Shani-Budh Saptam Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಹಾಗೂ ಶನಿ ತನ್ನ ಸಪ್ತಮ ದೃಷ್ಟಿಯಲ್ಲಿ ನಡೆಯನ್ನು ಆರಂಭಿಸಲಿದ್ದಾರೆ. ಇದರಿಂದ ಒಟ್ಟು 4 ರಾಶಿಗಳ ಜನರ ಜಾತಕದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಅವರಿಗೆ ಲಕ್ಷ್ಮಿ ಕಟಾಕ್ಷಕ್ಕೆ ಪಾತ್ರರಾಗಲಿದ್ದಾರೆ.
ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಪರಿವರ್ತಿಸುವ ಮೂಲಕ ಶತ್ರು ಅಥವಾ ಸ್ನೇಹಿತರಿಗೆ ಪರಸ್ಪರ ಎದುರಾಗುತ್ತವೆ. ಗ್ರಹಗಳ ಈ ಸ್ಥಿತಿಯ ಪ್ರಭಾವ ದ್ವಾದಶ ರಾಶಿಗಳು ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಉಂಟಾಗುತ್ತದೆ. ಸೆಪ್ಟೆಂಬರ್ 18 ರಿಂದ ಬುಧ ಹಾಗೂ ಶನಿ ಗ್ರಹಗಳು ಪರಸ್ಪರ ಎದುರಾಗಿ ತನ್ನ ಸಂಚಾರವನ್ನು ಮುನ್ನಡೆಸಲಿವೆ. ಅರ್ಥಾತ್ ಈ ಎರಡು ಗ್ರಹಗಳು ಪರಸ್ಪರ ಸಪ್ತಮ ದೃಷ್ಟಿಯಲ್ಲಿ ತಮ್ಮ ಸಂಚಾರವನ್ನು ಆರಂಭಿಸಲಿವೆ. ಬುಧ ಹಾಗೂ ಶನಿಯ ಈ ಸ್ಥಿತಿ 4 ರಾಶಿಗಳ ಜನರ ಜಾತಕವನ್ನೇ ಬದಲಾಯಿಸಲಿದೆ. ಈ ಜನರಿಗೆ ಆಕಸ್ಮಿಕ ಧನಲಾಭದ ಜೊತೆಗೆ ಭಾಗ್ಯೋದಯಕ್ಕೂ ಕೂಡ ಕಾರಣವಾಗಲಿದೆ.
ಇದನ್ನೂ ಓದಿ-ಶೀಘ್ರದಲ್ಲಿಯೇ ಅಮ್ಲಾ ರಾಜಯೋಗ ನಿರ್ಮಾಣ, ಸ್ವತಃ ಧನಲಕ್ಷ್ಮಿಯಿಂದಲೇ ಈ ಜನರಿಗೆ ಭಾಗ್ಯದ ಬಾಗಿಲ ಬೀಗದ ಕೈ ಹಸ್ತಾಂತರ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಮೇಷ ರಾಶಿ: ಶನಿ ಹಾಗೂ ಬುಧ ಪರಸ್ಪರ ಎದುರಾಗಿ ಸಂಚರಿಸುವುದು ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಬುಧ ಹಾಗೂ ಲಾಭ ಸ್ಥಾನದಲ್ಲಿ ಶನಿ ಸ್ಥಿತನಾಗಿರಲಿದ್ದಾರೆ. ಇದರಿಂದ ಈ ಅವಧಿಯಲ್ಲಿ ನಿಮಗೆ ಉನ್ನತಿಯ ಎಲ್ಲಾ ಅವಕಾಶಗಳು ಪ್ರಾಪ್ತಿಯಾಗಲಿವೆ. ನಿಂತುಹೋದ ನಿಮ್ಮ ಕೆಲಸ ಕಾರ್ಯಗಳು ಪುನಃ ವೇಗ ಪಡೆದುಕೊಳ್ಳಲಿವೆ. ಮಕ್ಕಳ ಕಡೆಯಿಂದ ಈಗಾಗಲೇ ಇರುವ ಯಾವುದಾದರೊಂದು ಕಷ್ಟದಿಂದ ನಿಮಗೆ ಮುಕ್ತಿ ಸಿಗಲಿದೆ. ಈ ಅವಧಿಯಲ್ಲಿ ಸಹೋದರ-ಸಹೋದರಿ ಅಥವಾ ಸಂಬಂಧಿಕರ ಮಾಧ್ಯಮದಿಂದ ಅತ್ಯಾವಶ್ಯಕ ಕೆಲಸ ಕೈಗೂಡಲಿದೆ.
