Monthly Horoscope : ಆಗಸ್ಟ್ ನಲ್ಲಿ ಅನೇಕ ಪ್ರಮುಖ ಗ್ರಹಗಳ ಸಂಕ್ರಮಣಗಳು ನಡೆಯಲಿವೆ. ಇದರಿಂದಾಗಿ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಇದು ಬೇರೆ ಬೇರೆ ರಾಶಿಯವರ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತದೆ. ಹೊಸ ಮಾಸದಲ್ಲಿ ಯಾರಿಗೆ ಶುಭ ಸುದ್ದಿ ಸಿಗಲಿದೆ, ಯಾರಿಗೆ ಕಷ್ಟ ಎದುರಾಗಲಿದೆ ನೋಡೋಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿ : ಆಗಸ್ಟ್ ಮೊದಲ ವಾರದಲ್ಲಿ ಕಚೇರಿಯಲ್ಲಿ ನಿಮ್ಮನ್ನು ಚೆನ್ನಾಗಿ ನಡೆಸಿಕೊಳ್ಳದಿದ್ದರೆ, ಕುಗ್ಗಬೇಡಿ. ಜೀವನದ ಎಲ್ಲಾ ಅಂಶಗಳಲ್ಲಿ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ನೀವು ನಿಮ್ಮ ಕೆಲಸವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಾ ಹೋಗಿ. ವರ್ಗಾವಣೆ ಸಾಧ್ಯತೆಯ ಹಿನ್ನೆಲೆಯಲ್ಲಿ ಉನ್ನತಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಬೇಕು.
ವೃಷಭ ರಾಶಿ : ಸರ್ಕಾರಿ ಉದ್ಯೋಗದಲ್ಲಿರುವವರು ತಪ್ಪುಗಳಿಂದ ದೂರವಿರಬೇಕು. ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತೀರಿ. ನೀವು ಮಾಡುವ ಕೆಲಸದ ಲಾಭ ನಿಮಗೆ ಖಂಡಿತಾ ಸಿಗುತ್ತದೆ.
ಮಿಥುನ ರಾಶಿ : ಕೆಲಸದ ಸ್ಥಳದಲ್ಲಿ ಆತುರದಲ್ಲಿ ಯಾವುದೇ ತಪ್ಪುಗಳನ್ನು ಮಾಡಬಾರದು. ಇತರರ ತಪ್ಪುಗಳನ್ನು ಕಂಡುಹಿಡಿಯುವ ಬದಲು ನಿಮ್ಮನ್ನು ಬದಲಾಯಿಸಿಕೊಳ್ಳಿ. ಗ್ರಹಗಳ ಚಲನೆಯು ಅಡೆತಡೆಗಳನ್ನು ಸೃಷ್ಟಿಸುವುದರಿಂದ ನಿಮ್ಮ ಮಾತು ಕೆಲಸದ ಮೇಲೆ ನಿಗಾ ಇರಲಿ.
ಕರ್ಕಾಟಕ ರಾಶಿ : ಪ್ರಮುಖ ಕೆಲಸಗಳಲ್ಲಿ ಅಜಾಗರೂಕತೆ ದುಬಾರಿಯಾಗಿ ಪರಿಣಮಿಸಬಹುದು. ಮೇಲಧಿಕಾರಿಗಳೊಂದಿಗೆ ವಾದ-ವಿವಾದದ ಸಾಧ್ಯತೆ ಇರುವುದರಿಂದ ಶಾಂತಚಿತ್ತದಿಂದ ಕೆಲಸ ಮಾಡಬೇಕು. ಮಾನಸಿಕ ಒತ್ತಡ ಹೆಚ್ಚಾಗುತ್ತದೆ, ಆದರೆ ಈ ಬಗ್ಗೆ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರಲು ಬಿಡಬೇಡಿ.
ಸಿಂಹ ರಾಶಿ : ಸಹೋದ್ಯೋಗಿಗಳೊಂದಿಗೆ ಉತ್ತಮವಾಗಿ ವರ್ತಿಸಬೇಕು. ಇಲ್ಲದಿದ್ದರೆ ಮಿತ್ರರು ಶತ್ರುಗಳಾಗಿ ಕಾಡಬಹುದು. ಪ್ರತಿಸ್ಪರ್ಧಿಗಳು ಅಡ್ಡಿಪಡಿಸುವ ಕೆಲಸವನ್ನು ಮಾಡಬಹುದು. ಹಿಂದಿನ ಪ್ರಯತ್ನಗಳನ್ನು ನೋಡಿದರೆ ಕೆಲಸದ ಸ್ಥಳದಲ್ಲಿ ಗೌರವವನ್ನು ಪಡೆಯಬಹುದು.
