ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ 2023-24ನೇ ಸಾಲಿನ ರಾಜ್ಯ ಬಜೆಟ್ನಿಂದ ಮದ್ಯ ಪ್ರಿಯರಿಗೆ ಬಿಗ್ ಶಾಕ್ ಉಂಟಾಗಿದೆ. ರಾಜ್ಯದಲ್ಲಿ ಅಧಿಕವಾಗಿ ಮದ್ಯ ಮಾರಾಟ ಆಗುತ್ತಿರುವುದನ್ನು ಗಮನಿಸಿದ ರಾಜ್ಯ ಸರ್ಕಾರವು ಮದ್ಯದ ಮೇಲೆ ತೆರಿಗೆ ಬರೆ ಎಳೆದಿದೆ.
ಕಳೆದ ಎರಡೂ ಮೂರು ವರ್ಷದ ನಂತರ ಇದೀಗ ಮದ್ಯ ಪ್ರಿಯರಿಗೆ ಕೊಂಚ ಬೇಸರ ತಂದೊಡ್ಡಿದೆ. ಮದ್ಯ ಪ್ರಿಯರ ಮದ್ಯದ ಬೆಲೆಯನ್ನು ಶೇ.20ರಷ್ಟು ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಶೇ.20ರಷ್ಟು ಲಾಭಾಂಶ ಇತ್ತು. ಆದರೆ ಇದೀಗ ಶೇ.10ರಷ್ಟು ಮಾತ್ರ ಲಾಭಾಂಶ ಸಿಗತ್ತಿದೆ.
ಇದನ್ನೂ ಓದಿ: ಗಜೇಂದ್ರಗಡದಲ್ಲಿ ಬೀದಿ ನಾಯಿಗಳ ದಾಳಿ: ಬಾಲಕನಿಗೆ ಗಂಭೀರ ಗಾಯ
ಇವತ್ತಿನ ದುಬಾರಿ ದುನಿಯಾದಲ್ಲಿ ನಮಗೆ ಲಾಭದ ಮೇಲೆ ಜೀವನ ಕಷ್ಟ ವಾಗುತ್ತದೆ. ನಮಗೆ ಶೇ.20ರಷ್ಟು ಲಾಭಾಂಶವನ್ನು ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಮದ್ಯ ಮಾರಾಟಗಾರರು ಒತ್ತಾಯಿಸಿದ್ದಾರೆ. ಬಾರ್ ಬಾಡಿಗೆ, ಕೆಲಸಗಾರರು ಸಂಬಳದ ಜೊತೆಗೆ ನಿರ್ವಹಣಾ ಹೆಚ್ಚಳದಿಂದಾಗಿ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಹೀಗಾಗಿ ಸರ್ಕಾರವು ಬಿಯರ್ ಮೇಲೆ ಶೇ.10ರಷ್ಟು ಮತ್ತು ಮದ್ಯದ (ಲಿಕ್ಕರ್) 18 ಸ್ಲಾಬ್ಗಳ ಮೇಲೆ ಶೇ.20ರಷ್ಟು ತೆರಿಗೆಯನ್ನು ಹೆಚ್ಚಳ ಮಾಡಿದೆ. ಇದರಿಂದ ಒಟ್ಟು 36 ಸಾವಿರ ಕೋಟಿ ರೂ. ಆದಾಯವನ್ನು ಸರ್ಕಾರ ನಿರೀಕ್ಷೆ ಮಾಡಿದೆ. ಒಟ್ನಲ್ಲಿ ಬಜೆಟ್ನಲ್ಲಿ ಮದ್ಯಪ್ರಿಯರಿಗೆ ಸರ್ಕಾರ ತೆರಿಗೆ ಏರಿಸುವ ಮೂಲಕ ಶಾಕ್ ನೀಡಿದೆ.
ಇದನ್ನೂ ಓದಿ: ಮಳೆಗಾಗಿ ವರುಣ ದೇವನಿಗೆ ಮೊರೆ ಹೋದ ಕೃಷಿ ಸಚಿವ ಚೆಲುವರಾಯಸ್ವಾಮಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.