ಎನ್‌ಸಿಪಿ ತೊರೆದು ಬಿಜೆಪಿ ಸೇರಿದ ಭಾರತಿ ಪವಾರ್; ದಿಂಡೋರಿ ಕ್ಷೇತ್ರದಿಂದ ಸ್ಪರ್ಧೆ!

ಮಹಾರಾಷ್ಟ್ರದ 17 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 29ರಂದು ಮತದಾನ ನಡೆಯಲಿದೆ.  ಇವುಗಳಲ್ಲಿ ದಿಂಡೋರಿ ಲೋಕಸಭಾ ಕ್ಷೇತ್ರವೂ ಸೇರಿದ್ದು, ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

Last Updated : Apr 27, 2019, 12:05 PM IST
ಎನ್‌ಸಿಪಿ ತೊರೆದು ಬಿಜೆಪಿ ಸೇರಿದ ಭಾರತಿ ಪವಾರ್; ದಿಂಡೋರಿ ಕ್ಷೇತ್ರದಿಂದ ಸ್ಪರ್ಧೆ! title=

ನವದೆಹಲಿ: ಎನ್‌ಸಿಪಿ ರಾಜ್ಯ ಘಟಕದ ಉಪಾಧ್ಯಕ್ಷೆಯಾಗಿದ್ದ ಭಾರತಿ ಪವಾರ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ದಿಂಡೋರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

2019 ರ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ ಮಹಾರಾಷ್ಟ್ರದ 17 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 29ರಂದು ಮತದಾನ ನಡೆಯಲಿದೆ.  ಇವುಗಳಲ್ಲಿ ದಿಂಡೋರಿ ಲೋಕಸಭಾ ಕ್ಷೇತ್ರವೂ ಸೇರಿದ್ದು, ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಭಾರತಿ ಪವಾರ್ ಅವರನ್ನು ಕಣಕ್ಕಿಳಿಸಿದೆ. 

6 ವಿಧಾನಸಭೆ ಸ್ಥಾನಗಳು ಇಲ್ಲಿವೆ
ಡಿಂಡೋರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ ನಂದಗಾವ್, ಕಲ್ವಾನ್, ಚಂದ್ವಾಡ್, ಯೆಯೋಲಾ, ನಿಪಾದ್ ಮತ್ತು ದಿಂಡೋರಿ ಸೀಟುಗಳು ಸೇರಿವೆ. 2008 ರಲ್ಲಿ ಅಸ್ತಿತ್ವಕ್ಕೆ ಬಂದ ಡಿಂಡೋರಿ ಲೋಕಸಭಾ ಕ್ಷೇತ್ರಕ್ಕೆ 2009 ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿಯ ಹರಿಶ್ಚಂದ್ರ ಚೌಹಾಣ್ ಜಯಸಾಧಿಸಿದ್ದರು. 2014ರ ಚುನಾವಣೆಯಲ್ಲಿಯೂ ಎರಡನೇ ಬಾರಿಗೆ ಚೌಹಾಣ್ ಆಯ್ಕೆಯಾಗಿದ್ದರು. 

ಬಿಜೆಪಿಗೆ ಎನ್‌ಸಿಪಿ ಟಕ್ಕರ್
ಮಹಾರಾಷ್ಟ್ರದ ದಿಂಡೋರಿ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಜಯಗಳಿಸಿದ್ದ ಹರಿಶ್ಚಂದ್ರ ಅವರಿಗೆ ಬಿಜೆಪಿ ಟಿಕೆಟ್ ನೀಡದೆ, ಭಾರತಿ ಪವಾರ್ ಗೆ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಎನ್ಸಿಪಿ ಅಭ್ಯರ್ಥಿಯಾಗಿ ಧನರಾಜ್ ಮಹಾಲೆ ಸ್ಪರ್ಧಿಸುತ್ತಿದ್ದು ಬಿಜೆಪಿಗೆ ಸೋಲಾಗುವ ಸಾಧ್ಯತೆಯಿದೆ. 
 

Trending News