Home Loan: ಯಾವುದೇ ಬ್ಯಾಂಕ್ ಅಥವಾ ಎನ್ಬಿಎಫ್ಸಿಯಿಂದ ಗೃಹ ಸಾಲ ಪಡೆದಿರುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಶುಭ ಸುದ್ದಿಯೊಂದು ಸಿಕ್ಕಿದೆ. ಸಾಮಾನ್ಯವಾಗಿ, ಮನೆ ಕಟ್ಟಲು, ಇಲ್ಲವೇ ಖರೀದಿಸಲು, ಫ್ಲಾಟ್ ಖರೀದಿಸಲು ಹೋಂ ಲೋನ್ ಪಡೆಯುವುದು ಎಷ್ಟು ಕಷ್ಟವೋ, ಸಾಲವನ್ನು ಮರು ಪಾವತಿಸಿದ ಬಳಿಕ ಆಸ್ತಿ ಸಂಬಂಧಿತ ದಾಖಲೆಗಳನ್ನು ವಾಪಸ್ ಪಡೆಯಲು ಕೂಡ ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಕಷ್ಟಪಡಬೇಕಾಗುತ್ತದೆ. ಇಂತಹ ಹಲವು ಪ್ರಕರಣಗಳು ಆಗಾಗ್ಗೆ ಮುನ್ನಲೆಗೆ ಬರುತ್ತಿರುತ್ತವೆ. ಕೆಲವೊಮ್ಮೆ, ಬ್ಯಾಂಕ್ನಿಂದ ಆಸ್ತಿ ದಾಖಲೆಗಳು ಕಳೆದು ಹೋಗಿರುವ ಬಗ್ಗೆಯೂ ವರದಿಯಾಗಿದೆ. ಆದರೆ, ಇನ್ನು ಮುಂದೆ ಗ್ರಾಹಕರಿಗೆ ಈ ರೀತಿಯ ಸಮಸ್ಯೆಗಳಾಗದಂತೆ ಕಟ್ಟೆಚ್ಚರ ವಹಿಸಿರುವ ಆರ್ಬಿಐ ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳಿಗೆ ಹೊಸ ನಿಯಮಗಳನ್ನು ಹೊರಡಿಸಿದೆ.
ಏನಿದು ಹೊಸ ನಿಯಮ?
ರಿಸರ್ವ್ ಬ್ಯಾಂಕ್ ಹೊಸ ಆದೇಶದ ಪ್ರಕಾರ, ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳು ಇನ್ನು ಮುಂದೆ ಹೋಂ ಲೋನ್ ಸಂಪೂರ್ಣ ಮರುಪಾವತಿಯಾದ 30 ದಿನಗಳಲ್ಲಿ ಗ್ರಾಹಕರಿಗೆ ಎಲ್ಲಾ ದಾಖಲೆಗಳನ್ನು ವಾಪಸ್ ನೀಡುವುದು ಕಡ್ಡಾಯವಾಗಿದೆ. ನಿಗದಿತ ಅವಧಿಯೊಳಗೆ ಡಾಕ್ಯುಮೆಂಟ್ ಅನ್ನು ಬಿಡುಗಡೆ ಮಾಡದಿದ್ದರೆ ಬ್ಯಾಂಕ್ ಅಥವಾ ಎನ್ಬಿಎಫ್ಸಿ ದಂಡ ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ- ಕಪ್ಪು ಅರಿಶಿನದ ಕೃಷಿಯ ಬಗ್ಗೆ ನಿಮಗೆಷ್ಟು ತಿಳಿದಿದೆ? ಕೈತುಂಬಾ ಹಣ ನೀಡುತ್ತೇ ಈ ಬೇಸಾಯ!
ದಿನಕ್ಕೆ 5,000 ರೂ. ದಂಡ:
ಆರ್ಬಿಐ ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳಿಗೆ ಹೊರಡಿಸಿರುವ ಹೊಸ ನಿಯಮ ಡಿಸೆಂಬರ್ 1, 2023 ರಿಂದ ಜಾರಿಗೆ ಬರಲಿದೆ. ಗ್ರಾಹಕರಿಗೆ ಹೋಮ್ ಲೋನ್ ನೀಡಿರುವ ಬ್ಯಾಂಬ್ಯಾಂಕ್ ಅಥವಾ ಎನ್ಬಿಎಫ್ಸಿಯಿಂದ ದಾಖಲೆಗಳನ್ನು ನೀಡಲು ವಿಳಂಬವಾದಲ್ಲಿ ಪ್ರತಿದಿನ ಅವು ಸಂಬಂಧಪಟ್ಟ ಆಸ್ತಿ ಮಾಲೀಕರಿಗೆ ಪ್ರತಿ ದಿನ 5,000 ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ- ರೈತ ಬಾಂಧವರೆ ಸೆಪ್ಟೆಂಬರ್ 30 ನೆನಪಿನಲ್ಲಿಟ್ಟುಕೊಳ್ಳಿ, ಈ ಕೆಲಸ ಮಾಡದೆ ಹೋದಲ್ಲಿ ಖಾತೆಗೆ ಬರಲ್ಲ 2000 ರೂ.!
ಇದಲ್ಲದೆ, ಒಂದೊಮ್ಮೆ ಬ್ಯಾಂಕ್ ಅಜಾಗರೂಕತೆಯಿಂದ ಸಾಲಗಾರನ ಆಸ್ತಿ ದಾಖಲೆಗಳು ಕಳೆದುಹೋಗಿದ್ದೇ ಆದಲ್ಲಿ ಆಸ್ತಿ ದಾಖಲೆಯ ನಕಲಿ ಪ್ರತಿಗಳನ್ನು ಪಡೆಯಲು ಬ್ಯಾಂಕ್ ಗ್ರಾಹಕರಿಗೆ ಸಹಾಯ ಮಾಡಬೇಕು ಎಂದು ಆರ್ಬಿಐ ಸೂಚನೆ ನೀಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.