ಬೆಂಗಳೂರು: ರಾಜ್ಯದ ಜನತೆಯನ್ನು ತಮ್ಮ ಅಮಾನುಷ ಕೃತ್ಯದಿಂದ ಭಯಭೀತಗೊಳಿಸಿದ್ದ ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಕೋರರನ್ನು ರಾಜ್ಯದ ತುಘಲಕ್ ಸರ್ಕಾರ ಈಗ ತನ್ನ ಓಲೈಕೆ ರಾಜಕಾರಣದ ಸಲುವಾಗಿ ಬಿಡುಗಡೆಗೊಳಿಸಲು ಮುಂದಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕೆಜಿ ಹಳ್ಳಿ-ಡಿಜೆ ಹಳ್ಳಿ ಗಲಭೆಕೋರರ ಅಮಾನುಷ ಕೃತ್ಯವನ್ನು ರಾಜ್ಯದ ಜನತೆ ಎಂದಿಗೂ ಮರೆಯುವುದಿಲ್ಲ. ಅದೇ ರೀತಿ ಅಂತಹ ಮಾನವೀಯತೆಯನ್ನು ಮರೆತ ಮೃಗಗಳನ್ನು ಬಿಡುಗಡೆಗೊಳಿಸಲು ತಯಾರಾಗಿರುವ ತುಘಲಕ್ ಸರ್ಕಾರದ ಕ್ರಮವನ್ನು ಎಂದಿಗೂ ಕ್ಷಮಿಸಲಾರರು’ ಎಂದು ಟೀಕಿಸಿದೆ.
ಇದನ್ನೂ ಓದಿ: ಈ ಸರ್ಕಾರಕ್ಕೆ ಉಳಿಗಾಲವಿಲ್ಲವೆಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ: ಬಿಜೆಪಿ
‘ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಕೋರರನ್ನು, ಶಿವಮೊಗ್ಗದ ಹರ್ಷ ಹತ್ಯೆಯಲ್ಲಿ ಪಾಲ್ಗೊಂಡ ಕೊಲೆಪಾತಕರನ್ನು ಹಾಗೂ ಮಂಗಳೂರಿನ ಗಲಭೆಯಲ್ಲಿ ಪಾಲ್ಗೊಂಡವರನ್ನೂ ಬಿಡುಗಡೆ ಮಾಡಬೇಕೆಂದು ತನ್ವೀರ್ ಸೇಠ್ ಅವರು ಹೇಳಿರುವುದು ಅಸಮಂಜಸ. ಹಾಗಿದ್ದರೆ ಅವರ ಮೇಲೆ ಹಲ್ಲೆ ಮಾಡಿದವರ ಮೇಲಿನ ಕೇಸ್ ಅನ್ನೂ ವಾಪಸ್ ತೆಗೆಯಲು ಅವರಿಗೆ ಒಪ್ಪಿಗೆ ಇದೆಯೇ? ಇಂತಹ ಇಬ್ಬಗೆಯ ನೀತಿಯನ್ನು ಕಾಂಗ್ರೆಸ್ಸಿಗರು ಬಿಡಬೇಕು’ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿಕೆ ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದೆ.
‘ಈ ನೆಲದ ಕಾನೂನಿಗೆ ಕೊಂಚವೂ ಗೌರವ ನೀಡದೇ, ಪೊಲೀಸ್ ಠಾಣೆಗೆ ನುಗ್ಗಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ ಹುಬ್ಬಳ್ಳಿಯ ಗೂಂಡಾಗಳ ದುಷ್ಕೃತ್ಯವನ್ನು ಕನ್ನಡಿಗರೂ ಎಂದಿಗೂ ಮರೆಯುವುದಿಲ್ಲ. ಅಂತಹವರಿಗೆ ಕ್ಷಮಾದಾನ ನೀಡಲು ಮುಂದಾಗಿರುವ ತುಘಲಕ್ ಸರ್ಕಾರದ ಕೆಟ್ಟ ಕ್ರಮವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸಲಾರರು’ ಎಂದು ಬಿಜೆಪಿ ಕುಟುಕಿದೆ.
ಈ ನೆಲದ ಕಾನೂನಿಗೆ ಕೊಂಚವೂ ಗೌರವ ನೀಡದೇ, ಪೊಲೀಸ್ ಠಾಣೆಗೆ ನುಗ್ಗಿ, ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ ಹುಬ್ಬಳ್ಳಿಯ ಗೂಂಡಾಗಳ ದುಷ್ಕೃತ್ಯವನ್ನು ಕನ್ನಡಿಗರೂ ಎಂದಿಗೂ ಮರೆಯುವುದಿಲ್ಲ.
ಅಂತಹವರಿಗೆ ಕ್ಷಮಾದಾನ ನೀಡಲು ಮುಂದಾಗಿರುವ ತುಘಲಕ್ ಸರ್ಕಾರದ ಕೆಟ್ಟ ಕ್ರಮವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸಲಾರರು. pic.twitter.com/3mi2CW65UW
— BJP Karnataka (@BJP4Karnataka) July 26, 2023
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ: ಬಿಜೆಪಿ ಟೀಕೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.