ನವದೆಹಲಿ: ವಾಟ್ಸಪ್ ಈಗ ತನ್ನ ಬಳಕೆದಾರರಿಗೆ ವಿಶಿಷ್ಟ ಅಪ್ಡೇಟ ನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ ನೀವು ಇನ್ನೊಬ್ಬರ ವಾಟ್ಸಪ್ನ ಡಿಸ್ಪ್ಲೇ ಪಿಕ್ಚರ್ ಅನ್ನು ಇನ್ನು ನೀವು ಸೇವ್ ಮಾಡಿಕೊಳ್ಳಲು ಸಾದ್ಯವಿಲ್ಲ ಎಂದು ತಿಳಿದುಬಂದಿದೆ.
📝 WhatsApp beta for iOS 2.19.60.26: what's new?https://t.co/hAd4RNkVRg
Improvements for album, audio converter (exporter), 'Save Profile Picture' option removed (😅) and other improvements!
— WABetaInfo (@WABetaInfo) May 30, 2019
ಇದನ್ನು ಈಗ ವಾಟ್ಸಪ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ಈ ಹಿಂದೆ ನಾವು ವಾಟ್ಸಪ್ ಬಳಕೆದಾರರ ಫೋಟೋವನ್ನು ಸೇವ್ ಮಾಡಿಕೊಳ್ಳುವ ಅಥವಾ ಸ್ಕ್ರೀನ್ ಶಾಟ್ ಮೂಲಕ ಅದನ್ನು ಸೇವ್ ಮಾಡಿಕೊಳ್ಳುವ ಆಯ್ಕೆ ಇತ್ತು.ವಾಬೀಟಾ ಇನ್ಫೋ ಪ್ರಕಾರ, ಹೊಸ 2.19.60 ಅಪ್ಡೇಟ್ ಈ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸುತ್ತಿದೆ. ಇದರಲ್ಲಿ ಬಳಕೆದಾರರ ಭದ್ರತೆ ಮತ್ತು ಖಾಸಗಿತನವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ವೈಶಿಷ್ಟವನ್ನು ಬಿಡುಗಡೆ ಮಾಡಿದೆ.
ಸದಾ ಒಂದಿಲ್ಲೊಂದು ವಿಶೇಷತೆಗಳನ್ನೂ ಬಿಡುಗಡೆ ಮಾಡುತ್ತಲೇ ಇರುವ ವಾಟ್ಸಪ್ ಈ ವೈಶಿಷ್ಟದ ಮೂಲಕ ಬಳಕೆದಾರರಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸಿದೆ.