಾ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯ ಸುಧಾರಿಸಲಿದೆ. ಹಣ ಮತ್ತು ವೃತ್ತಿಯ ವಿಷಯದಲ್ಲಿಯೂ ನಿಮಗೆ ಶುಭ ಫಲಿತಾಂಶಗಳು ಸೃಷ್ಟಿಯಾಗಲಿವೆ ಮತ್ತು ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗುರುತು ನಿರ್ಮಾಣಗಒಳ್ಳಲಿದೆ ಮತ್ತು ಕುಟುಂಬ ಸದಸ್ಯರಲ್ಲಿ ನಿಮ್ಮ ಪ್ರಾಮುಖ್ಯತೆ ಹೆಚ್ಚಾಗಲಿದೆ. ಮುನಿಸಿಕೊಂಡ ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರು ನಿಮ್ಮ ಹತ್ತಿರಕ್ಕೆ ಬರಲಿದ್ದಾರೆ ಮತ್ತು ಅವರೊಂದಿಗೆ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಇದನ್ನೂ ಓದಿ-ಕೆಲವೇ ಕ್ಷಣಗಳಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣ, ಈ 3 ರಾಶಿಗಳ ಜನರ ತಿಜೋರಿ ಸಿರಿ-ಸಂಪತ್ತಿನಿಂದ ತುಂಬಿ ತುಳುಕಲಿದೆ!
ಧನು ರಾಶಿ: ರಾಹು ಮತ್ತು ಗುರುವಿನ ಮೈತ್ರಿ ಅಂತ್ಯದಿಂದ ಧನು ರಾಶಿಯವರಿಗೆ ಬಹಳ ಸಾಕಷ್ಟು ಮಂಗಳಕರ ಪ್ರಾಪ್ತಿಯಾಗಲಿವೆ. ನಿಮಗೆ ಭಾರಿ ಅದೃಷ್ಟ ಪ್ರಾಪ್ತಿಯಾಗಲಿದ್ದು, ಎಲ್ಲಾ ಕಡೆಯಿಂದ ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ನೀವು ಯಾವುದೇ ಹೊಸ ಯೋಜನೆಯಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ಷೇರು ಮಾರುಕಟ್ಟೆಯಲ್ಲಿ ಮಾಡಿದ ಹೂಡಿಕೆಯಿಂದ ಲಾಭವನ್ನು ಪಡೆಯುವಿರಿ. ಚಿನ್ನ ಮತ್ತು ಬೆಳ್ಳಿ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯಬಹುದು ಮತ್ತು ಕೆಲಸ ಮಾಡುವ ಜನರು ಈ ಸಮಯದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ. ದೀರ್ಘ ಕಾಲದಿಂದ ನಿಮಗೆ ಬರಬೇಕಾದ ಹಣ ನಿಮ್ಮತ್ತ ಮರಳಲಿದೆ ಮತ್ತು ನಿಮ್ಮ ವೃತ್ತಿಜೀವನದಲ್ಲಿ ನೀವು ಬಯಸಿದ ಅವಕಾಶಗಳು ಸಿಗಲಿವೆ. ಇದನ್ನೂ ಓದಿ-ಏಕಕಾಲಕ್ಕೆ ಎರಡು ರಾಜಯೋಗಗಳ ಮಹಾ ಸಂಯೋಗ ರಚನೆ, ಈ ಜನರ ಮೇಲೆ ಧನಕುಬೇರನ ಅಪಾರ ಧನವೃಷ್ಟಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)