ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯ ನಡೆಸಿದ 2018-22ರ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 435ಕ್ಕೆ ಏರಿಕೆಯಾಗಿದೆ. 2018ಕ್ಕೆ ಹೋಲಿಸಿದರೆ 2022ರ ಹೊತ್ತಿಗೆ ಟ್ರ್ಯಾಪ್ ಕ್ಯಾಮೆರಾ ವಿಧಾನದ ಗಣತಿಯ ಪ್ರಕಾರ ರಾಜ್ಯದ ಹುಲಿಗಳ ಸಂಖ್ಯೆ 404 ರಿಂದ 435ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಪ್ರತಿ ವರ್ಷ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದ ಅಂಗವಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಗುರುವಾರ (ಜು.27) ಅಖಿಲ ಭಾರತ ಹುಲಿ ಗಣತಿ (AITE) 2022ರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಹುಲಿ ದಿನಾಚರಣೆಗೂ ಮುನ್ನ ರಾಜ್ಯದ 31 ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯು ಎಲ್ಲಾ 37 ಅರಣ್ಯ ವಿಭಾಗಗಳಲ್ಲಿ ಹುಲಿ ಗಣತಿ ಕಾರ್ಯವನ್ನು ನಡೆಸಿತ್ತು.
2018-22ರ ಸಮೀಕ್ಷೆಯ ಪ್ರಕಾರ ಕರ್ನಾಟಕದ 5 ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ(BTR)ದಲ್ಲಿ ಅತಿಹೆಚ್ಚು ಅಂದರೆ 155 ಹುಲಿಗಳನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವಿದ್ದು, 149 ಹುಲಿಗಳಿವೆ. ಇದರಿಂದ ಒಟ್ಟಾರೆ ಕರ್ನಾಟಕದಲ್ಲಿ 2022ರ ಹೊತ್ತಿಗೆ ಹುಲಿಗಳ ಸಂಖ್ಯೆ 435ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ಬಹಿರಂಗ ಪಡಿಸಿದೆ.
ಇದನ್ನೂ ಓದಿ: LAC ಮೇಲೆ ಚೀನಾ ದರ್ಪ: ತಕ್ಕ ಪ್ರತ್ಯುತ್ತರ ನೀಡಲು ಈ ವಿಶೇಷ 'ಯೋಜನೆ' ರೂಪಿಸಿದ ಭಾರತೀಯ ಸೇನೆ
ಬಿಳಿಗಿರ ರಂಗ ದೇವಾಲಯ (BRT) ಹುಲಿ ಸಂರಕ್ಷಿತ ಪ್ರದೇಶದಲ್ಲಿ 42 ಹುಲಿಗಳು, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 31 ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 19 ಹುಲಿಗಳಿವೆ ಎಂದು ವರದಿಯಾಗಿವೆ. ಶನಿವಾರ(ಜುಲೈ 29) ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯು ಅಖಿಲ ಭಾರತ ಹುಲಿ ಗಣತಿ ವರದಿ ಬಿಡುಗಡೆ ಮಾಡಿದಾಗ ನಿಖರ ಅಂಕಿ ಅಂಶಗಳು ತಿಳಿದುಬಂದಿದೆ.
2018ರಲ್ಲಿ ಕರ್ನಾಟಕವು 524 ಹುಲಿಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶವು 526 ನೊಂದಿಗೆ ಅಗ್ರ ಸ್ಥಾನ ಪಡೆದುಕೊಂಡಿದೆ. ವರದಿಯ ಪ್ರಕಾರ, 37 ಅರಣ್ಯ ವಿಭಾಗಗಳಲ್ಲಿ 4,786 ಕ್ಯಾಮೆರಾ ಟ್ರ್ಯಾಪ್ ಸ್ಥಳಗಳಿವೆ. ಹುಲಿ ಗಣತಿ ಸಮಯದಲ್ಲಿ ಒಟ್ಟು 66,86,450 ಕ್ಯಾಮೆರಾ ಟ್ರ್ಯಾಪ್ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.
ಹುಲಿಗಳ ಅಂಕಿ ಸಂಖ್ಯೆ ಬಿಡುಗಡೆ ಮಾಡಿದ ಸಚಿವ ಖಂಡ್ರೆ, ದೇಶದ ಅರಣ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ ಇಬ್ಬರು ದಿವಂಗತ ಪ್ರಧಾನಿಗಳಾದ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಅವರಿಗೆ ಧನ್ಯವಾದ ಅರ್ಪಿಸಿದರು. ‘ಈ ದಿಗ್ಗಜ ನಾಯಕರು ಅರಣ್ಯ ಸಂರಕ್ಷಣಾ ಕಾಯಿದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಅರಣ್ಯ ಹಕ್ಕು ಕಾಯಿದೆಗಳನ್ನು ಜಾರಿಗೆ ತಂದರು. ಇದರಿಂದ ಪ್ರಸ್ತುತ ಪೀಳಿಗೆಗೆ ಅರಣ್ಯಗಳನ್ನು ಸಂರಕ್ಷಿಸಲು ಸಹಕಾರಿಯಾಯಿತು’ ಎಂದು ಅವರು ಹೇಳಿದರು. ಇದೇ ವೇಳೆ ಖ್ಯಾತ ಹುಲಿ ಜೀವಶಾಸ್ತ್ರಜ್ಞ ಹಾಗೂ ಸಂರಕ್ಷಣಾ ತಜ್ಞ ಉಲ್ಲಾಸ್ ಕಾರಂತ್ ಮಾತನಾಡಿ, ಅರಣ್ಯ ಇಲಾಖೆ ನಡೆಸಿದ ಸಮೀಕ್ಷೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪ್ರತಿಪಕ್ಷಗಳ ಒಗ್ಗಟ್ಟಿಗೆ ಶಾಕ್! ಪ್ರಧಾನಿ ಮೋದಿ ಜೊತೆ ಸೇರಲಿದ್ದಾರೆ INDIA ಮೈತ್ರಿಯ ಪ್ರಮುಖ ವ್ಯಕ್ತಿ..?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.