KL Rahul: ಅಕ್ಟೋಬರ್ 5 ರಿಂದ ಪ್ರಾರಂಭವಾಗುವ 2023 ರ ವಿಶ್ವಕಪ್’ಗೆ ಕೆಎಲ್ ರಾಹುಲ್ ಅವರನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಟೀಮ್ ಮ್ಯಾನೇಜ್‌ಮೆಂಟ್ ಪ್ರಕಾರ, ಕೆಎಲ್ ರಾಹುಲ್ 2023 ರ ವಿಶ್ವಕಪ್’ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಭಾರತದ ಪ್ಲೇಯಿಂಗ್ XI ನಲ್ಲಿ ಆಡಲು ಪ್ರಬಲ ಸ್ಪರ್ಧಿಯಾಗಲಿದ್ದಾರೆ.
ಕೆಎಲ್ ರಾಹುಲ್ ಇತ್ತೀಚೆಗೆ 2023 ರ ಏಷ್ಯಾ ಕಪ್ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಇದು ಆಗಸ್ಟ್ 30 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಸೆಪ್ಟೆಂಬರ್ 17 ರಂದು ನಡೆಯಲಿದೆ. ಒಂದು ವೇಳೆ ಏಷ್ಯಾಕಪ್’ನಲ್ಲಿ ಕೆಎಲ್ ರಾಹುಲ್ ವಿಫಲತೆ ಕಂಡರೆ 2023ರ ವಿಶ್ವಕಪ್ ತಂಡದಿಂದ ಅವರನ್ನು ಹೊರಗಿಡುವ ಸಾಧ್ಯತೆ ಹೆಚ್ಚಿದೆ. ಅಂತಹ ಪರಿಸ್ಥಿತಿಯಲ್ಲಿ, ಭಾರತಕ್ಕೆ ಮೂವರು ವಿಕೆಟ್-ಕೀಪರ್ ಕಂ ಬ್ಯಾಟ್ಸ್‌ಮನ್’ಗಳ ಆಯ್ಕೆಯಿದ್ದು, ಅವರಲ್ಲಿ ಒಬ್ಬರನ್ನು ರಾಹುಲ್ ಬದಲಿಯಾಗಿ ತಂಡಕ್ಕೆ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ: 1983ರ ವಿಶ್ವಕಪ್ ಜೊತೆ ಕಪಿಲ್ ವಿಶ್ವದಾಖಲೆ ಬರೆಯಲು ಬಳಸಿದ ಬ್ಯಾಟ್ ಯಾವುದು ಗೊತ್ತಾ?
1. ಇಶಾನ್ ಕಿಶನ್:
2023ರ ವಿಶ್ವಕಪ್’ನಲ್ಲಿ ಕೆಎಲ್ ರಾಹುಲ್ ಸ್ಥಾನವನ್ನು ಇಶಾನ್ ಕಿಶನ್ ಕಸಿದುಕೊಳ್ಳುವ ಸಾಧ್ಯತೆ ಇದೆ. ಎಡಗೈ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರನ್ನು ಕೆಎಲ್ ರಾಹುಲ್’ಗಿಂತ ಹೆಚ್ಚು ಡೇಂಜರಸ್ ಆಟಗಾರ ಎಂದು ಪರಿಗಣಿಸಲಾಗಿದೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ದ್ವಿಶತಕ ಸಿಡಿಸಿದ ದಾಖಲೆಯನ್ನೂ ಇವರು ಹೊಂದಿದ್ದಾರೆ. ವಿಕೆಟ್ ಕೀಪಿಂಗ್ ಜೊತೆಗೆ ಇಶಾನ್ ಕಿಶನ್ ಓಪನಿಂಗ್ ಕೂಡ ಮಾಡುತ್ತಾರೆ. ಇದಲ್ಲದೆ ಮಧ್ಯಮ ಕ್ರಮಾಂಕದಲ್ಲೂ ಬ್ಯಾಟ್ ಬೀಸುವ ಶಕ್ತಿ ಅವರಿಗಿದೆ. ಇಶಾನ್ ಕಿಶನ್ 17 ODIಗಳಲ್ಲಿ 46.27 ಸರಾಸರಿಯಲ್ಲಿ 1 ಶತಕ, 6 ಅರ್ಧ ಶತಕ ಮತ್ತು 1 ದ್ವಿಶತಕ ಸೇರಿದಂತೆ 694 ರನ್ ಗಳಿಸಿದ್ದಾರೆ.
