ಬೆಂಗಳೂರು : ಆಗಸ್ಟ್ 2023 ರ ಮೂರನೇ ವಾರವು ಜ್ಯೋತಿಷ್ಯದ ದೃಷ್ಟಿಕೋನದಿಂದ ಬಹಳ ಮಹತ್ವದ್ದಾಗಿದೆ. ಈ ವಾರ ಸೂರ್ಯ, ಮಂಗಳ, ಶುಕ್ರ ಸಂಕ್ರಮಣ ನಡೆಯಲಿದೆ. ಈ ಗ್ರಹಗಳ ಸಂಚಾರವು ಎಲ್ಲಾ 12 ರಾಶಿಯವರ ಜಾತಕದ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತದೆ. ಸಾಪ್ತಾಹಿಕ ಜಾತಕದ ಪ್ರಕಾರ, 14 ರಿಂದ 20 ಆಗಸ್ಟ್ 2023 ರವರೆಗಿನ 7 ದಿನಗಳು 5 ರಾಶಿಯವರಿಗೆ ಶುಭಕರವಾಗಿರುತ್ತದೆ.
ಈ ವಾರ ಬೆಳಗುವುದು ಈ ರಾಶಿಯವರ ಅದೃಷ್ಟ :
ಮಿಥುನ ರಾಶಿ : ಈ ವಾರ ಮಿಥುನ ರಾಶಿಯವರಿಗೆ ಒಳ್ಳೆಯದಾಗಲಿದೆ. ತಮ್ಮ ಶಿಸ್ತುಬದ್ಧ ಜೀವನದ ಆಧಾರದ ಮೇಲೆ ಬಹಳಷ್ಟು ಲಾಭವನ್ನು ಗಳಿಸುತ್ತಾರೆ. ಈ ರಾಶಿಯವರು ಅತಿಯಾದ ಪ್ರಗತಿಯನ್ನು ಕಾಣಬಹುದು. ಹಣಕಾಸಿನ ವಿಷಯದಲ್ಲಿ ಲಾಭದಾಯಕವಾಗಿರಲಿದೆ. ಉನ್ನತ ಶಿಕ್ಷಣ ಪಡೆಯುವ ಕನಸು ನನಸಾಗಬಹುದು. ಒಳ್ಳೆಯ ಅವಕಾಶಗಳು ಸಿಗಬಹುದು.
ಇದನ್ನೂ ಓದಿ : Mangal Rashi Parivartan: ಆಗಸ್ಟ್ 18ರಿಂದ ಈ 4 ರಾಶಿಯ ಜೀವನದಲ್ಲಿ ಹಣದ ಮಳೆ, ಯಶಸ್ಸು ಸಿಗಲಿದೆ
ಕನ್ಯಾ ರಾಶಿ : ಈ ವಾರ ಕನ್ಯಾ ರಾಶಿಯವರಿಗೆ ಬಹಳಷ್ಟು ಲಾಭವಾಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಅನೇಕ ಮೂಲಗಳಿಂದ ಹಣವನ್ನು ಗಳಿಸುವುದು ಸಾಧ್ಯವಾಗುತ್ತದೆ. ಆದಾಯ ಹೆಚ್ಚಾಗುತ್ತದೆ. ನಿಮ್ಮ ಶ್ರಮವನ್ನು ನೋಡಿ ಜನರು ಸಂತೋಷಪಡುತ್ತಾರೆ. ಹೊಸ ಉಡುಗೊರೆಯನ್ನು ಪಡೆಯುವ ಅವಕಾಶ ಹೆಚ್ಚಿರುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ಆಹಾರ ಮತ್ತು ಪಾನೀಯದ ಬಗ್ಗೆ ಕಾಳಜಿ ವಹಿಸಿದರೆ, ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ನಿಮಗೆ ಸಿಗುವ ಅವಕಾಶವನ್ನು ಬಳಸಿಕೊಂಡರೆ ಬಹಳಷ್ಟು ಪ್ರಯೋಜನವಾಗುವುದು. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ಉದ್ಯೋಗದಲ್ಲಿ ಬಡ್ತಿ ಸಿಗಬಹುದು.
ಇದನ್ನೂ ಓದಿ : 2024ರವರೆಗೆ ಈ ರಾಶಿಯವರಿಗೆ ಅನು ದಿನವೂ ಸಮೃದ್ದಿ ! ಜೀವನದಲ್ಲಿ ಆಗುವುದು ಧನ ಲಕ್ಷ್ಮೀ ಪ್ರವೇಶ
ಧನು ರಾಶಿ : ಧನು ರಾಶಿಯವರು ಮುಂದಿನ ವಾರ ಪ್ರಮುಖ ಪ್ರಯಾಣವನ್ನು ಕೈಗೊಳ್ಳಬಹುದು. ಚಿಂತನಶೀಲ ಹೂಡಿಕೆಯು ಬಹಳಷ್ಟು ಲಾಭವನ್ನು ನೀಡುತ್ತದೆ. ನಿಮ್ಮ ಮೇಲೆ ಕೆಲಸದ ಒತ್ತಡವಿರುತ್ತದೆ, ಆದರೆ ನಿಮ್ಮ ಕಠಿಣ ಪರಿಶ್ರಮದಿಂದ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುತ್ತೀರಿ. ಉತ್ತಮ ಯಶಸ್ಸನ್ನು ಪಡೆಯುವಿರಿ.
ಮಕರ ರಾಶಿ : ಮಕರ ರಾಶಿಯವರಿಗೆ ಈ ಸಮಯ ತುಂಬಾ ಲಾಭದಾಯಕವಾಗಿರುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಹಣವನ್ನು ಕೂಡಿ ಡುವುದು ಸಾಧ್ಯವಾಗುತ್ತದೆ. ಅವಸರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಮನೆಯ ಸದಸ್ಯರನ್ನು ನಂಬಿ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