ಬೆಂಗಳೂರು : Dhana Rajayoga Effects on Zodiac Sign : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನ ರಾಜ ಯೋಗ ಅತ್ಯಂತ ಶುಭ ಯೋಗವಾಗಿದೆ. ಯಾರ ಜಾತಕದಲ್ಲಿ ಈ ಶುಭ ಯೋಗ ಇರುವುದೋ ಅವರ ಅದೃಷ್ಟವೇ ಬದಲಾಗಿ ಬಿಡುತ್ತದೆ. ಸೂರ್ಯ ಸಿಂಹ ರಾಶಿಗೆ ಪ್ರವೇಶವಾಗುತ್ತಿದ್ದಂತೆಯೇ ಧನ ರಾಜ ಯೋಗ ನಿರ್ಮಾಣವಾಗಿದೆ. ಈ ಯೋಗ ಜೀವನದಲ್ಲಿ ಧನ ಸಂಪತ್ತು, ಸಮೃದ್ದಿ ಸಮ್ಮಾನವನ್ನು ಹೆಚ್ಚಿಸುತ್ತದೆ. ಈ ಧನ ರಾಜಯೋಗದ ಪ್ರಭಾವ ದ್ವಾದಶ ರಾಶಿಯವರ ಜೀವನದ ಮೇಲೆಯೂ ಬೀಳುವುದು. ಅದರಲ್ಲಿಯೂ ಮೂರು ರಾಶಿಯವರಿ ಈ ಯೋಗದ ವಿಶೇಷ ಫಲವನ್ನು ಪಡೆಯುತ್ತಾರೆ.
ಈ ರಾಶಿಯವರ ಮೇಲೆ ಧನರಾಜಯೋಗದ ಶುಭ ಫಲ :
ಮೇಷ ರಾಶಿ : ಧನರಾಜಯೋಗವು ಮೇಷ ರಾಶಿಯವರಿಗೆ ಭಾರೀ ಲಾಭವನ್ನು ತಂದಿದೆ. ಈ ರಾಶಿಯವರಿಗೆ ವಿಶೇಷ ಫಲ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೂ ಒಳ್ಳೆಯ ಸುದ್ದಿ ಸಿಗಬಹುದು. ವೃತ್ತಿ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ಈ ಧನ ಯೋಗ ಆದಾಯವನ್ನು ಹೆಚ್ಚಿಸುತ್ತದೆ. ಖ್ಯಾತಿಯನ್ನೂ ನೀಡುತ್ತದೆ.
ಇದನ್ನೂ ಓದಿ : ಈ ರಾಶಿಯವರಿಗೆ ಗುರು ದೆಸೆ ! ಹರಿದು ಬರುವುದು ಧನಸಂಪತ್ತು , ಮುಂದಿನ ಬದುಕು ಬಂಗಾರ
ವೃಷಭ ರಾಶಿ : ಧನ ರಾಜಯೋಗ ಸೃಷ್ಟಿಯಾಗುವುದರಿಂದ ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ. ಹೂಡಿಕೆಗಳು ಲಾಭ ತರುತ್ತದೆ. ಕೆಲವು ಹಣಕಾಸಿನ ಹೊರೆಗಳಿಂದ ಮುಕ್ತರಾಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಮನ್ನಣೆ ಹೆಚ್ಚಾಗುವ ಸಾಧ್ಯತೆಯಿದೆ. ತೊಂದರೆ ನೀಡುತ್ತಿರುವ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಬಹುದು. ಉದ್ಯೋಗದ ಆಫರ್ಗಳೂ ಬರಬಹುದು.
ಸಿಂಹ ರಾಶಿ : ಸಿಂಹ ರಾಶಿಯವರ ಮೇಲೆ ಧನಯೋಗದ ಪರಿಣಾಮ ಸ್ವಲ್ಪ ಹೆಚ್ಚೇ ಇರುತ್ತದೆ. ಸೂರ್ಯನು ನಿಮ್ಮ ರಾಶಿಗೆ ಪ್ರವೇಶವಾಗಿರುವುದರಿಂದ ಧನ ರಾಜಯೋಗದ ಸಂಪೂರ್ಣ ಶುಭ ಫಲ ಸಿಗುತ್ತದೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ರಾಜಕೀಯದಲ್ಲಿ ತೊಡಗಿರುವವರಿಗೆ ಈ ಸಮಯ ವಿಶೇಷವಾಗಿ ಅನುಕೂಲಕರವಾಗಿರಲಿದೆ. ಹೊಸ ಸಂಪರ್ಕಗಳಿಂದ ಪ್ರಯೋಜನ ಪಡೆಯುತ್ತೀರಿ. ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಹೋಗಬಹುದು.
ಇದನ್ನೂ ಓದಿ : Raksha Bandhan 2023: ಶ್ರಾವಣ ಪೂರ್ಣಿಮೆಯಂದು ಈ ವಸ್ತುವನ್ನು ಮನೆಗೆ ತಂದರೆ ನೀವು ಶ್ರೀಮಂತರಾಗುತ್ತೀರಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.