Man transforms into dog: ಜನರೂ ವಿಚಿತ್ರ… ಜನರ ಹವ್ಯಾಸಗಳೂ ವಿಚಿತ್ರ ಎಂಬುದು ಅದೆಷ್ಟೋ ಬಾರಿ ನಿರೂಪಿತವಾಗಿದೆ. ಜನರು ತಮ್ಮ ಹವ್ಯಾಸಗಳನ್ನು ಪೂರೈಸಲು ಎಷ್ಟು ದುಡ್ಡು ಬೇಕಾದರೂ ಖರ್ಚು ಮಾಡುತ್ತಾರೆ. ಇನ್ನು ಜಪಾನ್ ನಲ್ಲಿ ಹವ್ಯಾಸಕ್ಕೆ ಸಂಬಂಧಿಸಿದ ಆಘಾತಕಾರಿ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಜಪಾನಿನ ವ್ಯಕ್ತಿಯೊಬ್ಬ ತನ್ನನ್ನು ತಾನು ನಾಯಿಯಾಗಿ ಪರಿವರ್ತಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ತಮ್ಮ ಹೆಸರನ್ನು ಟೋಕೊ ಎಂದು ಬದಲಾಯಿಸಿಕೊಂಡಿದ್ದಾನೆ. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಈ ಹವ್ಯಾಸಕ್ಕಾಗಿ ಆತ ಸರಿ ಸುಮಾರು 18 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.
ಇದನ್ನೂ ಓದಿ: ಸ್ವಾವಲಂಬಿ ಜೀವನಕ್ಕಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ
ಟೋಕೊ ಎಂದು ಕರೆಯಲ್ಪಡುವ ಈ ವ್ಯಕ್ತಿ ನಾಯಿಯಾಗಲು ಎರಡು ಮಿಲಿಯನ್ ಯೆನ್ (A$22,000) ಖರ್ಚು ಮಾಡಿದ್ದಾನೆ. ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದರೆ, ಈ ಸಂಪೂರ್ಣ ವೆಚ್ಚವು 18,09,714 ರೂ. ಆಗುತ್ತದೆ. ಟಿವಿ ಜಾಹೀರಾತುಗಳು ಮತ್ತು ಚಲನಚಿತ್ರಗಳಿಗೆ ವೇಷಭೂಷಣಗಳನ್ನು ತಯಾರಿಸುವ ಜಪಾನಿನ ಕಂಪನಿ ಜೆಪೆಟ್ ಈ ಮನುಷ್ಯನಿಗೆ ನಾಯಿಯ ವೇಷಭೂಷಣವನ್ನು ತಯಾರಿಸಿದೆ. ಇದನ್ನು ತಯಾರಿಸಲು ಸುಮಾರು 40 ದಿನಗಳನ್ನು ತೆಗೆದುಕೊಂಡಿದೆ.
ಕಂಪನಿ ಹೇಳುವಂತೆ, "ಕೋಲಿ ನಾಯಿಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ನಾಲ್ಕು ಕಾಲುಗಳ ಮೇಲೆ ನಡೆಯುವ ನಿಜವಾದ ನಾಯಿಯಂತೆ ಕಾಣುತ್ತದೆ" ಎಂದು ಹೇಳಿದೆ. ವ್ಯಕ್ತಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 'ಐ ವಾಂಟ್ ಟು ಬಿ ಎ ಅನಿಮಲ್' ಎಂಬ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾನೆ. ಚಾನಲ್ 31,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ ಮತ್ತು ಈ ವೀಡಿಯೊಗಳನ್ನು 1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.
ಈ ವೀಡಿಯೊವನ್ನು ಒಂದು ವರ್ಷದ ಹಿಂದೆ ಚಿತ್ರೀಕರಿಸಲಾಗಿದೆ. ಆದರೆ ಇತ್ತೀಚೆಗೆ ಮರು-ಅಪ್‌ಲೋಡ್ ಮಾಡಲಾಗಿದೆ. ಇದನ್ನು ಜರ್ಮನ್ ಟಿವಿ ಸ್ಟೇಷನ್ RTL ಸಂದರ್ಶನದ ಭಾಗವಾಗಿ ಚಿತ್ರೀಕರಿಸಲಾಗಿದೆ. ವೀಡಿಯೊದ ಆರಂಭದಲ್ಲಿ ಆ ವ್ಯಕ್ತಿ, “ನಾನು ಕೋಲಿಯಾಗಿದ್ದೇನೆ. ಬಾಲ್ಯದಿಂದಲೂ ನಾನು ಪ್ರಾಣಿಯಾಗಬೇಕೆಂಬ ನನ್ನ ಕನಸು ನನಸಾಗಿದೆ” ಎಂದು ಹೇಳುವುದನ್ನು ಕಾಣಬಹುದು.
ವೀಡಿಯೊದಲ್ಲಿ, ಟೋಕೊ ಕುತ್ತಿಗೆಗೆ ಪಟ್ಟಿಯನ್ನು ಕಟ್ಟಿ ನಡೆದಾಡಲು ಕರೆದೊಯ್ಯುತ್ತಿರುವುದನ್ನು ಕಾಣಬಹುದು. ಉದ್ಯಾನವನದಲ್ಲಿ ಇತರ ನಾಯಿಗಳಂತೆ ಆಟವಾಡುತ್ತಾ, ನೆಲದ ಮೇಲೆ ಉರುಳುತ್ತಿದ್ದಾನೆ. ಕಳೆದ ವರ್ಷ, ಟೋಕೊ ನಾಯಿಯಾಗಲು ಏಕೆ ನಿರ್ಧರಿಸಿದ ಎಂಬುದರ ಕುರಿತು ಡೈಲಿ ಮೇಲ್ ಜೊತೆ ಮಾತನಾಡುವಾಗ ಬಹಿರಂಗ ಪಡಿಸಿದ್ದರು.
ಇದನ್ನೂ ಓದಿ: ನೀವೂ ದಿನವಿಡೀ ಒಂದೇ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತೀರಾ? ಈ ಸುದ್ದಿ ನಿಮಗಾಗಿ!
“ನಾನು ನಾಯಿಯಾಗಲು ಬಯಸುವುದು ವಿಚಿತ್ರವಾಗಿದೆ ಎಂದು ಜನರು ಭಾವಿಸುತ್ತಾರೆ. ಅದಕ್ಕಾಗಿಯೇ ನಾನು ನನ್ನ ನಿಜವಾದ ಮುಖವನ್ನು ತೋರಿಸಲು ಸಾಧ್ಯವಿಲ್ಲ" ಎಂದು ಮಿರರ್ ಮಾಧ್ಯಮಕ್ಕೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