Smartphones: ಪ್ರಸ್ತುತ, ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್ ಜೊತೆ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಸ್ನೇಹಿತರು, ಸಂಬಂಧಿಕರು ಅಷ್ಟೇ ಏಕೆ ತನ್ನ ಸ್ವಂತ ಕುಟುಂಬದವರಿಗಿಂತಲೂ ಎಲ್ಲರಿಗೂ ಬಹಳ ಮುಖ್ಯವಾದದ್ದು ಈ ಸ್ಮಾರ್ಟ್‌ಫೋನ್. ಅಷ್ಟಕ್ಕೂ, ಸ್ಮಾರ್ಟ್‌ಫೋನ್‌ಗಳಲ್ಲಿ ಜನರು ಹೆಚ್ಚಾಗಿ ಏನನ್ನು ವೀಕ್ಷಿಸುತ್ತಾರೆ ಗೊತ್ತಾ... ಈ ಕುರಿತಂತೆ ಅಧ್ಯಯನವೊಂದು ಶಾಕಿಂಗ್ ಮಾಹಿತಿಯನ್ನು ರಿವೀಲ್ ಮಾಡಿದೆ.
ಸ್ಮಾರ್ಟ್‌ಫೋನ್ ಸಂಬಂಧಿಸಿದಂತೆ ಇತ್ತೀಚಿನ ಅಧ್ಯಯನ ಡಿಜಿಟಲ್ ಸಲಹಾ ಸಂಸ್ಥೆ ಕ್ಯಾಪಿಯೋಸ್ ನೀಡಿರುವ ಅಂಕಿ ಅಂಶಗಳ ಪ್ರಕಾರ, ಇಡೀ ವಿಶ್ವದಲ್ಲಿ ಸುಮಾರು 60% ಜನರು ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದಾರೆ. ಅಂದಾಜಿನ ಪ್ರಕಾರ , ಸುಮಾರು ಐದು ಶತಕೋಟಿಗಳಷ್ಟು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅಂಕಿ-ಅಂಶಗಳಲ್ಲಿ 3.7% ಹೆಚ್ಚಳವಾಗಿದ್ದು, ಇಂಟರ್ನೆಟ್ ಬಳಸುವ ಜನರ ಸಂಖ್ಯೆ 5.19 ಶತಕೋಟಿ ತಲುಪಿದೆ. ಇದು ಇಡೀ ವಿಶ್ವದ ಜನಸಂಖ್ಯೆಯ ಸುಮಾರು 64.5% ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ದೇಶಗಳಿವು
ವರದಿಯಲ್ಲಿ ಹೈಲೈಟ್ ಮಾಡಲಾದ ಪ್ರಮುಖ ವಿಷಯಗಳೆಂದರೆ:
>> ಕಳೆದ ಕೆಲವು ವರ್ಷಗಳಿಗೆ ಹೊಲಿಸಿದರೆ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ.
>> ಪ್ರಮುಖ ವಿಷಯವೆಂದರೆ ಈ ಸಾಮಾಜಿಕ ಮಾಧ್ಯಮಗಳ ಬಳಕೆಯು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ.
>> ಪೂರ್ವ ಮತ್ತು ಮಧ್ಯ ಆಫ್ರಿಕಾದಂತಹ ದೇಶಗಳಲ್ಲಿ ಸುಮಾರು 11 ಜನರಲ್ಲಿ ಒಬ್ಬರು ಮಾತ್ರ ಸಾಮಾಜಿಕ ಮಾಧ್ಯವನ್ನು ಬಳಸುತ್ತಾರೆ.
>> ನಮ್ಮ ಭಾರತದಲ್ಲಿ ಪ್ರತಿ ಮೂರು ಜನರಲ್ಲಿ ಒಬ್ಬರು ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಯಾವ ದೇಶದ ಜನರು ಎಷ್ಟು ಸಮಯ ಕಳೆಯುತ್ತಾರೆ?
