Shubh Yoga: ದೇವಗುರು ಬೃಹಸ್ಪತಿ ಹಾಗೂ ಸೇನಾಪತಿ ಮಂಗಳನ ಕೃಪೆಯಿಂದ ನವಪಂಚಮ ಯೋಗ ನಿರ್ಮಾಣ, 4 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ ಯೋಗ!

Guru Mangala Yoga: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಗ್ರಹ ಹಾಗೂ ದೇವತೆಗಳ ಗುರು ಎಂದೇ ಕರೆಯಲಾಗುವ ಬೃಹಸ್ಪತಿಯ ಮೈತ್ರಿಯಿಂದ ನವಪಂಚಮ ಯೋಗ ನಿರ್ಮಾಣಗೊಂಡಿದೆ. ಈ ಎರಡೂ ದೊಡ್ಡ ಗ್ರಹಗಳ ಮೈತ್ರಿಯಿಂದ ಒಟ್ಟು ನಾಲ್ಕು ರಾಶಿಗಳ ಜಾತಕದವರಿಗೆ ಭಾರಿ ಧನಲಾಭ ಹಾಗೂ ಭಾಗ್ಯೋದಯ ಯೋಗ ನಿರ್ಮಾಣಗೊಂಡಿದೆ.   

Written by - Nitin Tabib | Last Updated : Jul 3, 2023, 03:04 PM IST
  • ಪ್ರಸ್ತುತ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ತನ್ನ ನೀಚ ರಾಶಿಯಾಗಿರುವ ಕರ್ಕ ರಾಶಿಯನ್ನು ತೊರೆದು ಸೂರ್ಯನ ರಾಶಿಯಾಗಿರುವ ಸಿಂಹ ರಾಶಿಗೆ ಪ್ರವೇಶಿಸಿದೆ.
  • ಇದರಿಂದ ಅಲ್ಲಿ ದೇವಗುರು ಬೃಹಸ್ಪತಿ ಹಾಗೂ ಮಂಗಳನ ಮೈತ್ರಿ ನೆರವೇರಿ ನವಪಂಚಮ ಯೋಗ ನಿರ್ಮಾಣಗೊಂಡಿದೆ. ಈ ಶುಭ ಯೋಗದ ಕಾರಣ ಒಟ್ಟು 4 ರಾಶಿಗಳ ಜನರಿಗೆ
  • ಅಪಾರ ಧನಲಾಭ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Shubh Yoga: ದೇವಗುರು ಬೃಹಸ್ಪತಿ ಹಾಗೂ ಸೇನಾಪತಿ ಮಂಗಳನ ಕೃಪೆಯಿಂದ ನವಪಂಚಮ ಯೋಗ ನಿರ್ಮಾಣ, 4 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ ಯೋಗ! title=

Navpancham Yoga 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಪರಿವರ್ತಿಸುವ ಮೂಲಕ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಈ ಯೋಗಗಳು ಭೂಮಿಯ ಮೇಲಿರುವ ಸಕಲ ಚರಾಚರ ಮತ್ತು ದ್ವಾದಶ ರಾಶಿಗಳ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ. ಪ್ರಸ್ತುತ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ತನ್ನ ನೀಚ ರಾಶಿಯಾಗಿರುವ ಕರ್ಕ ರಾಶಿಯನ್ನು ತೊರೆದು ಸೂರ್ಯನ ರಾಶಿಯಾಗಿರುವ ಸಿಂಹ ರಾಶಿಗೆ ಪ್ರವೇಶಿಸಿದೆ. ಇದರಿಂದ ಅಲ್ಲಿ ದೇವಗುರು ಬೃಹಸ್ಪತಿ ಹಾಗೂ ಮಂಗಳನ ಮೈತ್ರಿ ನೆರವೇರಿ ನವಪಂಚಮ ಯೋಗ ನಿರ್ಮಾಣಗೊಂಡಿದೆ. ಈ ಶುಭ ಯೋಗದ ಕಾರಣ ಒಟ್ಟು 4 ರಾಶಿಗಳ ಜನರಿಗೆ ಅಪಾರ ಧನಲಾಭ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,

