ಆದ್ಯತೆ ವಹಿವಾಟು ಮಾನ್ಯತೆ ರದ್ದು ಘೋಷಿಸಿ ಭಾರತಕ್ಕೆ ಶಾಕ್ ನೀಡಿದ ಟ್ರಂಪ್..!

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಭಾರತಕ್ಕೆ ನೀಡಿದ್ದ ಆಧ್ಯತಾ ವಹಿವಾಟು ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಇದೇ ಬರುವ ಜೂನ್ 5 ಕ್ಕೆ ಇದು ಕೊನೆಗೊಳ್ಳಲಿದೆ ಎಂದು ಅವರು ಘೋಷಿಸಿದ್ದಾರೆ.

Last Updated : Jun 1, 2019, 01:24 PM IST
 ಆದ್ಯತೆ ವಹಿವಾಟು ಮಾನ್ಯತೆ ರದ್ದು ಘೋಷಿಸಿ ಭಾರತಕ್ಕೆ ಶಾಕ್ ನೀಡಿದ ಟ್ರಂಪ್..! title=
file photo

ನವದೆಹಲಿ: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಭಾರತಕ್ಕೆ ನೀಡಿದ್ದ ಆಧ್ಯತಾ ವಹಿವಾಟು ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಇದೇ ಬರುವ ಜೂನ್ 5 ಕ್ಕೆ ಇದು ಕೊನೆಗೊಳ್ಳಲಿದೆ ಎಂದು ಅವರು ಘೋಷಿಸಿದ್ದಾರೆ.

ಮಾರ್ಚ್ ಆರಂಭದಲ್ಲಿ ಸಾಮಾನ್ಯ ಆಧ್ಯತೆ ವ್ಯವಸ್ಥೆ (ಜಿಎಸ್ಪಿ) ಕಾರ್ಯಕ್ರಮದಿಂದ ಭಾರತವನ್ನು ತೆಗೆದುಹಾಕುವುದಾಗಿ ಘೋಷಿಸಿದ್ದರು. ಈಗ ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸಿ ಶುಕ್ರವಾರದಂದು ಹೇಳಿಕೆ ಬಿಡುಗಡೆ ಮಾಡಿರುವ ಟ್ರಂಪ್ " ಭಾರತವು ಅಮೆರಿಕಕ್ಕೆ ಸೂಕ್ತ ರೀತಿಯಲ್ಲಿ ತನ್ನ ಮಾರುಕಟ್ಟೆ ಬಳಕೆಗೆ ಅವಕಾಶ ನೀಡದ ಹಿನ್ನಲೆಯಲ್ಲಿ ಭಾರತಕ್ಕೆ ನೀಡಿದ್ದ ಅಭಿವೃದ್ದಿ ಶೀಲ ರಾಷ್ಟ್ರದ ಮಾನ್ಯತೆಯನ್ನು ಜೂನ್ 5ಕ್ಕೆ ಕೊನೆಗೊಳಿಸಲು ನಿರ್ಧರಿಸಲಾಗಿದೆ " ಎಂದು ಟ್ರಂಪ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಏಷ್ಯಾದ ರಾಷ್ಟ್ರದಿಂದ 5.6 ಶತಕೋಟಿ ಡಾಲರ್ಗಳಷ್ಟು ತೆರಿಗೆಯನ್ನು ರಫ್ತು ಮಾಡಲು ಅನುವು ಮಾಡಿಕೊಡುವ ಜಿಎಸ್ಪಿಯ ಅತಿ ದೊಡ್ಡ ಫಲಾನುಭವಿ ಭಾರತವಾಗಿದೆ. ಒಂದು ವೇಳೆ ಮಾನ್ಯತೆಯನ್ನು ಅಮೇರಿಕಾ ರದ್ದುಪಡಿಸಿದ್ದೆ ಆದಲ್ಲಿ 20ಕ್ಕೂ ಅಧಿಕ ಯುಎಸ್ ಸರಕುಗಳ ಮೇಲೆ ಹೆಚ್ಚಿನ ಆಮದು ತೆರಿಗೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೇ 3 ರಂದು ಅಮೇರಿಕಾ ಕಾಂಗ್ರೆಸ್ ನ 24 ಸದಸ್ಯರು ಜಿಎಸ್ಪಿ ಮಾನ್ಯತೆಯನ್ನು ರದ್ದುಗೋಳಿಸಬಾರದು ಎಂದು ಪತ್ರ ಬರೆದಿದ್ದರು.

Trending News