ಈ ವರದಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಯಾವ ದೇಶದ ಜನರು ಎಷ್ಟು ಸಮಯ ಕಳೆಯುತ್ತಾರೆ ಎಂಬ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಈ ಸಮಯವು ದಿನದಲ್ಲಿ ಎರಡು ನಿಮಿಷಗಳಿಂದ ಸುಮಾರು 26 ನಿಮಿಷಗಳವರೆಗೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಉದಾಹರಣೆಗೆ:
- ಬ್ರೆಜಿಲ್ ದೇಶದವರು ದಿನಕ್ಕೆ ಸರಾಸರಿ 3 ಗಂಟೆಗಳ 49 ನಿಮಿಷಗಳ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುತ್ತಾರೆ.
- ಜಪಾನ್ ದೇಶದ ಜನರು ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ಗಂಟೆಗೂ ಸಹ ಕಡಿಮೆ ಸಮಯವನ್ನು ವ್ಯಯಿಸುತ್ತಾರೆ ಎನ್ನಲಾಗಿದೆ.
ವಿಶ್ವದಾದ್ಯಂತ ಜನಪ್ರಿಯವಾಗಿರುವ ಮೂರು ಅಪ್ಲಿಕೇಶನ್‌ಗಳು:
ಇನ್ನೂ ವರದಿಯ ಪ್ರಕಾರ, ವಿಶ್ವದಾದ್ಯಂತ ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp), ಇನ್ಸ್ಟಾಗ್ರಾಂ (Instagram) ಮತ್ತು ಫೇಸ್ಬುಕ್ (Facebook) ಅಪ್ಲಿಕೇಶನ್‌ಗಳಲ್ಲಿ ಜನರು ಹೆಚ್ಚು ಸಕ್ರಿಯರಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- Smartphone Tips: ದೀರ್ಘ ಬಾಳಿಕೆಗಾಗಿ ವಾರಕ್ಕೆ ಎಷ್ಟು ಬಾರಿ ಫೋನ್ ರೀಸ್ಟಾರ್ಟ್ ಮಾಡ್ಬೇಕು?
ಯೂಟ್ಯೂಬ್‌ನಲ್ಲಿ ಸಕ್ರಿಯರಾಗಿರುವ ಜನರು ಹೆಚ್ಚಾಗಿ ವೀಕ್ಷಿಸುವುದೇನು?
ಅಧ್ಯಯನದ ಪ್ರಕಾರ, ಸ್ಮಾರ್ಟ್‌ಫೋನ್ ಬಳಕೆದಾರರು ಯೂಟ್ಯೂಬ್‌ನಲ್ಲಿಯೂ ಕೂಡ ಅತಿ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಯುಎಸ್ ನಿಖರವಾದ ಜಾಹೀರಾತುದಾರರ ವರದಿಯ ಪ್ರಕಾರ, ಕಿಡ್ಸ್ (ಪಾರ್ಕ್-ಪಾರ್ಕ್) ಟಿಕ್‌ಟಾಕ್‌ನ ಜನಪ್ರಿಯತೆಯ ಹೊರತಾಗಿಯೂ ಯುಎಸ್‌ನಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಯೂಟ್ಯೂಬ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ಇಲ್ಲಿನ ಹತ್ತರಲ್ಲಿ ಒಂಬತ್ತು ಮಕ್ಕಳು ಯೂಟ್ಯೂಬ್‌ನಲ್ಲಿ ಕಂಟೆಂಟ್ ಅನ್ನು ಪ್ರವೇಶಿಸುತ್ತಾರೆ. ಇದೇ ವೇಳೆ 10ರಲ್ಲಿ ನಾಲ್ಕು ಮಕ್ಕಳು ಮಾತ್ರ ಟಿಕ್‌ಟಾಕ್‌ಗೆ ಪ್ರವೇಶಿಸುತ್ತಾರೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.