2. ಸಂಜು ಸ್ಯಾಮ್ಸನ್:
ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟ್ಸ್‌ಮನ್. ಐಪಿಎಲ್’ನಲ್ಲಿ ಇದುವರೆಗೆ 3 ಶತಕಗಳನ್ನು ಗಳಿಸಿದ್ದಾರೆ. ಆದರೆ ಅನೇಕ ಬಾರಿ ಸ್ಯಾಮ್ಸನ್ ಅವರನ್ನು ಸಮಿತಿಯು ನಿರ್ಲಕ್ಷಿಸಿದೆ. ಇಶಾನ್ ಕಿಶನ್ 13 ODIಗಳಲ್ಲಿ 55.71 ಸರಾಸರಿಯಲ್ಲಿ 390 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್’ನಲ್ಲಿ ಸಂಜು ಸ್ಯಾಮ್ಸನ್ ಅವರ ಅತ್ಯುತ್ತಮ ಸ್ಕೋರ್ 86 ರನ್. ಸಂಜು ಸ್ಯಾಮ್ಸನ್ ಆರಂಭಿಕರಿಂದ 6ನೇ ಕ್ರಮಾಂಕದವರೆಗೆ ಎಲ್ಲಿ ಬೇಕಾದರೂ ಬ್ಯಾಟ್ ಮಾಡಬಲ್ಲ ಸಾಮಾರ್ಥ್ಯ ಹೊಂದಿದ್ದಾರೆ. ಏಷ್ಯಾಕಪ್’ನಲ್ಲಿ ಕೆಎಲ್ ರಾಹುಲ್ ಸೋಲನುಭವಿಸಿದರೆ, 2023 ರ ವಿಶ್ವಕಪ್ ತಂಡದಲ್ಲಿ ಅವರ ಸ್ಥಾನಕ್ಕೆ ಸಂಜು ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ವಿಶ್ವಕಪ್ 2023 ಆಡಬೇಕಾದರೆ ಟೀಂ ಇಂಡಿಯಾ ಆಟಗಾರರು ಈ ಪರೀಕ್ಷೆ ಪಾಸ್ ಆಗಲೇಬೇಕು!
3. ಜಿತೇಶ್ ಶರ್ಮಾ:
ಐಪಿಎಲ್ 2023ರ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರು ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ಭಾರತದ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ. ಜಿತೇಶ್ ಶರ್ಮಾ ಅವರು ಐರ್ಲೆಂಡ್ ಪ್ರವಾಸದಲ್ಲಿ ಒಂದೇ ಒಂದು ಪಂದ್ಯವನ್ನು ಆಡದೇ ಇರಬಹುದು, ಆದರೆ ಭವಿಷ್ಯದಲ್ಲಿ ಅವರನ್ನು 2023 ರ ವಿಶ್ವಕಪ್ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಸೇರಿಸಿಕೊಳ್ಳುವ ಎಲ್ಲಾ ಲಕ್ಷಣಗಳಿವೆ. ಪಂಜಾಬ್ ಕಿಂಗ್ಸ್ ಫಿನಿಶರ್ ಜಿತೇಶ್ ಶರ್ಮಾ ಸುದೀರ್ಘ ಸಿಕ್ಸರ್ ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು. 26 ಐಪಿಎಲ್ ಪಂದ್ಯಗಳಲ್ಲಿ 159.24 ಸ್ಟ್ರೈಕ್ ರೇಟ್’ನಲ್ಲಿ 543 ರನ್ ಗಳಿಸಿದ್ದಾರೆ. ಇದರಲ್ಲಿ 33 ಸಿಕ್ಸರ್ ಮತ್ತು 44 ಬೌಂಡರಿಗಳನ್ನು ಬಾರಿಸಿದ್ದಾರೆ. ಇನ್ನು 90 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 9 ಅರ್ಧಶತಕ ಸೇರಿದಂತೆ 2096 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್