Govt officer raped minior : ದೆಹಲಿಯಲ್ಲಿ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಭಯಾನಕ ಘಟನೆಗಳು ಬಯಲಿಗೆ ಬರುತ್ತಲೇ ಇವೆ. ಸಧ್ಯ ದೆಹಲಿ ಸರ್ಕಾರಿ ಅಧಿಕಾರಿಯೊಬ್ಬರು ತನ್ನ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರುವ ಭೀಕರ ಘಟನೆಯೊಂದು ವರದಿಯಾಗಿದೆ.
ಹೌದು.. ಆರೋಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಎಂದು ಹೇಳಲಾಗಿದ್ದು, ಈ ಸರ್ಕಾರಿ ಅಧಿಕಾರಿಯ ಅಪರಾಧವನ್ನು ಮರೆಮಾಚಲು ಪತ್ನಿಯೂ ಸಹಾಯಕ್ಕೆ ಬಂದಿದ್ದಳು ಎನ್ನವುದು ತನಿಖೆ ವೇಳೆ ಬಯಲಾಗಿದೆ. ಅಲ್ಲದೆ, ಬಾಲಕಿಗೆ ಗರ್ಭಪಾತವಾಗದಂತೆ ಮಾತ್ರೆಗಳನ್ನು ನೀಡಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ತಂದೆಯ ಹುಟ್ಟುಹಬ್ಬದಂದು ಲಡಾಖ್ ಗೆ ಬೈಕ್ ಸವಾರಿ ಹೊರಟ ರಾಹುಲ್ ಗಾಂಧಿ..!
ಘಟನೆಯ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ಆರೋಪಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ (ಡಬ್ಲ್ಯುಸಿಡಿ) ಪ್ರಮುಖ ಹುದ್ದೆಯಲ್ಲಿದ್ದು, ತಪ್ಪಿತಸ್ಥರೆಂದು ಕಂಡುಬಂದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಷಯದಲ್ಲಿ ಔಪಚಾರಿಕ ದೂರು ದಾಖಲಾಗಿದೆ, ಕಾನೂನು ಕ್ರಮ ಕೈಗೊಳ್ಳಲಾಗುವುದು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಗಾಗಿ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರವು ಪರಿಹರಿಸುತ್ತದೆ ಎಂದು ದೆಹಲಿ ಸರ್ಕಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ಆರೋಪ ನಿಜವಾದ್ದರೆ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದೆ.
ಇದನ್ನೂ ಓದಿ: ಅಯೋಧ್ಯೆಗೆ ಇಂದು ಸಿಎಂ ಯೋಗಿ ಭೇಟಿ: ಮಂದಿರ ನಿರ್ಮಾಣ ಕಾಮಗಾರಿ ಪರಿಶೀಲನೆ
ಈ ಘಟನೆಯನ್ನು ದೆಹಲಿ ಪೊಲೀಸರು ಭಾನುವಾರ ಬಹಿರಂಗಪಡಿಸಿದ್ದಾರೆ. ಹದಿಹರೆಯದ ಬಾಲಕಿಯ ಮೇಲೆ ಡಬ್ಲ್ಯುಸಿಡಿ ಅಧಿಕಾರಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಷ್ಟರಲ್ಲಿ ಬಾಲಕಿ ಗರ್ಭಿಣಿಯಾಗಿದ್ದಳು. ಪೊಲೀಸರ ಪ್ರಕಾರ, ಆತನ ಪತ್ನಿಯೇ ಗರ್ಭಪಾತಕ್ಕೆ ಮಾತ್ರೆಗಳನ್ನು ನೀಡಿದ್ದಳು. ನವೆಂಬರ್ 2020 ಮತ್ತು ಜನವರಿ 2021 ರ ನಡುವೆ ಡಬ್ಲ್ಯುಸಿಡಿ ಅಧಿಕಾರಿ ತನ್ನ ಸ್ನೇಹಿತನ ಮಗಳ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಗರ್ಭಪಾತಕ್ಕೆ ಮದ್ದು ನೀಡಿದ ಆರೋಪದ ಮೇಲೆ ಈ ಅಧಿಕಾರಿಯ ಪತ್ನಿಯನ್ನು ಆರೋಪಿಯಾಗಿ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 2020 ರಲ್ಲಿ ವಿದ್ಯಾರ್ಥಿಯ ತಂದೆಯ ಮರಣದ ನಂತರ ಈ ಘಟನೆಗಳು ಪ್ರಾರಂಭವಾದವು. ಈ ಅವಧಿಯಲ್ಲಿಯೇ ಆರೋಪಿ ಬಾಲಕಿಯ ಪರಿಸ್ಥಿತಿಯ ಲಾಭ ಪಡೆದು ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಹುಡುಗಿ ಗರ್ಭಿಣಿಯಾದಾಗ, ಅವಳು ತಪ್ಪಿತಸ್ಥ ಅಧಿಕಾರಿಯ ಹೆಂಡತಿಗೆ ಘಟನೆಯನ್ನು ಬಹಿರಂಗಪಡಿಸಿದಳು, ಆದ್ರೆ ಆಕೆ ಗರ್ಭಪಾತ ಮಾತ್ರೆಗಳನ್ನು ಖರೀದಿಸಿ ಹುಡುಗಿಗೆ ನೀಡಿದರು.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಕಟ್ಟಿಹಾಕಲು 'ಕರ್ನಾಟಕ'ದ ಪ್ಲಾನ್ ಸಿದ್ದಪಡಿಸಿದ ಕಾಂಗ್ರೆಸ್
ಕಿರುಕುಳಕ್ಕೊಳಗಾದ ಹುಡುಗಿ 2021 ರ ಜನವರಿಯಲ್ಲಿ ತನ್ನ ತಾಯಿಯ ನಿವಾಸಕ್ಕೆ ಮರಳಿದಳು. ಆಗಸ್ಟ್ನಲ್ಲಿ ತೀವ್ರ ಆರೋಗ್ಯ ಸಮಸ್ಯೆಯಿಂದಾಗಿ ಸೇಂಟ್ ಸ್ಟೀಫನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಆಪ್ತಸಮಾಲೋಚನೆ ನಡೆಸುತ್ತಿದ್ದಾಗ ಆಕೆ ತನಗಾದ ಸಂಕಷ್ಟವನ್ನು ಧೈರ್ಯವಾಗಿ ಬಹಿರಂಗಪಡಿಸಿದ್ದಾಳೆ.
ಬಾಲಕಿಯ ಬಹಿರಂಗಪಡಿಸಿದ ನಂತರ, ಆಸ್ಪತ್ರೆಯ ಅಧಿಕಾರಿಗಳು ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಬಾಲಕಿಯ ಹೇಳಿಕೆ ಇನ್ನೂ ನಡೆದಿಲ್ಲ. ಪ್ರಸ್ತುತ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.