ಪ್ರಚಾರದ ವೇಳೆ ಸೈನ್ಯದ ಬಗ್ಗೆ ಉಲ್ಲೇಖಿಸಿದ್ದ ಪ್ರಧಾನಿ ಮೋದಿ ವಿರುದ್ಧ ಶೀಘ್ರ ಕ್ರಮ-ಚುನಾವಣಾ ಆಯೋಗ

ಚುನಾವಣಾ ಪ್ರಚಾರದ ವೇಳೆ ಸೈನ್ಯದ ಬಗ್ಗೆ ಉಲ್ಲೇಖಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

Last Updated : Apr 24, 2019, 06:25 PM IST
ಪ್ರಚಾರದ ವೇಳೆ ಸೈನ್ಯದ ಬಗ್ಗೆ ಉಲ್ಲೇಖಿಸಿದ್ದ ಪ್ರಧಾನಿ ಮೋದಿ ವಿರುದ್ಧ ಶೀಘ್ರ ಕ್ರಮ-ಚುನಾವಣಾ ಆಯೋಗ  title=

ನವದೆಹಲಿ: ಚುನಾವಣಾ ಪ್ರಚಾರದ ವೇಳೆ ಸೈನ್ಯದ ಬಗ್ಗೆ ಉಲ್ಲೇಖಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಇತ್ತೀಚಿಗೆ ಚುನಾವಣಾ ರ್ಯಾಲಿಗಳಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರು ಪ್ರಚಾರದ ಸಂದರ್ಭದಲ್ಲಿ ಸೈನ್ಯವನ್ನು ಉಲ್ಲೇಖಿಸಿದ್ದರು. ಈಗ ಈ ವಿಚಾರವಾಗಿ ಚುನಾವಣಾ ಆಯೋಗದ ಮೂಲಗಳು ಹೇಳುವಂತೆ ಅಂತಹ ಸಂಗತಿಗಳ ಕುರಿತಾಗಿ ಆಯೋಗ ಪರಿಶೀಲನೆ ನಡೆಸುತ್ತಿದ್ದು, ಶೀಘ್ರವೇ ಈ ವಿಚಾರವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿವೆ.ಲೋಕಸಭಾ ಚುನಾವಣೆ ಮುಗಿಯುವವರೆಗೆ ಕಾಯ್ದು ಕುಳಿತುಕೊಳ್ಳುವುದಿಲ್ಲ ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸಲಾಗುವುದು ಎಂದು ಮೂಲಗಳು ಹೇಳಿವೆ.

ಏಪ್ರಿಲ್ 9 ರಂದು ಮಹಾರಾಷ್ಟ್ರದ ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಾ "ಮೊದಲ ಬಾರಿಗೆ ಮತ ಹಾಕುವವರಲ್ಲಿ ನಾನು ವಿನಂತಿಸಿಕೊಳ್ಳುವುದಿಷ್ಟೇ ನಿಮ್ಮ ಮತವನ್ನು ಬಾಲಾಕೊಟ್ ನಲ್ಲಿ ವಾಯುದಾಳಿಯನ್ನು ನಡೆಸಿದ ಸೈನಿಕರಿಗೆ ಅರ್ಪಿಸಲು ಆಗುತ್ತೆ ? ನಿಮ್ಮ ಮೊದಲ ಮತವನ್ನು ಪುಲ್ವಾಮಾ ದಾಳಿಯಲ್ಲಿ  ಮೃತರಾದ ಸೈನಿಕರ ಹೆಸರಿನಲ್ಲಿ ಹಾಕಲು ಸಾಧ್ಯವಾಗುತ್ತದೆಯೇ ? ಎಂದು ಕೇಳಿಕೊಂಡಿದ್ದರು.

ಈ ವಿಚಾರವಾಗಿ ಏಪ್ರಿಲ್ 11 ರಂದು ಪ್ರಧಾನಿ ಮೋದಿಯವರು ನೀತಿ ಸಂಹಿತೆ ಉಲ್ಲಂಘಿಸಿರುವ ಕುರಿತಾಗಿ ಸ್ಥಳೀಯ ಚುನಾವಣಾ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದರು.
 

Trending News