ಬೆಂಗಳೂರು: 77ನೇ ಸ್ವಾತಂತ್ರ್ಯ ದಿನಾಚರಣೆಗೆ ಕೌಂಟ್ಡೌನ್ ಶುರುವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಲ್ಲೂ ಸ್ವಾತಂತ್ರ್ಯದ ಸಂಭ್ರಮಾಚರಣೆಗೆ ಭರ್ಜರಿಯಾಗಿ ಸಿದ್ಧತೆ ನಡೆದಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ಮಾಣಿಕ್ ಷಾ ಪರೇಡ್ ಮೈದಾನ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಎಂದಿನಂತೆ ಈ ಬಾರಿ ಕೂಡ ವಿವಿಧ ತಂಡಗಳ ಆಕರ್ಷಕ ಪರೇಡ್ ಮತ್ತು ಇನ್ನಿತರ ತಾಲೀಮು ನೋಡುಗರ ಕಣ್ಮನ ಸೆಳೆಯಲಿದೆ.
ಆಗಸ್ಟ್ ತಿಂಗಳು ಬಂತು ಅಂದ್ರೆ ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಗೆ ಸಿದ್ಧತೆ ಜೋರಾಗುತ್ತೆ. ಅದೇ ರೀತಿ ಈ ಬಾರಿ 77ನೇ ಸ್ವಾತಂತ್ರ್ಯ ದಿನಾಚರಣೆಗೆ ಕೌಂಟ್ಡೌನ್ ಶುರುವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಸಿದ್ಧತೆಗಳು ಭರ್ಜರಿಯಾಗಿ ಸಾಗಿವೆ. ಆಗಸ್ಟ್ 15 ರಂದು ಬೆಳಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದು, ಇದಕ್ಕಾಗಿ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ಸ್ವಾತಂತ್ರ್ಯೋತ್ಸವದ ಪ್ರಮುಖ ಆಕರ್ಷಣೆಯಾದ ಪರೇಡ್ಗೆ 3 ಹಂತಗಳಲ್ಲಿ ರಿಹರ್ಸಲ್ ನಡೆಯುತ್ತಿದ್ದು, ಇಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪೊಲೀಸ್ ಆಯುಕ್ತರಾದ ದಯಾನಂದ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಪರೇಡ್ ರಿಹರ್ಸಲ್ನಲ್ಲಿ ಭಾಗಿಯಾಗಿ ಸಿದ್ಧತೆಗಳನ್ನ ಪರಿಶೀಲಿಸಿದ್ರು.
ಇದನ್ನೂ ಓದಿ: ಕೈ-ದಳ ನಡುವೆ ನಿವೇಶನ ಹಂಚಿಕೆ ಒಪ್ಪಂದ?..ತುಮಕೂರಿನಲ್ಲಿ ನಿಲ್ಲದ ಹಾಲಿ-ಮಾಜಿ ಶಾಸಕರ ಟಾಕ್ ವಾರ್..!
ಇನ್ನು ಈ ಬಾರಿ ಸ್ವಾತಂತ್ರ್ಯೋತ್ಸವ ಪರೇಡ್ನಲ್ಲಿ ಒಟ್ಟು 38 ತುಕಡಿಗಳಿಂದ ಸುಮಾರು 1,350 ಮಂದಿ ಭಾಗಿಯಾಗಲಿದ್ದು, ಈ ಬಾರಿ ಗೋವಾ ಪೊಲೀಸರ ವಿಶೇಷ ತಂಡ ಕೂಡ ಪರೇಡ್ನಲ್ಲಿ ಭಾಗಿಯಾಗಲಿದೆ. KSRP,BSF, CAR,ಟ್ರಾಫಿಕ್ ಪೊಲೀಸ್, ಡಾಗ್ ಸ್ಕ್ವಾಡ್, ಪೊಲೀಸ್ ಬ್ಯಾಂಡ್ ಸೇರಿದಂತೆ ವಿವಿಧ ತಂಡಗಳು ಗೌರವ ರಕ್ಷೆ ಸ್ವೀಕರಿಸಲಿದ್ದು, ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಗಳನ್ನ ನಡೆಸಿಕೊಡಲಿದ್ದಾರೆ. ಇನ್ನು ಭದ್ರತಾ ದೃಷ್ಟಿಯಿಂದ ಮೈದಾನದ ಸುತ್ತ 100 ಸಿಸಿಟಿವಿ ಅಳವಡಿಸಲಾಗಿದ್ದು, 2 ಬ್ಯಾಗೇಜ್ ಸ್ಕ್ಯಾನರ್ಗಳನ್ನ ಅಳವಡಿಸಲಾಗಿದೆ. ಅಲ್ಲದೇ ಕಾರ್ಯಕ್ರಮಕ್ಕೆ ಬರುವವರಿಗೆ ಕಾರ್ಯಕ್ರಮ ನಡೆಯುವ ಜಾಗದಲ್ಲಿ ಮೊಬೈಲ್ ಬಳಕೆಯನ್ನ ಕೂಡ ನಿಷೇಧ ಮಾಡಲಾಗಿದೆ.
ಆಗಸ್ಟ್ 15ನೇ ತಾರೀಖು ಜಿ-2 ದ್ವಾರದ ಮೂಲಕ ವಿಐಪಿ, ವಿವಿಐಪಿ,ಸ್ವಾತಂತ್ರ್ಯಹೋರಾಟಗಾರರು, ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಪ್ರವೇಶ ನೀಡಲಾಗಿದೆ. ಜಿ-3 ದ್ವಾರದಲ್ಲಿ ಇತರೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು ಹಾಗೂ ಬಿಎಸ್ಎಫ್ ಅಧಿಕಾರಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಉಳಿದಂತೆ ಜಿ-4 ದ್ವಾರದ ಮೂಲಕ ಸಾರ್ವಜನಿಕರಿಗೆ ಪ್ರವೇಶ ಇರಲಿದ್ದು, ಬೆಳಗ್ಗೆ 8.30ಗಂಟೆ ಒಳಗಾಗಿ ಕಾರ್ಯಕ್ರಮದ ಆವರಣದಲ್ಲಿರುವಂತೆ ಸೂಚಿಸಲಾಗಿದೆ. ಇನ್ನು ಹೆಚ್ಚು ಜನಸಂದಣಿ ಇರೋದರಿಂದ ಕೆಲ ರಸ್ತೆಗಳಲ್ಲಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.
ಯಾವ್ಯಾವ ರಸ್ತೆಯಲ್ಲಿ ನಿರ್ಬಂಧ?
- ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣ
- ಕಬ್ಬನ್ ರಸ್ತೆ, ಸಿ.ಟಿ.ಓ ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್
- ಎಂ.ಜಿ.ರಸ್ತೆ,ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ
ಈ ಕಾರ್ಯಕ್ರಮಕ್ಕಾಗಿ ಬಿಬಿಎಂಪಿ ಕೂಡ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇಂದಿನಿಂದ ಮೂರು ದಿನಗಳ ಕಾಲ ಹರ್ಘರ್ ತಿರಂಗ್ ಅಭಿಯಾನದಡಿಯಲ್ಲಿ ಧ್ವಜಗಳನ್ನ ಹಾರಿಸಲು ಅವಕಾಶ ನೀಡಿದೆ. ಅಲ್ಲದೇ 2 ಲಕ್ಷ ರಾಷ್ಟ್ರಧ್ವಜಗಳು ಕೂಡ ಪಾಲಿಕೆ ತರಿಸಿದ್ದು, ಧ್ವಜಗಳನ್ನ ಹಂಚುವ ಕೆಲಸವನ್ನ ಕೂಡ ಮಾಡಲಾಗ್ತಿದೆ ಅಂತಾ ಪಾಲಿಕೆ ಆಯುಕ್ತರು ಸಿದ್ಧತೆ ಬಗ್ಗೆ ಮಾಹಿತಿ ನೀಡಿದ್ದಾರೆ
ಒಟ್ಟಾರೆ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ರಾಜ್ಯ ರಾಜಧಾನಿ ರಂಗೇರಿದ್ದು, ಆಗಸ್ಟ್ 15ನೇ ತಾರೀಖು ಬಾನಂಗಳದಲ್ಲಿ ತ್ರಿವರ್ಣ ಧ್ವಜ ಹಾರಾಡೋದಕ್ಕೆ ಮಾಣಿಕ್ ಷಾ ಪರೇಡ್ ಗ್ರೌಂಡ್ ಸಜ್ಜಾಗಿ ನಿಂತಿದೆ.
ಇದನ್ನೂ ಓದಿ: ಹಾವೇರಿ ಅಖಾಡದಲ್ಲಿ ಈಶ್ವರಪ್ಪ ಲೋಕಸಭೆ ತಾಲೀಮು.. ಬಿಜೆಪಿ ಹಿರಿಯರಿಗೆ ಶುರುವಾಯ್ತು ಟಿಕೆಟ್ ಟೆನ್ಶನ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