ಬೆಂಗಳೂರು: ಗಾಡಿ ಟಚ್ ಆಗಿದೆ ಎಂದು ಸುಳ್ಳು ಹೇಳಿದ ಮೂವರು ಆರೋಪಿಗಳು ಟೊಮ್ಯಾಟೊ ತುಂಬಿದ್ದ ಬೊಲೋರೊ ವಾಹನವನ್ನ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಈ ಸಂಬಂಧ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯೂರಿನ ರೈತನೋರ್ವ ಜಮೀನಿನಲ್ಲಿ ಬೆಳೆದಿದ್ದ 250 ಟ್ರೈನಲ್ಲಿ ತುಂಬಿಕೊಂಡು ಕೋಲಾರಕ್ಕೆ ಹೋಗುತ್ತಿದ್ದರು.
ಇದನ್ನೂ ಓದಿ-ವಿಧಾನಸಭೆಗೆ ಅನಾಮಿಕನ ಪ್ರವೇಶ -ದ್ವಿಗುಣ ಭದ್ರತೆ: ಸ್ಪೀಕರ್ ಖಾದರ್ ಪರಿಶೀಲನೆ
ಆರ್ ಎಂಸಿ ಬಳಿ ಬಳಿ ಬರುವಾಗ ಕಾರಿನಲ್ಲಿದ್ದ ಬಂದಿದ್ದ ಮೂವರು ಆಸಾಮಿಗಳು ಗಾಡಿ ಟಚ್ ಆಗಿದೆ ಎಂದು ನಾಟಕವಾಡಿ ಬಲವಂತದಿಂದ ಗಾಡಿ ನಿಲ್ಲಿಸಿ ಚಾಲಕನಿಗೆ ಥಳಿಸಿದ್ದಾರೆ. ನಂತರ ವಾಹನದಲ್ಲಿದ್ದ ರೈತನ ಮೇಲೆ ಹಲ್ಲೆ ಮಾಡಿ ಅಪಘಾತವಾಗಿದೆ ಹಣ ಕೊಡಿ ಎಂದು ಒತ್ತಾಯಿಸಿದ್ದಾರೆ. ಹಣವಿಲ್ಲ ಎಂದಾಗ ಮೊಬೈಲ್ ನಲ್ಲಿದ್ದ ಹಣ ಟ್ರಾನ್ಸಫರ್ ಮಾಡುವಂತೆ ಅವಾಜ್ ಹಾಕಿದ್ದಾರೆ. ನಂತರ ಟೊಮ್ಯಾಟೊ ನೋಡಿ ಗಾಡಿಯಲ್ಲಿ ರೈತನನ್ನ ಕೂರಿಸಿಕೊಂಡು ಹೋಗಿದ್ದಾರೆ.
ಚಿಕ್ಕಜಾಲ ಬಳಿ ಡ್ರೈವರ್ ನ ಬಿಟ್ಟು ಟೊಮ್ಯಾಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಆರ್ ಎಮ್ ಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ಫುಟೇಜ್ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಪೊಲೀಸರು ಟೊಮ್ಯಾಟೊ ಕದ್ದ ಆರೋಪಿಗಳಿಗಾಗಿ ಖೆಡ್ಡಾ ತೋಡಿದ್ದಾರೆ.
ಇದನ್ನೂ ಓದಿ-ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ: ಯತ್ನಾಳ್ ಆರೋಪ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj