ಅಹಮದಾಬಾದ್: ಲೋಕಸಭಾ ಚುನಾವಣೆಗೆ ಇಂದು 3ನೇ ಹಂತದಲ್ಲಿ 13 ರಾಜ್ಯಗಳ 117 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅಹಮದಾಬಾದ್ನ ರಾಣಿಪ್ ನ ನಿಶಾದ್ ಶಾಲೆಯಲ್ಲಿ ಮತ ಚಲಾಯಿಸಿದರು.
ಪ್ರಧಾನಿ ಮೋದಿ ಮತ ಚಲಾಯಿಸುವ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಉಪಸ್ಥಿತರಿದ್ದರು.
Gujarat: Prime Minister Narendra Modi arrives to cast his vote at polling booth in Nishan Higher Secondary School in Ranip, Ahmedabad; BJP President Amit Shah also present pic.twitter.com/wu3Y5EopRF
— ANI (@ANI) April 23, 2019
ಮತದಾನಕ್ಕೂ ಮೊದಲು ಗಾಂಧಿನಗರದಲ್ಲಿ ತಮ್ಮ ನಿವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿ ಹಿರಾಬೆನ್ ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಹಿರಾಬೆನ್ ಪ್ರಧಾನಿ ಮೋದಿಗೆ ತೆಂಗಿನಕಾಯಿ ನೀಡಿ ಆಶೀರ್ವದಿಸಿದರು.
#WATCH PM Narendra Modi meets his mother Heeraben Modi at her residence in Gandhinagar and takes her blessings. #Gujarat pic.twitter.com/uRGsGX0fcw
— ANI (@ANI) April 23, 2019
ನಂತರ ತೆರೆದ ವಾಹನದಲ್ಲಿ ಅಹಮದಾಬಾದ್ನ ರಾಣಿಪ್ ನ ನಿಶಾದ್ ಶಾಲೆಯಲ್ಲಿನ ಮತಗಟ್ಟೆಗೆ ಆಗಮಿಸಿದ ಮೋದಿ ತಮ್ಮ ಮತ ಚಲಾಯಿಸಿದರು. ಬಳಿಕ ದೇಶದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ನಾಗರೀಕರಿಗೆ ಕರೆ ನೀಡಿದರು.
#WATCH PM Narendra Modi after casting his vote in Ahmedabad says, " The weapon of terrorism is IED, the strength of democracy is voter ID." #LokSabhaElections2019 pic.twitter.com/X0LBPI5qcu
— ANI (@ANI) April 23, 2019