ಜೈಲರ್ ರಿಲೀಸ್ ನಂತರ ಹಿಮಾಲಯ ಯಾತ್ರೆ ಮಾಡಲಿರುವ ರಜನೀಕಾಂತ್..ಕಾರಣವೇನು ಗೊತ್ತಾ?

Rajnikanth: ರಜನೀಕಾಂತ್ ನಟನೆಯ ಜೈಲರ್ ಸಿನಿಮಾ  ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಸಿನಿ ಪ್ರಿಯರು ಮಾತ್ರವಲ್ಲದೇ ಚಿತ್ರತಂಡ ,ತಲೈವಾ ಕೂಡ ಕಾಯುತ್ತಿದ್ದಾರೆ. ಕಾರಣ ರೀಲಿಸ್‌ ಬಳಿಕ ಸೂಪರ್‌ ಸ್ಟಾರ್‌ ರಜನಿಕಾಂತ್ ಸಿನಿಮಾದಿಂದ ಸದ್ಯದ ಮಟ್ಟಿಗೆ ಬ್ರೇಕ್‌ ಪಡೆದುಕೊಳ್ಳಲಿದ್ದಾರೆ.

Written by - Zee Kannada News Desk | Last Updated : Aug 2, 2023, 12:57 PM IST
  • ಜೈಲರ್ ರಿಲೀಸ್ ನಂತರ ಸದ್ಯದ ಮಟ್ಟಿಗೆ ಬ್ರೆಕ್‌ ಪಡೆಯಲಿರುವ ರಜನೀಕಾಂತ್
  • ಹಿಮಾಲಯ ಯಾತ್ರೆ ಮಾಡಲಿರುವ ತಲೈವಾ
  • ಸದ್ಯದಲ್ಲೇ ಬಿಡುಗಡೆಯಾಗಲಿರುವ ರಜನೀಕಾಂತ್ ನಟನೆಯ ಜೈಲರ್
ಜೈಲರ್ ರಿಲೀಸ್ ನಂತರ ಹಿಮಾಲಯ ಯಾತ್ರೆ ಮಾಡಲಿರುವ ರಜನೀಕಾಂತ್..ಕಾರಣವೇನು ಗೊತ್ತಾ?  title=

Rajnikanth After Jailer: ರಜನೀಕಾಂತ್ ನಟನೆಯ ಜೈಲರ್ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಕಾವಲ ಹಾಡು ರೀಲಿಸ್‌ ಆಗಿ ಸಖತ್‌ ಹವಾ ಕ್ರಿಯೆಟ್‌ ಮಾಡಿದೆ.

ಹೀಗಾಗಿ ಎಲ್ಲಡೆ ಸಿನಿಮಾ ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಸಿನಿ ಪ್ರಿಯರು ಮಾತ್ರವಲ್ಲದೇ ಚಿತ್ರತಂಡ, ತಲೈವಾ ಕೂಡ ಕಾಯುತ್ತಿದ್ದಾರೆ. ಕಾರಣ ರೀಲಿಸ್‌ ಬಳಿಕ ಸೂಪರ್‌ ಸ್ಟಾರ್‌ ರಜನಿಕಾಂತ್ ಸಿನಿಮಾದಿಂದ ಸದ್ಯದ ಮಟ್ಟಿಗೆ ಬ್ರೇಕ್‌ ಪಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: Actor Kishore: ಸೌಜನ್ಯ ಕೇಸ್​,ಮಣಿಪುರ ಘಟನೆ ಬಗ್ಗೆ ಧ್ವನಿ ಎತ್ತಿದ ನಟ ಕಿಶೋರ್ !

ಹೌದು, 

ಈಗಾಗಲೇ ತಿಳಿದಿರುವುವಂತೆ ತಲೈವಾ ಪ್ರತಿ ಸಿನಿಮಾ ಬಳಿಕ ಆಧ್ಯಾತ್ಮಿಕ ವಿರಾಮ ತೆದುಕೊಂಡು ಮನಸ್ಸಿನ ಶಾಂತಿಗಾಗಿ ಅಲ್ಲಿ ಪರಿಸರದತ್ತ ಮುಖ ಮಾಡುತ್ತಾರೆ. ವಿಶ್ರಾಂತಿಯ ಬಳಿಕ ಮತ್ತೆ ಚಿತ್ರಗಳನ್ನು ಆರಂಭಿಸುತ್ತಾರೆ. ಇನ್ನು ರಜನಿಕಾಂತ್ ನಟನೆಯ ‘ಜೈಲರ್ 250 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದು, ಚಿತ್ರ ಆಗಸ್ಟ್ 10 ರಂದು ರಿಲೀಸ್ ಆಗಲಿದೆ.

ಸಿನಿಮಾದಲ್ಲಿ  ಶಿವ ರಾಜ್‌ಕುಮಾರ್, ರಜನಿಕಾಂತ್, ರಮ್ಯಾ ಕೃಷ್ಣನ್, ಮೋಹನ್ ಲಾಲ್, ತಮನ್ನಾ ಭಾಟಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮಿಲ್ಕಿ ಬ್ಯೂಟಿ ನೃತ್ಯ ನೋಡಿದ ನೆಟ್ಟಿಗರು ಸಿನಿ ಪ್ರಿಯರು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:  ನಾಲ್ಕೂವರೆ ವರ್ಷದ ಶಾಲ್ಮಲೀ ಶ್ರೀನಿವಾಸ್ ನಾದಕಂಠಕ್ಕೆ ಖ್ಯಾತ ಗಾಯಕ ಶಂಕರ ಮಹಾದೇವನ್​ ಫಿದಾ..

ಕಾರಣ ಸಾಮಾಜಿಕ ಮಾಧ್ಯಮದಲ್ಲಿ ಕಾವಲ ಹಾಡು ಟ್ರೆಂಡ್‌ ಜೋರಾಗಿದೆ. ಪ್ರತಿಯೊಬ್ಬರು ಈ ಸಾಂಗ್‌ ರೀಲ್ಸ್‌ ಮಾಡುವ ಮೂಲಕ ಹೆಚ್ಚದ್ದು ಕುಣಿಯುತ್ತಿದ್ದಾರೆ. ಹೀಗಾಗಿ ಚಿತ್ರದ ಮೇಲೂ ಬಹು ನಿರಿಕ್ಷೆ ಇದೆ.      

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News