ಕನ್ಯಾ ರಾಶಿ : ಉನ್ನತ ಸ್ಥಾನದಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸುತ್ತೀರಿ ಅವರು ನಿಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾರೆ. ಕಚೇರಿ ಕೆಲಸದಲ್ಲಿ ನಿಷ್ಠರಾಗಿರಿ, ಸಹೋದ್ಯೋಗಿಗಳು ಪರೋಕ್ಷವಾಗಿ ಅಡ್ಡಿಯಾಗಬಹುದು.
ತುಲಾ ರಾಶಿ : ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದ ಜೊತೆಗೆ ನಿಮ್ಮ ಮೇಲಧಿಕಾರಿಯೊಂದಿಗೆ ಸೌಮ್ಯವಾಗಿ ವರ್ತಿಸುವುದು ಉತ್ತಮ. ಕಚೇರಿಯಲ್ಲಿ ಕೆಲಸ ಮಾಡುವಾಗ ಮಾಡುವ ತಪ್ಪುಗಳ ಬಗ್ಗೆಯೂ ಗಮನವಿರಲಿ.
ವೃಶ್ಚಿಕ ರಾಶಿ : ಕೆಲಸವನ್ನು ಪೂರ್ಣಗೊಳಿಸಲು ತಂತ್ರಜ್ಞಾನದ ಸಹಾಯವನ್ನು ತೆಗೆದುಕೊಳ್ಳಬೇಕು. ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ನಿಮ್ಮ ಕ್ರೆಡಿಬಿಲಿಟಿ ನೋಡಿ ಇತರರು ನಿಮ್ಮನ್ನು ನಂಬುತ್ತಾರೆ, ಅದನ್ನು ಕಾಪಾಡಿಕೊಳ್ಳಬೇಕು.
ಧನು ರಾಶಿ : ಕೆಲಸದಲ್ಲಿ ಗಮನ ಹರಿಸದಿದ್ದಲ್ಲಿ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ವಿಫಲರಾಗಬಹುದು. ಬಾಸ್ನಿಂದ ಪ್ರೀತಿ ಮತ್ತು ಮೆಚ್ಚುಗೆಯ ಜೊತೆಗೆ, ಉತ್ತಮ ಕೆಲಸ ಮಾಡುವಲ್ಲಿ ಶ್ರೇಣಿಯ ಹೆಚ್ಚಳವೂ ಆಗಬಹುದು.
ಮಕರ ರಾಶಿ : ಗ್ರಹಗಳ ನಕಾರಾತ್ಮಕ ಸ್ಥಾನವು ಮಾನಸಿಕ ಒತ್ತಡವನ್ನು ನೀಡಬಹುದು, ಆದ್ದರಿಂದ ಎಚ್ಚರಿಕೆಯಿಂದ ಇರಿ. ಏನು ಕೆಲಸ ಮಾಡುತ್ತೀರಿ ಅದರ ಬಗ್ಗೆ ಆಲಸ್ಯ ಬೇಡ.
ಕುಂಭ ರಾಶಿ : ಕಚೇರಿಯಲ್ಲಿನ ಕೆಲಸಗಳಿಗೆ ಸಂಬಂಧಿಸಿದಂತೆ ಏರುಪೇರುಗಳಾಗಬಹುದು. ಕೆಲಸದ ವೇಗವನ್ನು ಹೆಚ್ಚಿಸಿ.
ಮೀನ ರಾಶಿ : ವರ್ಗಾವಣೆ ಅಥವಾ ಬಡ್ತಿ ವಿಳಂಬವಾಗುತ್ತಿರುವ ಮೀನ ರಾಶಿಯವರಿಗೆ ಈ ತಿಂಗಳ ಆರಂಭದಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ. ನಿಮ್ಮ ನಿರ್ವಹಣಾ ಕೌಶಲ್ಯವು ಕೆಲಸದ ಸ್ಥಳದಲ್ಲಿ ಪ್ರತಿಯೊಬ್ಬರ ಆಕರ್ಷಣೆಯ ಕೇಂದ್ರವಾಗುತ್ತದೆ.