ಮಿಥುನ ರಾಶಿ: ನಿಮ್ಮ ಪಾಳಿಗೂ ಕೂಡ ಶನಿ ಹಾಗೂ ಬುಧ ಪರಸ್ಪರ ಎದುರಾಗುವುದು ಲಾಭ ತರಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಬುಧ ಹಾಗೂ ಲಾಭದ ಮನೆಯಲ್ಲಿ ಶನಿ ಸ್ಥಿತನಾಗಿದ್ದಾರೆ. ಇದರ ಜೊತೆಗೆ ಬುಧ ಹಾಗೂ ಶನಿಯ ಸಪ್ತಮ ದೃಷ್ಟಿ ಕೂಡ ಇದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಸಾಹಿತ್ಯ ಅಥವಾ ಲೇಖನಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಅತ್ಯಂತ ಅದ್ಭುತವಾಗಿರಲಿದೆ. ವಿದೇಶದಿಂದ ನಿಮಗೆ ಲಾಭ ಉಂಟಾಗಲಿದೆ. ನೌಕರಿಯಲ್ಲಿ ಪ್ರಮೋಷನ್-ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗಲಿದೆ.
ವೃಷಭ ರಾಶಿ: ಸಪ್ತಮ ದೃಷ್ಟಿಯಲ್ಲಿ ಬುಧ ಹಾಗೂ ಶನಿಯ ಸಂಚಾರ ನಿಮ್ಮ ಪಾಲಿಗೆ ಅನುಕೂಲಕರವಾಗಿದೆ. ಏಕೆಂದರೆ ಚತುರ್ಥ ಭಾವದಲ್ಲಿ ಬುಧನ ಅಸ್ತಿತ್ವ ಹಾಗೂ ಕರ್ಮ ಭಾವದಲ್ಲಿ ಶನಿಯ ಅಸ್ತಿತ್ವ ಇರಲಿದೆ. ಅರ್ಥಾತ್ ಧನೇಶ ಹಾಗೂ ಪಂಚಮೇಷ ಬುಧ ಕರ್ಮ ಭಾವದಲ್ಲಿದ್ದಾರೆ. ಇದಲ್ಲದೆ ದೇವಗುರು ಬೃಹಸ್ಪತಿಯ ದೃಷ್ಟಿ ಕೂಡ ಬುಧನ ಮೇಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಹೊಸ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ. ಕಾರ್ಯಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆಯೂ ಕೂಡ ಇದೆ. ಕಾರ್ಯಸಿದ್ಧಿ ಪ್ರಾಪ್ತಿಯ ಜೊತೆಗೆ ಆದಾಯದ ಮೂಲಗಳೂ ಕೂಡ ವೃದ್ಧಿಯಾಗಲಿವೆ. ಕುಟುಂಬದಲ್ಲಿ ಸುಖ-ಶಾಂತಿ ಇರುವುದರ ಜೊತೆಗೆ ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.
ತುಲಾ ರಾಶಿ: ಏಳನೆ ದೃಷ್ಟಿಯಿಂದ ಶನಿ ಹಾಗೂ ಬುಧರ ಸಂಚಾರ ನಿಮಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಲಾಭ ಸ್ಥಾನದಲ್ಲಿ ಬುಧನಿದ್ದಾನೆ. ಇದಲ್ಲದೆ ಶನಿದೇವ ಕೇಂದ್ರ ತ್ರಿಕೋನ ರಾಜಯೋಗ ರೂಪಿಸಿ ಪಂಚಮ ಭಾವದಲ್ಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಇದಲ್ಲದೆ ಕಾರ್ಯಗಳಲ್ಲಿ ಸಿದ್ಧಿ ಪ್ರಾಪ್ತಿಯಾಗಲಿದೆ. ಅಕೌಂಟ್, ಟೆಕ್ನಿಕಲ್, ಸಿಎ, ಗ್ಲಾಮರ್, ಮಾಧ್ಯಮ ಹಾಗೂ ಉದ್ಯೋಗಪತಿಗಳಾಗಿದ್ದಾರೋ ಅವರ ಪಾಲಿಗೆ ಈ ಸಮಯ ಅದ್ಭುತವಾಗಿದೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಆಕಾಂಕ್ಷೆಗಳು ಈಡೇರಲಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)