ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ನಿಶ್ಚಿತಾರ್ಥ..?

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಮತ್ತು ಮಾಡೆಲ್ ರೋಹ್ಮನ್ ಶಾಲ್ ಇಬ್ಬರು ಕಳೆದ ವರ್ಷ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದರು. 

Last Updated : Apr 27, 2019, 01:20 PM IST
 ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ನಿಶ್ಚಿತಾರ್ಥ..? title=
Photo courtesy: Instagram

ನವದೆಹಲಿ: ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಮತ್ತು ಮಾಡೆಲ್ ರೋಹ್ಮನ್ ಶಾಲ್ ಇಬ್ಬರು ಕಳೆದ ವರ್ಷ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದರು. 

ಇದಾದ ಬೆನ್ನಲ್ಲೇ ಅವರು ಪ್ರತಿದಿನ ಭಿನ್ನ ಭಿನ್ನವಾದ ಫೋಟೋ ಹಾಗೂ ವೀಡಿಯೋಗಳನ್ನು ಇನ್ಸ್ಟಾಗ್ರಾನಲ್ಲಿ ಪೋಸ್ಟ್ ಮಾಡುತ್ತಿದ್ದರು. ಈಗ ಸಮಾಚಾರ ಏನಪ್ಪಾ ಅಂದ್ರೆ ಈಗ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈಗ ಈ ಸುದ್ದಿ ಇನ್ನು ಅಧಿಕೃತವಾಗಿ ಹೊರಬಿಳಬೇಕಷ್ಟೇ ಎನ್ನಲಾಗಿದೆ.ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಅವರ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಅವರಿಗಿಂತಲೂ ಕಿರಿಯರು, ಆದರೂ ಇಬ್ಬರು ಕಳೆದ ಒಂದು ವರ್ಷದಿಂದ ಅನೂನ್ಯ ಸಂಬಂಧವನ್ನು ಹೊಂದಿದ್ದಾರೆ.

ಈಗ ಇತ್ತೀಚಿಗೆ ಇನ್ಸ್ಟಾ ಪೋಸ್ಟ್ ನಲ್ಲಿ ಅವರು " ಬೇಷರತ್ತಾಗಿ ಯಾರನ್ನಾದರು ನಾವು ಪ್ರೀತಿಸಬೇಕೆಂದರೆ ಕಷ್ಟ, ಏಕೆಂದರೆ ನಾವು ಹಲವು ಷರತ್ತುಗಳಿಗೆ ಬದ್ದರಾಗಬೇಕಾಗುತ್ತದೆ. ಆದ್ದರಿಂದ  ಮನಸ್ಸಿಗಿಂತ ಹೃದಯವನ್ನು ಆಯ್ಕೆ ಮಾಡಿಕೊಳ್ಳುವುದು ನಿಜಕ್ಕೂ ಸವಾಲಿನ ಸಂಗತಿ, ಈ ವೇಳೆ ಆ ಷರತ್ತುಗಳು ಮನಸ್ಸಿನಲ್ಲಿರಬೇಕಾದರೆ, ಅಪರಾಧಗಳು ಹೃದಯದಲಿ ಜನಿಸುತ್ತವೆ. ಆದ್ದರಿಂದ ಪ್ರೀತಿಸುವುದು ಇನ್ನು ಹೆಚ್ಚಿನ ಬೋನಸ್ ಆಗಿದೆ" ಎಂದು ಅವರು ಬರೆದುಕೊಂಡಿದ್ದಾರೆ. ಇನ್ನು ಮುಂದುವರೆದು ರೋಹ್ಮಾನ್ ಶಾಲ್ ನಿನ್ನನ್ನು ಬೇಷರತ್ತಾಗಿ ಪ್ರೀತಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. 

ಸದ್ಯದಲ್ಲಿ ಈ ಜೋಡಿಗಳ ನಿಶ್ಚಿತಾರ್ಥದ ವಿಚಾರವಾಗಿ ಹಬ್ಬಿರುವ ವದಂತಿಗಳು ಖಚಿತವಾಗಳಿವೆ ಎಂದು ನಾವು ಆಶಿಸೋಣ.

Trending News