ADITYA L1 LAUNCH: ಆದಿತ್ಯ ಉಪಗ್ರಹ ಯಶಸ್ಸಿಗೆ ಹಾರೈಸಿ ಯೋಗಪಟುಗಳಿಂದ ಸೂರ್ಯ ನಮಸ್ಕಾರ

ADITYA L1 LAUNCH: ಬಾಹ್ಯಾಕಾಶದಲ್ಲಿ ಸೂರ್ಯನ ಅಧ್ಯಯನ ನಡೆಸಲು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಯೋಜನೆಯ ಭಾಗವಾಗಿ ಇಂದು ಬೆಳಗ್ಗೆ 11.50ಕ್ಕೆ ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ PSLV-C57 ರಾಕೆಟ್‌ನಲ್ಲಿ Aditya L1 ಉಪಗ್ರಹವನ್ನು ಉಡಾವಣೆ ಮಾಡಲಿದೆ.

Written by - Zee Kannada News Desk | Last Updated : Sep 2, 2023, 11:30 AM IST
  • ಚಂದ್ರಯಾನ-3ರ ಬಳಿಕ ಸೂರ್ಯನ ಅಧ್ಯಯನಕ್ಕೆ ಆದಿತ್ಯ-L1 ಉಪಗ್ರಹ ಉಡಾವಣೆ ಮಾಡುತ್ತಿರುವ ISRO
  • ಈ ಸಂಶೋಧನಾ ಕಾರ್ಯ ಯಶಸ್ವಿಯಾಗಲೆಂದು ಚಾಮರಾಜನಗರದಲ್ಲಿ ಯೋಗಪಟುಗಳು ಸೂರ್ಯ ನಮಸ್ಕಾರ
  • ಇಂದು ಬೆಳಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಆದಿತ್ಯ-L1 ಉಡಾವಣೆ
ADITYA L1 LAUNCH: ಆದಿತ್ಯ ಉಪಗ್ರಹ ಯಶಸ್ಸಿಗೆ ಹಾರೈಸಿ ಯೋಗಪಟುಗಳಿಂದ ಸೂರ್ಯ ನಮಸ್ಕಾರ title=
ADITYA L1 LAUNCH

ಚಾಮರಾಜನಗರ: ಚಂದ್ರಯಾನ-3ರ ಬಳಿಕ ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯು(ISRO) ಸೂರ್ಯನ ಅಧ್ಯಯನ ನಡೆಸಲು ಆದಿತ್ಯ-L1 ಉಪಗ್ರಹ ಉಡಾವಣೆ ಮಾಡುತ್ತಿದೆ. ಈ ಸಂಶೋಧನಾ ಕಾರ್ಯ ಯಶಸ್ವಿಯಾಗಲೆಂದು ಚಾಮರಾಜನಗರದಲ್ಲಿ ಯೋಗಪಟುಗಳು ಸೂರ್ಯ ನಮಸ್ಕಾರ ಮಾಡಿ ಶುಭ ಹಾರೈಸಿದ್ದಾರೆ.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಚಾಮರಾಜನಗರದಲ್ಲಿ ಭಾರತಾಂಬೆಯ ಭಾವಚಿತ್ರ ಹಾಗೂ ಆದಿತ್ಯ-L1 ಉಪಗ್ರಹದ ಪ್ರತಿಕೃತಿಗೆ ಪುಷ್ಪಾರ್ಚನೆ ಸಲ್ಲಿಸಿ 108 ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದಿದ್ದಾರೆ. ಆದಿತ್ಯ-L1 ಉಪಗ್ರಹ ಯಶಸ್ವಿಯಾಗಿ ಉಡ್ಡಯನಗೊಂಡು ಸೂರ್ಯನತ್ತ ಯಾವುದೇ ಅಡೆತಡೆಗಳಿಲ್ಲದೇ ಪ್ರಯಾಣ ಬೆಳೆಸಿ ಸಂಶೋಧನೆಗೆ ಜಯವಾಗಲಿ ಎಂದು ಸೂರ್ಯನಿಗೆ ನಮಸ್ಕರಿಸಿದ್ದಾರೆ.

ಇದನ್ನೂ ಓದಿ: Bengaluru: ಇಸ್ರೋ ಯುವವಿಜ್ಞಾನಿಯ ಕಾರಿಗೆ ಕಲ್ಲೆಸೆತ; ಹಿಂಭಾಗದ ಗಾಜು ಪುಡಿ ಪುಡಿ!

ಇಸ್ರೋದಿಂದ ಸೂರ್ಯನ ಅಧ್ಯಯನ!

ಬಾಹ್ಯಾಕಾಶದಲ್ಲಿ ಸೂರ್ಯನ ಅಧ್ಯಯನ ನಡೆಸಲು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಯೋಜನೆಯ ಭಾಗವಾಗಿ ಇಂದು ಬೆಳಗ್ಗೆ 11.50ಕ್ಕೆ ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ PSLV-C57 ರಾಕೆಟ್‌ನಲ್ಲಿ Aditya L1 ಉಪಗ್ರಹವನ್ನು ಉಡಾವಣೆ ಮಾಡಲಿದೆ.

ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದೆ. ಈ Aditya L1 ಗಗನ ನೌಕೆ 120-125 ದಿನಗಳ ಬಳಿಕ ನಿಗದಿತ ಕಕ್ಷೆ ತಲುಪಲಿದೆ. Aditya L1 ಯೋಜನೆಯ ಅವಧಿ 4 ತಿಂಗಳಾಗಿದ್ದು, ಜನವರಿ ಮೊದಲ ವಾರದಲ್ಲಿ ಸೂರ್ಯಯಾನದ ನೌಕೆ L1ಗೆ ಸೇರುವ ನಿರೀಕ್ಷೆಯಿದೆ.

ಇದನ್ನೂ ಓದಿ: ಖಜಾನೆಗಳ ಆಗರ ಚಂದಿರ ! ಮಾನವ ನೆಲೆ ಇಲ್ಲಿ ಸಾಧ್ಯವೇ ? 'ಪ್ರಗ್ಯಾನ್ 'ಕಳುಹಿಸಿದ ಮಾಹಿತಿಯಿಂದ ವಿಶ್ವವೇ ಅಚ್ಚರಿ

ಸೂರ್ಯನ ಮೇಲಿರುವ ವಿವಿಧ ಪದರಗಳ ಸಂಶೋಧನೆ, ವಿದ್ಯುತ್ ಕಾಂತೀಯ ಸೇರಿ ಹಲವು ವಲಯಗಳ ಅಧ್ಯಯನ ಹಾಗೂ L1 ಪಾಯಿಂಟ್‌ನಲ್ಲಿ ಕಣಗಳ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೋ Aditya L1 ಗಗನ ನೌಕೆಯನ್ನು ಸೂರ್ಯನತ್ತ ಕಳುಹಿಸುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News