ನವದೆಹಲಿ: ಈಗಾಗಲೇ ಲೋಕಸಭಾ ಚುನಾವಣೆಯ ಅರ್ಧ ಹಂತಗಳು ಇನ್ನೇನು ಮುಗಿಯುತ್ತಾ ಬಂದಿವೆ. ನಾಲ್ಕನೆ ಹಂತದ ಚುನಾವಣೆ ಸೋಮವಾರದಂದು ನಡೆಯಲಿದೆ.ಈ ಸಂದರ್ಭದಲ್ಲಿ ಬಿಜೆಪಿಕರ್ನಾಟಕ ಮತ್ತು ಗೋವಾದಲ್ಲಿನ ಕ್ಷೇತ್ರಗಳ ಉಪಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
BJP releases list of candidates for bye-elections to 2 legislative assembly constituencies of Karnataka & 1 of Goa; Sidharth Kuncalienker to contest from Panaji, Avinash Yadav from Chincholi & SI Chikkanagowdar from Kundgol pic.twitter.com/6sIIpAltYL
— ANI (@ANI) April 28, 2019
ಈಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕದ ಎರಡು ಕ್ಷೇತ್ರಗಳು ಹಾಗೂ ಗೋವಾದ ಒಂದು ಕ್ಷೇತ್ರಕ್ಕಾಗಿ ವಿಧಾನಸಭಾ ಉಪ ಚುನಾವಣೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಿಸಿದೆ. ಕರ್ನಾಟಕದಲ್ಲಿ ಈಗ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟದ ಸರ್ಕಾರವಿರುವುದರಿಂದ ಇದನ್ನು ಅತಂತ್ರಗೋಳಿಸಲು ಬಿಜೆಪಿ ಮೊದಲಿನಿಂದಲೂ ಪ್ರಯತ್ನಿಸುತ್ತಿದೆ. ಈ ಹಿನ್ನಲೇಯಲ್ಲಿ ಈಗ ಮೈತ್ರಿ ಸರ್ಕಾರಕ್ಕೆ ಪ್ರತಿಯೊಂದು ಸ್ಥಾನವು ಕೂಡ ಮಹತ್ವದ್ದಾಗಿದೆ.ಆದ್ದರಿಂದ ಈ ಎರಡು ಕ್ಷೇತ್ರಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಮೈತ್ರಿ ಸರ್ಕಾರವಿದೆ
ಈಗ ರಾಜ್ಯದಲ್ಲಿ ಚಿಂಚೋಳಿ ಮೀಸಲು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಅವಿನಾಶ್ ಅವರನ್ನು ಹೆಸರಿಸಲಾಗಿದೆ. ಕುಂದಗೋಳ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಎಎಸ್. ಐ ಚಿಕ್ಕನಗೌಡರ ಅವರನ್ನು ಘೋಷಿಸಲಾಗಿದೆ.ಇನ್ನು ಗೋವಾದ ಪಣಜಿ ಕ್ಷೇತ್ರಕ್ಕಾಗಿ ಸಿದ್ದಾರ್ಥ ಕುಂಕಾಲಿಂಕರ್ ಅವರನ್ನು ಹೆಸರಿಸಲಾಗಿದೆ.