ಲೋಕಾಯುಕ್ತ ಅಧಿಕಾರಿ ಎಂದು ಸರ್ಕಾರಿ ನೌಕರರಿಗೆ ಲಕ್ಷಲಕ್ಷ ಪಂಗನಾಮ : ಖತರ್ನಾಕ್ ಅಂದರ್

ಲೋಕಾಯುಕ್ತ ಡಿವೈಎಸ್ ಪಿ ಎಂದು ಇಂಜಿನಿಯರ್ ಗಳಿಗೆ ಅಕ್ರಮ ಆಸ್ತಿ, ಕಳಪೆ ಕಾಮಗಾರಿ ಮಾಡಿದ್ದೀರಿ ಪಿಟಿಷನ್ ಬಂದಿದೆ ಟ್ರ್ಯಾಪ್ ಮಾಡ್ತೀವಿ ಎಂದು ಬೆದರಿಕೆ ಹಾಕ್ತಿದ್ದ. ಬಳಿಕ ಕೆಲವ್ರು ಭಯಪಟ್ಟು ಹಣ ಕೊಡಲು ಬಂದಾಗ ಸಹಚರ ಸಂತೊಷ್ ಮೂಲಕ ವಿಧಾನಸೌಧದ ಸುತ್ತಮುತ್ತ ಹಣ ಪಡೆದು ಸುಮ್ಮನಾಗ್ತಿದ್ದ.

Written by - VISHWANATH HARIHARA | Edited by - Krishna N K | Last Updated : Sep 1, 2023, 10:11 PM IST
  • ಲೋಕಾಯುಕ್ತ ಡಿವೈಎಸ್ ಪಿ ಎಂದು ಸರ್ಕಾರಿ ನೌಕರರಿಗೆ ಲಂಚ ಬೇಡಿಕೆ.
  • ಅಕ್ರಮ ಆಸ್ತಿ, ಕಳಪೆ ಕಾಮಗಾರಿ ಮಾಡಿದ್ದೀರಿ ಪಿಟಿಷನ್ ಬಂದಿದೆ ಎಂದು ಟ್ರ್ಯಾಪ್.
  • ಬೆದರಿಕೆ ಹಾಕಿ ಹಣ ಪಡೆಯುತ್ತಿದ್ದ ಬೆಳಗಾವಿ ಮೂಲದ ಆರೋಪಿ ವಿಶಾಲ್‌.
ಲೋಕಾಯುಕ್ತ ಅಧಿಕಾರಿ ಎಂದು ಸರ್ಕಾರಿ ನೌಕರರಿಗೆ ಲಕ್ಷಲಕ್ಷ ಪಂಗನಾಮ : ಖತರ್ನಾಕ್ ಅಂದರ್ title=

ಬೆಂಗಳೂರು : ಎಸಿಬಿ ಅಧಿಕಾರಿಯ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳನ್ನ ಬೆದರಿಸಿ ಹಣ ಪಡೆದು ಪೊಲೀಸ್ರಿಗೆ ಲಾಕ್ ಆಗ್ತಿದ್ದನ್ನ ನೋಡಿದ್ದೀರಿ. ಇದೀಗ ಎಸಿಬಿ ರದ್ದಾದ ಬಳಿಕ ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ವಂಚನೆ ಮಾಡೋದು ಹೆಚ್ಚಾಗಿದೆ. ಹೀಗೆ ಲೋಕಾಯುಕ್ತ ಡಿವೈಎಸ್ ಪಿ ಅಂತ ಬೆದರಿಕೆ ಹಾಕಿ ಹಣ ಪಡೆಯುತ್ತಿದ್ದ ಬೆಳಗಾವಿ ವಿಶಾಲ್ ಪಾಟೀಲ್ ಸ್ವಲ್ಪದಲ್ಲೇ ಪೊಲೀಸ್ರಿಂದ ತಪ್ಪಿಸಿಕೊಂಡಿದ್ದಾನೆ.

ಈ ಮಧ್ಯೆ ವಿಶಾಲ್ ಸಹಚರ ಸಂತೋಷ್ ಕೊಪ್ಪದ್ ಎಂಬಾತನ್ನ ವಿಧಾನಸೌಧ ಪೊಲೀಸ್ರು ಬಂಧಿಸಿದ್ದಾರೆ. ಬೆಳಗಾವಿಯ ಪ್ರಮುಖ ಆರೋಪಿ ವಿಶಾಲ್ ಪಾಟೀಲ್, ಎಸಿಬಿ ಅಧಿಕಾರಿ ಅಂತ ಸರ್ಕಾರಿ ಅಧಿಕಾರಿಗಳನ್ನ ಟಾರ್ಗೆಟ್ ಮಾಡ್ತಿದ್ದ. ಎಸಿಬಿ ರದ್ದಾಗ್ತಿದ್ದಂತೆ ಲೋಕಾಯುಕ್ತ ಡಿವೈಎಸ್ ಪಿ ಎಂದು ಇಂಜಿನಿಯರ್ ಗಳಿಗೆ ಅಕ್ರಮ ಆಸ್ತಿ, ಕಳಪೆ ಕಾಮಗಾರಿ ಮಾಡಿದ್ದೀರಿ ಪಿಟಿಷನ್ ಬಂದಿದೆ ಟ್ರ್ಯಾಪ್ ಮಾಡ್ತೀವಿ ಎಂದು ಬೆದರಿಕೆ ಹಾಕ್ತಿದ್ದ.

ಇದನ್ನೂ ಓದಿ: ತಮಿಳುನಾಡಿನ ವಿರುದ್ಧ ವಾದ ಮಾಡದೇ ನಮ್ಮ ರೈತರನ್ನು ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿದೆ : ಬೊಮ್ಮಾಯಿ

ಬಳಿಕ ಕೆಲವ್ರು ಭಯಪಟ್ಟು ಹಣ ಕೊಡಲು ಬಂದಾಗ ಸಹಚರ ಸಂತೊಷ್ ಮೂಲಕ ವಿಧಾನಸೌಧದ ಸುತ್ತಮುತ್ತ ಹಣ ಪಡೆದು ಸುಮ್ಮನಾಗ್ತಿದ್ದ.. ಇತ್ತೀಚೆಗೆ ಕುಷ್ಟಗಿ ಮತ್ತು ಲಿಂಗಸೂರು ಭಾಗದ ಇಂಜಿನಿಯರ್ ಗಳಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಟ್ಟರೆ ನಿಮ್ಮ ಮೇಲಿನ ಕೇಸ್ ಕ್ಲೋಸ್ ಮಾಡ್ತೀವಿ ಅಂತ ಬೆಂಗಳೂರಿಗೆ ಕರೆಸಿಕೊಂಡಿದ್ದ. ಇದೇ ವೇಳೆ ನಕಲಿ ಅಂತ ತಿಳಿದು ಲೋಕಾಯುಕ್ತರಿಗೆ ದೂರು ಕೊಟ್ಟಿದ್ರು.

ವಿಧಾನಸೌಧ ಪೊಲೀಸ್ ಠಾಣೆಗೆ ಲೋಕಾಯುಕ್ತ ಅಧಿಕಾರಿ ದೂರು ಕೊಟ್ಟಿದ್ರು. ಇಂಜಿನಿಯರ್ ನಂತೆ ಪೊಲೀಸ್ರು ಹಣ ಕೊಡಲು ಹೋದಾಗ ಪ್ರಮು ಆರೋಪಿ ಎಸ್ಕೇಪ್ ಆಗಿದ್ದಾನೆ. ಶಿಷ್ಯ ಸಂತೋಷ್ ಸಿಕ್ಕಿಬಿದ್ದಿದ್ದಾನೆ. ಸದ್ಯ ಪ್ರಮುಖ ಆರೊಪಿ ವಿಶಾಲ್ ಪಾಟೀಲ್ ಗಾಗಿ ಪೊಲೀಸ್ರು ಹುಡುಕಾಟ ನಡೆಸ್ತಿದ್ದಾರೆ.

ಇದನ್ನೂ ಓದಿ: ಮಿಳುನಾಡಿಗೆ ಕಾವೇರಿ ನೀರು : ತಲೆ ಕೆಳಗಾಗಿ ನಿಂತು ಪ್ರತಿಭಟನೆ

ಹೀಗೆ ಊರಿಗೆ ಹೋದ ಪೊಲೀಸ್ರಿಗೆ ಆರೋಪಿಯ ಐಷಾರಾಮಿ ಜೀವನದ ಬಗ್ಗೆ ಗೊತ್ತಾಗಿದೆ. ಊರಲ್ಲಿ ಕಂಟ್ರಾಕ್ಟರ್ ಅಂತ ಹೇಳ್ಕಂಡಿದ್ದ ಆರೋಪಿ ಐಷಾರಾಮಿ ಮನೆ ಕಟ್ಟಿಸಿಕೊಂಡು ಬಿಲ್ಡಪ್ ಕೊಟ್ಟು ಓಡಾಡಿಕೊಂಡಿದ್ದ. ಸದ್ಯ ಆಸಾಮಿಯ ಅಸಲಿಯತ್ತು ಬಯಲಾಗಿದ್ದು, ಬಂಧನದ ಬಳಿಕ ಇನ್ನಷ್ಟು ಅಕ್ರಮ ಬಯಲಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News