ನವದೆಹಲಿ: ಸಿಬಿಎಸ್ಇ 10ನೇ ತರಗತಿಯ ಫಲಿತಾಂಶ ಇಂದು ಮೂರು ಗಂಟೆಗೆ ಹೊರಬಿಳಲಿದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಎಲ್ಲ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಯಬಹುದಾಗಿದೆ.
Central Board of Secondary Education(CBSE) will declare class 10th results today at 3 pm pic.twitter.com/XuZokNpoVp
— ANI (@ANI) May 6, 2019
ಫೆಬ್ರುವರಿ 21 ರಿಂದ ಮಾರ್ಚ್ 29 ರವರೆಗೆ ನಡೆದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಸುಮಾರು 18.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎನ್ನಲಾಗಿದೆ.
ಎಲ್ಲ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು cbse.nic.in ಮತ್ತು cbseresults.nic.in. ವೆಬ್ಸೈಟ್ ಗಳಲ್ಲಿ ನೋಡಬಹುದು.ಸಾಮಾನ್ಯವಾಗಿ ಫಲಿತಾಂಶ ವೀಕ್ಷಣೆಗಾಗಿ ವಿದ್ಯಾರ್ಥಿಗಳು ಈ ಸೈಟ್ ಗಳಿಗೆ ಮುಗಿ ಬಿಳುವುದರಿಂದ ವೆಬ್ ಸೈಟ್ ನ ವೇಗವು ಕುಸಿಯಬಹುದು.ಆದ್ದರಿಂದ ವಿದ್ಯಾರ್ಥಿಗಳು ತೃತೀಯ ಪಕ್ಷದ ವೆಬ್ಸೈಟ್ ಗಳಾಗಿರುವ examresults.com
www.indiaresults.com ನಲ್ಲಿಯೂ ಕೂಡ ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.