How To Burn Belly Fat: ಅಲೋವೆರಾ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಮೇಜ್ಞಿಸಿಯಮ್, ಕಬ್ಬಿಣ ಮತ್ತು ಮ್ಯಾಂಗನೀಸ್ ಗಳ ಆಗರವಾಗಿದೆ. ಇಷ್ಟೆಲ್ಲಾ ವಿಟಮಿನ್ ಗಳ ಉಗ್ರಾಣವಾಗಿರುವ ಅಲೋವೆರಾ ಅತ್ಯುತ್ತಮ ಆರೋಗ್ಯವನ್ನು ಒದಗಿಸುತ್ತದೆ. ಮಾತ್ರವಲ್ಲ, ಇದನ್ನು ತೂಕ ನಷ್ಟಕ್ಕೂ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಅಲೋವೆರಾದ ಪ್ರಯೋಜನಗಳೇನು? ತೂಕ ನಷ್ಟಕ್ಕಾಗಿ ಅಲೋವೆರಾವನ್ನು ಯಾವ ರೀತಿ ಬಳಸಬೇಕು ಎಂದು ತಿಳಿಯೋಣ...
ಅಲೋವೆರಾದ ಪ್ರಯೋಜನಗಳಿವು:
>> ಚಯಾಪಚಯ ಹೆಚ್ಚಳ:
ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಅಲೋವೆರಾವನ್ನು ಸೇವಿಸುತ್ತಾ ಬಂದರೆ ಅದು ಚಯಾಪಚಯವನ್ನು ಹೆಚ್ಚಿಸುತ್ತದೆ.
>> ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ:
ನಿತ್ಯ ಖಾಲಿ ಹೊಟ್ಟೆಯಲ್ಲಿ ಅಲೋವೆರಾವನ್ನು ಸೇವಿಸುವುದರಿಂದ ಉದರ ಸಂಬಂಧಿತ ಸಮಸ್ಯೆಗಳಿಂದಲೂ ಮುಕ್ತಿ ದೊರೆಯಲಿದೆ.
ಇದನ್ನೂ ಓದಿ- Superfoods For Children: ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು 5 ಸೂಪರ್‌ಫುಡ್‌ಗಳಿವು
ತೂಕ ನಷ್ಟಕ್ಕಾಗಿ ಅಲೋವೆರಾವನ್ನು ಯಾವ ರೀತಿ ಬಳಸಬೇಕು ಎಂದು ತಿಳಿಯೋಣ...
* ಬೆಚ್ಚಗಿನ ನೀರಿನೊಂದಿಗೆ ಅಲೋವೆರಾ:
ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಅಲೋವೆರಾ ರಸವನ್ನು ಬೆರೆಸಿ ಕುಡಿಯುವುದರಿಂದ ಸುಲಭವಾಗಿ ತೂಕ ಇಳಿಸಬಹುದು.
* ನಿಂಬೆ ರಸದೊಂದಿಗೆ ಅಲೋವೆರಾ:
ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಸ್ಪೂನ್ ಅಲೋವೆರಾ ರಸ ಮತ್ತು ಒಂದು ಚಮಚ ನಿಂಬೆ ರಸವನ್ನು ಬೆರೆಸಿ ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
* ಆಹಾರ ಸೇವಿಸುವ ಮೊದಲು ಅಲೋವೆರಾ ರಸ ಸೇವಿಸಿ :
ಒಂದೊಮ್ಮೆ ನೀವು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಸೇವಿಸಲು ಸಾಧ್ಯವಾಗದಿದ್ದರೆ ನೀವು ಆಹಾರ ಸೇವಿಸುವ 15 ರಿಂದ 20 ನಿಮಿಷಗಳ ಮೊದಲು ಒಂದು ಸ್ಪೂನ್ ಅಲೋವೆರಾ ರಸವನ್ನು ಸೇವಿಸಿ.
ಇದನ್ನೂ ಓದಿ- Dark Underarms: ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಗೆ ನೈಸರ್ಗಿಕ ಮನೆಮದ್ದು
* ಅಲೋವೆರಾ ಮತ್ತು ಅಮೃತಬಳ್ಳಿ:
ನಿಮಗೆಲ್ಲಾ ತಿಳಿದಿರುವಂತೆ ಅಮೃತಬಳ್ಳಿ ಒಂದು ಔಷಧೀಯ ಸಸ್ಯಗಳಿಂದ ಸಮೃದ್ಧವಾಗಿರುವ ಸಸ್ಯ. ಆಯುರ್ವೇದದ ಪ್ರಕಾರ, ಒಂದು ಚಮಚ ಅಲೋವೆರಾ ರಸ ಮತ್ತು ಒಂದು ಚಮಚ ಅಮೃತಬಳ್ಳಿ ರಸವನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಆಲೋವೆರಾವನ್ನು ಈ ರೀತಿ ಬಳಸಿದರೆ ಶೀಘ್ರದಲ್ಲೇ ನಿಮ್ಮ ಹೊಟ್ಟೆ ಬೆಣ್ಣೆಯಂತೆ ಕರಗುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.