Tribulus Terrestris Health Benefits: ನೆಗ್ಗಿಲ ಮುಳ್ಳಿನ ಆರೋಗ್ಯ ಪ್ರಯೋಜನಗಳು

Tribulus Terrestris Health Benefits: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಮ ಪ್ರಮಾಣದಲ್ಲಿ ನೆಗ್ಗಿಲ ಮುಳ್ಳಿನ ಪುಡಿ, ಅಮೃತಬಳ್ಳಿ ಪುಡಿ ಮತ್ತು ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಅರ್ಧ ಚಮಚ ತುಪ್ಪ ಹಾಗೂ ಕಾಲು ಚಮಚ ಜೇನುತುಪ್ಪದ ಜೊತೆಗೆ ಮಿಶ್ರಣ ಮಾಡಿ ಸೇವಿಸಬೇಕು.

Tribulus Terrestris Health Benefits: ನೆಗ್ಗಿಲ ಮುಳ್ಳು ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇದು ಔಷಧೀಯ ಗಿಡವಾಗಿದ್ದು, ನಮ್ಮ ಆರೋಗ್ಯ ಲಾಭಕ್ಕಾಗಿ ಪ್ರಕೃತಿ ನೀಡಿರುವ ಅದ್ಭುತ ಕೊಡುಗೆಯಾಗಿದೆ. ನೆಗ್ಗಿಲ ಮುಳ್ಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಮ ಪ್ರಮಾಣದಲ್ಲಿ ನೆಗ್ಗಿಲ ಮುಳ್ಳಿನ ಪುಡಿ, ಅಮೃತಬಳ್ಳಿ ಪುಡಿ ಮತ್ತು ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಅರ್ಧ ಚಮಚ ತುಪ್ಪ ಹಾಗೂ ಕಾಲು ಚಮಚ ಜೇನುತುಪ್ಪದ ಜೊತೆಗೆ ಮಿಶ್ರಣ ಮಾಡಿ ಸೇವಿಸಬೇಕು.

2 /5

ಗರ್ಭಿಣಿಯರಿಗೆ ಮೂತ್ರ ಸರಿಯಾಗಿ ಆಗದಿದ್ದರೆ ನೆಗ್ಗಿಲ ಮುಳ್ಳಿನ ಕಷಾಯಕ್ಕೆ ಹಾಲು ಮತ್ತು ಸಕ್ಕರೆ ಬೆರೆಸಿ ಕುಡಿದರೆ ಲಾಭದಾಯಕ. ಒಣ ಕೆಮ್ಮು ಇದ್ದಲ್ಲಿ ಹಾಲಿಗೆ ನೆಗ್ಗಿಲ ಮುಳ್ಳಿನ ಪುಡಿ, ಅಶ್ವಗಂಧ ಪುಡಿ ಮತ್ತು ಹಸುವಿನ ತುಪ್ಪ ಸೇರಿಸಿ ಕುಡಿದರೆ ಕೆಮ್ಮು ಶಮನವಾಗುತ್ತದೆ.

3 /5

ಮೇಕೆ ಹಾಲಿಗೆ ನೆಗ್ಗಿಲ ಮುಳ್ಳಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸಿದರೆ ಕಿಡ್ನಿಕಲ್ಲು ಕರಗುತ್ತದೆ. ಕೆಮ್ಮು, ದಮ್ಮು ಹೆಚ್ಚಿದ್ದರೆ ನೆಗ್ಗಿಲ ಮುಳ್ಳಿನ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದ್ರೆ ಶಮನವಾಗುತ್ತದೆ.

4 /5

ದೇಹದ ಯಾವುದೇ ಭಾಗದಲ್ಲಿ ನೀರು ತುಂಬಿ ಊತ ಇದ್ದರೆ ನೆಗ್ಗಿಲ ಮುಳ್ಳಿನ ಪುಡಿಯನ್ನು ನೀರಿನ ಜೊತೆಗೆ ಕಷಾಯ ಮಾಡಿ ಕುಡಿದರೆ ಊತ ಕಡಿಮೆಯಾಗುತ್ತದೆ. ದೇಹದಲ್ಲಿ ಗಾಯವಾಗಿದ್ದರೆ ನೆಗ್ಗಿಲ ಮುಳ್ಳಿನ ಎಲೆಗಳನ್ನು ಪೇಸ್ಟ್‌ ಮಾಡಿ ಕಟ್ಟಿದರೆ ಬೇಗ ವಾಸಿಯಾಗುತ್ತದೆ.

5 /5

ಹಾಲಿಗೆ ನೆಗ್ಗಿಲ ಮುಳ್ಳಿನ ಪುಡಿ ಮತ್ತು ಸಕ್ಕರೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ಮೂತ್ರ ಮಾಡುವಾಗ ನೋವಿದ್ದರೆ ಆ ನೋವು ನಿವಾರಣೆಯಾಗುತ್ತದೆ. ನೆಗ್ಗಿಲ ಮುಳ್ಳು ಪುಡಿಗೆ ಶುಂಠಿ ಹಾಕಿ ಕಷಾಯ ಮಾಡಿ ಸೇವಿಸಿದ್ರೆ ಮಂಡಿ ಊತ ಮತ್ತು ನೋವು ಗುಣವಾಗುತ್ತದೆ.