ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ಜೈಲು ಸೇರಿದ್ದ. ಹಾಯ್ ಬೆಂಗಳೂರು ಸಂಸ್ಥಾಪಕ ಹಾಗೂ ಸಂಪಾದಕ ರವಿ ಬೆಳಗೆರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ.
ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಮಧುಸೂದನ್. ಬಿ. ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಎಸಿಎಂಎಂ ನ್ಯಾಯಾಲಯ ಸೋಮವಾರ ರವಿ ಬೆಳಗೆರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಜೈಲು ಸೇರಿದ್ದರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರವಿ ಬೆಳಗೆರೆ ಅವರಿಗೆ ಜಾಮೀನು ನೀಡಬೇಕೆಂದು ಕೋರಿ ರವಿ ಬೆಳಗೆರೆ ಪರ ವಕೀಲರು ಮನವಿ ಮಾಡಿದ್ದರು. ಅದರ ಪ್ರಕಾರ ಸೆಷನ್ಸ್ ಕೋರ್ಟ್ ಷರತ್ತು ಬದ್ಧ ಜಾಮೀನನ್ನು ನೀಡಿದೆ.
ಜಾಮೀನು ಮಂಜೂರು ಮಾಡುವಾಗ ರವಿಬೆಳಗೆರೆಗೆ ಹಾಕಲಾದ ಷರತ್ತುಗಳು...
* ಯಾವುದೇ ರೀತಿಯಲ್ಲಿ ಪ್ರಕರಣದ ಸಾಕ್ಷ್ಯವನ್ನು ಬೆದರಿಕೆ ಹಾಕಬಾರದು ಅಥವಾ ನಾಶ ಮಾಡಬಾರದು.
* ಪ್ರಕರಣದ ತನಿಖೆಗೆ ಸರಿಯಾಗಿ ಸಹಕಾರ ನೀಡಬೇಕು.
* 1 ಲಕ್ಷ ಭದ್ರತಾ ಠೇವಣಿ ಮತ್ತು ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಲಾಗಿದೆ.