Farming Tips : ಮುಸುಕಿನ ಜೋಳದಲ್ಲಿ ಸೈನಿಕ ಹುಳುವಿನ ಭಾದೆಗೆ ಇಲ್ಲಿದೆ ಪರಿಹಾರ

ಕೃಷಿ ಇಲಾಖೆಯ ಕೃಷಿ ಅಧಿಕಾರಿ ನವ್ಯ ನಾಣಯ್ಯ ಇವರನ್ನು ಒಳಗೊಂಡ ತಂಡ ಕುಶಾಲನಗರ ತಾಲ್ಲೂಕಿನ ಮರೂರು ಗ್ರಾಮದ ಮಹೇಶ್ ಮತ್ತು ಕಪನಪ್ಪನವರ ಮುಸುಕಿನ ಜೋಳದ ಗದ್ದೆಗಳಿಗೆ ಭೇಟಿ ಕೊಟ್ಟು, ಸೈನಿಕ ಹುಳುವಿನ ಭಾದೆಯನ್ನು ಪರೀಶೀಲಿಸಿದರು. 

Written by - Manjunath N | Last Updated : Jul 13, 2023, 03:37 PM IST
  • ದೀಪಗಳಿಗೆ ಪತಂಗವು ಆಕರ್ಷಣೆಯಾಗುವುದರಿಂದ ರಾತ್ರಿ ವೇಳೆ ದೀಪದ ಬಲೆಯನ್ನು ಅಳವಡಿಸಬೇಕು
  • ಜಮೀನಿನ ಸುತ್ತಾ ಒಂದು ಅಡಿ ಆಳ ಗುಂಡಿ ತೆಗೆದು ಅದಕ್ಕೆ ಎಲೆಗಳಿಂದ ಮುಚ್ಚುವುದರಿಂದ ಹಗಲಿನಲ್ಲಿ ಮರಿಗಳು ಬಂದು ಶೇಖರಣಯಾಗುತ್ತವೆ
  • ಗುಂಡಿಗಳಿಗೆ ರಾಸಾಯನಿಕ ಸಿಂಪರಣೆ ಮಾಡಿ ಮರಿಗಳನ್ನು ಬಹುಭಾಗ ನಾಶಪಡಿಸಬಹುದು
 Farming Tips : ಮುಸುಕಿನ ಜೋಳದಲ್ಲಿ ಸೈನಿಕ ಹುಳುವಿನ ಭಾದೆಗೆ ಇಲ್ಲಿದೆ ಪರಿಹಾರ title=

ಮಡಿಕೇರಿ : ಸೈನಿಕ ಹುಳು ಕೀಟವು ಹಗಲು ವೇಳೆಯಲ್ಲಿ ಮಣ್ಣು, ಕಾಂಡದ ಮಧ್ಯ ಮತ್ತು ಗರಿಗಳ ತಳಭಾಗದಲ್ಲಿ ವಾಸಿಸುತ್ತಿದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಇದರ ಚಟುವಟಿಕೆ ಕ್ರೀಯಾಶೀಲವಾಗುತ್ತದೆ. ಈ ಕೀಟವು ಮುಸುಕಿನ ಜೋಳದ ಎಲೆ ಮತ್ತು ತೆನೆಯನ್ನು ಕತ್ತರಿಸುವ ಕಾರ್ಯ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಕಂಡುಬರುತ್ತದೆ.

ಹಗಲಿನ ಹೊತ್ತಿನಲ್ಲಿ ಈ ಕೀಟದ ಕಾರ್ಯಚಟುವಟಿಕೆ ಕಣ್ಣಿಗೆ ಕಾಣದಂತಾಗಿ ರೈತರಲ್ಲಿ ಆತಂಕ ಪಡುವ ಪರಿಸ್ಥಿಯನ್ನು ಈ ಕೀಟವು ತರುತ್ತದೆ.ತೀವ್ರವಾಗಿ ಹಾನಿಗೊಳಗಾದ ಬೆಳೆಯಲ್ಲಿ ಎಲೆಯ ದಿಂಡು ಮಾತ್ರ ಕಾಣಸಿಗುತ್ತದೆ.

ಕೃಷಿ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ:

ಇದನ್ನೂ ಓದಿ: ʻಶಕ್ತಿʼ ಯೋಜನೆಯಿಂದ ʻಮರು ಶಕ್ತಿʼ ಪಡೆದ ಬಸ್‌ ನಿಲ್ದಾಣ

ಹತೋಟಿ ಕ್ರಮಗಳು: ದೀಪಗಳಿಗೆ ಪತಂಗವು ಆಕರ್ಷಣೆಯಾಗುವುದರಿಂದ ರಾತ್ರಿ ವೇಳೆ ದೀಪದ ಬಲೆಯನ್ನು ಅಳವಡಿಸಬೇಕು.ಜಮೀನಿನ ಸುತ್ತಾ ಒಂದು ಅಡಿ ಆಳ ಗುಂಡಿ ತೆಗೆದು ಅದಕ್ಕೆ ಎಲೆಗಳಿಂದ ಮುಚ್ಚುವುದರಿಂದ ಹಗಲಿನಲ್ಲಿ ಮರಿಗಳು ಬಂದು ಶೇಖರಣಯಾಗುತ್ತವೆ. ಗುಂಡಿಗಳಿಗೆ ರಾಸಾಯನಿಕ ಸಿಂಪರಣೆ ಮಾಡಿ ಮರಿಗಳನ್ನು ಬಹುಭಾಗ ನಾಶಪಡಿಸಬಹುದು. ಗುಂಡಿಗೆ ಬೂದಿಯನ್ನು ಹಾಕುವುದರಿಂದ ಹುಳುಗಳ ಚಲನೆಯನ್ನು ನಿಯಂತ್ರಿಸಬಹುದು. ಈ ಕೀಟದ ಭಾದೆ ಮುಸುಕಿನ ಜೋಳದಲ್ಲಿ ಕಂಡು ಬಂದರೆ ಸಂಜೆ ವೇಳೆಯಲ್ಲಿ ಅಂದರೆ ಸಾಯಂಕಾಲ 5.30ರ ನಂತರ ಎಮಾಮೆಕ್ಟಿನ್ ಬೆಂಜೋಯೆಟ್ 0.3 ಗ್ರಾಂ ಪ್ರತಿ ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಈ ಕೀಟದ ಭಾದೆಯು ಸಂಜೆ ಹೊತ್ತು ಕ್ರೀಯಶೀಲವಾಗಿರುವುದರಿಂದ ಸಿಂಪರಣೆಯನ್ನು ಕಡ್ಡಾಯವಾಗಿ ಸಂಜೆ ಹೊತ್ತಿನಲ್ಲಿಯೇ ಮಾಡಬೇಕು. 

 

Trending News