ಕರ್ಕ ರಾಶಿ- ಕರ್ಕ ರಾಶಿಯ ಜಾತಕದವರ ಪಾಲಿಗೆ ನವಪಂಚಮ ಯೋಗ ಅತ್ಯುತ್ತಮ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಲ್ಲಿ ಮಂಗಳ ಕರ್ಕ ಭಾವದ ಅಧಿಪತಿಯಾಗಿ ಧನ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಇನ್ನೊಂದೆಡೆ ಗುರು ಅಲ್ಲಿಂದ ತನ್ನ ಕಾರಕ ಸ್ಥಾನದ ಮೇಲೆ ದೃಷ್ಟಿಯನ್ನು ಬೀರಿದ್ದಾನೆ. ಇದರಿಂದ ಮಂಗಳ ನಿಮಗೆ ಸಾಕಷ್ಟು ಹಣ ನೀಡಲಿದ್ದಾನೆ. ನಿಮಗೆ ಆಕಸ್ಮಿಕ ಧನಲಾಭವಾಗಲಿದ್ದು. ನಿಮಗೆ ಬರಬೇಕಾದ ಮತ್ತು ನಿಂತುಹೋದ ನಿಮ್ಮ ಹಣ ನಿಮ್ಮ ಕೈಸೇರಲಿದೆ. ಇದಲ್ಲದೆ ನಿಮಗೆ ನಿಮ್ಮ ಕರ್ಮದ ಕಾರಣ ಕೂಡ ಹಣ ಸಿಗಲಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ವಾಹನ ಅಥವಾ ಆಸ್ತಿ ಖರೀದಿಸುವ ಕುರಿತು ಕೂಡ ಯೋಚಿಸಬಹುದು. ನೌಕರ ವರ್ಗದ ಜನರಿಗೆ ಈ ಅವಧಿಯಲ್ಲಿ ಪ್ರಮೋಷನ್ ಭಾಗ್ಯ ಒದಗಿ ಬರುವ ಸಾಧ್ಯತೆ ಇದೆ. 

ತುಲಾ ರಾಶಿ- ತುಲಾ ರಾಶಿಯ ಜಾತಕದವರ ವೃತ್ತಿಜೀವನ, ವ್ಯಾಪಾರಕ್ಕೆ ನವಪಂಚಮಯೋಗ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಧನ ಭಾವಕ್ಕೆ ಅಧಿಪತಿಯಾಗಿರುವ ಮಂಗಳ ಲಾಭ ಸ್ಥಾನದಲ್ಲಿದ್ದಾನೆ. ಇನ್ನೊಂದೆಡೆ ಪತ್ನಿ ಭಾವದ ಅಧಿಪತಿ ಕೂಡ ಲಾಭ ಸ್ಥಾನದಲ್ಲಿದ್ದಾನೆ. ಹೀಗಾಗಿ ನಿಮ್ಮ ಆದಾಯದಲ್ಲಿ ಏಕಾಏಕಿ ಹೆಚ್ಚಳವನ್ನು ನೀವು ಕಾಣಬಹುದು. ಬಾಳಸಂಗಾತಿಯಿಂದಲೂ ಕೂಡ ನಿಮಗೆ ಧಣಪ್ರಾಪ್ತಿಯಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದ್ದು, ವಿವಾಹ ನಿಶ್ಚಿತವಾಗಲಿದೆ. 

ಮೇಷ ರಾಶಿ- ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿ ಹಾಗೂ ಸಿಂಹ ರಾಶಿಯಲ್ಲಿ ಸೂರ್ಯನಿದ್ದಾನೆ ಹಾಗೂ ಗುರುವಿನ ದೃಷ್ಟಿ ಇಲ್ಲಿ ಮಂಗಳನ ಮೇಲಿದೆ. ಹೀಗಾಗಿ ನಿರ್ಮಾಣಗೊಂಡ ನವಪಂಚಮ ಯೋಗ ಮೇಷ ಜಾತಕದವರ ಪಾಲಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಇದರಿಂದ ನಿಮ್ಮ ಘನತೆ-ಗೌರವ ಹೆಚ್ಚಾಗಲಿದೆ. ಸಂತಾನದ ಕಡೆಯಿಂದ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ ಮತ್ತು ಉನ್ನತ ವಿಷಯದಲ್ಲಿ ಅಧ್ಯಯನ ನಡೆಸಲು ಬಯಸುವ ವಿದ್ಯಾರ್ಥಿಗಳಿಗೆ ಈ ಸಮಯ ಅತ್ಯಂತ ಅನುಕೂಲಕರವಾಗಿದೆ. ಇನ್ನೊಂದೆಡೆ ಸರ್ಕಾರಿ ನೌಕರಿಗಾಗಿ ಸಿದ್ಧತೆ ನಡೆಸುತ್ತಿರುವವರಿಗೆ ನೌಕರಿ ಭಾಗ್ಯ ಒದಗಿ ಬರಲಿದೆ ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಜೊತೆಗೆ ನಿಮ್ಮ ಒಡನಾಟ ಹೆಚ್ಚಾಗಲಿದೆ. 

ಇದನ್ನೂ ಓದಿ-Mars Sun Conjunction: ಒಂದು ವರ್ಷದ ಬಳಿಕ ಸೂರ್ಯ-ಮಂಗಳರ ಮೈತ್ರಿ, 3 ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ!

ಸಿಂಹ ರಾಶಿ- ಸಾಮಾನ್ಯವಾಗಿ ಜೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯಲ್ಲಿ ಮಂಗಳ ಗ್ರಹ ಯೋಗಕಾರಕನಾಗಿರುತ್ತಾನೆ. ಹೀಗಾಗಿ ನವಪಂಚಮ ಯೋಗ ನಿಮ್ಮ ಜಾತಕಕ್ಕೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಅಷ್ಟೇ ಅಲ್ಲ ನಿಮ್ಮ ಜಾತಕದ ಭಾಗ್ಯ ಸ್ಥಾನದಲ್ಲಿ ವಿರಾಜಮಾನನಾಗಿರುವ ಗುರು ತನ್ನ ದೃಷ್ಟಿಯನ್ನು ಮಂಗಳನ ಮೇಲೆ ಬೀರಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಭಾಗ್ಯೋದಯ ನಿಶ್ಚಿತ ಎನ್ನಲಾಗುತ್ತಿದೆ. ಈ ಅವಧಿಯಲ್ಲಿ ನಿಂತುಹೋದ ನಿಮ್ಮ ಕೆಲಸ ಕಾರ್ಯಗಳಿಗೆ ಮತ್ತೆ ಗತಿ ಸಿಗಲಿದೆ ಮತ್ತು ನೀವು ವಿದೇಶ ಯಾತ್ರೆಯೂ ಕೈಗೊಳ್ಳುವ ಸಾಧ್ಯತೆ ಇದೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ತಂದೆಯ ಬೆಂಬಲ ಸಿಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಯಶಸ್ಸಿನ ಯೋಗ ನಿರ್ಮಾಣಗೊಂಡಿದೆ.

ಇದನ್ನೂ ಓದಿ-Rajyog In Simha Rashi: ಆದಿತ್ಯನ ರಾಶಿಯಲ್ಲಿ 'ಬುಧಾದಿತ್ಯ ರಾಜಯೋಗ' ಈ ರಾಶಿಗಳ ಜನರಿಗೆ ಸಿಗಲಿದೆ ಅಪಾರ ಧನಸಂಪತ್ತು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News