ನಾನು ಎಲ್ಲಿ ಕೆಲಸ ಮಾಡಲು ಇಚ್ಚಿಸಿದ್ದೇನೋ ಅಲ್ಲಿಂದಲೇ ನನಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಇದು ನನ್ನ ಹುಟ್ಟು ಹಬ್ಬಕ್ಕೆ ಬಿಜೆಪಿಯಿಂದ ದೊರೆತ ಬಹುದೊಡ್ಡ ಉಡುಗೊರೆಯಾಗಿದೆ ಎಂದು ಜಯಪ್ರದಾ ಹೇಳಿದ್ದಾರೆ.
ನವದೆಹಲಿ: ರಾಮ್ಪುರ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಅಭ್ಯರ್ಥಿ ಜಯಪ್ರದಾ ತಮ್ಮ ಜನ್ಮದಿನದಂದೇ(ಎಪ್ರಿಲ್ 03) ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ನಾನು ಎಲ್ಲಿ ಕೆಲಸ ಮಾಡಲು ಇಚ್ಚಿಸಿದ್ದೇನೋ ಅಲ್ಲಿಂದಲೇ ನನಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಇದು ನನ್ನ ಹುಟ್ಟು ಹಬ್ಬಕ್ಕೆ ಬಿಜೆಪಿಯಿಂದ ದೊರೆತ ಬಹುದೊಡ್ಡ ಉಡುಗೊರೆ ಎಂದು ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮೊದಲು ಭರ್ಮೌರ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಜಯಪ್ರದಾ, ಶಿವನ ಆಶೀರ್ವಾದ ಪಡೆದರು.
ಬಿಜೆಪಿ ಅಭ್ಯರ್ಥಿ ಜಯಪ್ರದಾ ಬಳಿಕ ಹಜರತ್ ರಹಮಾನ್ ಅಲೌದ್ದೀನ್ ಚಿಸ್ತಿಯನ್ನು ತಲುಪಿ ಪ್ರಾರ್ಥನೆ ಸಲ್ಲಿಸಿದರು. ಅವರ ಜನ್ಮದಿನದ ಅಂಗವಾಗಿ ಅವರು ಮಕ್ಕಳಿಗೆ ಸಿಹಿತಿಂಡಿಗಳನ್ನು ವಿತರಿಸಿದರು.
ಜೀ ಮೀಡಿಯಾದೊಂದಿಗೆ ವಿಶೇಷ ಸಂಭಾಷಣೆಯಲ್ಲಿ ಮಾತನಾಡಿದ ಜಯಪ್ರದಾ ಅಭಿವೃದ್ಧಿ, ರಕ್ಷಣೆ ಮತ್ತು ಮಹಿಳೆಯರಿಗೆ ಗೌರವವು ನಮಗೆ ಮುಖ್ಯವಾದ ವಿಷಯವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ಕೆಲಸವನ್ನು ಮುಂದಿಟ್ಟು ನಾವು ಚುನಾವಣೆಗೆ ಹೋಗುತ್ತಿದ್ದೇವೆ ಎಂದರು.
ರಾಮ್ಪುರದ ಜನರ ಪ್ರೀತಿ, ಅಭಿಮಾನದಿಂದಲೇ ನಾನು ಸಕ್ರಿಯ ರಾಜಕಾರಣಕ್ಕೆ ಬಂದಿದ್ದೇನೆ. ಚುನಾವಣೆಯಲ್ಲಿ ಗೆಲುವು ಸ್ವಲ್ಪ ಕಷ್ಟ ಎಂದು ಭಾವಿಸಿದ್ದೆ. ಆದರೆ, ಇಲ್ಲಿಯ ಜನ ನನ್ನೊಂದಿಗಿರುವುದಾಗಿ ಧೈರ್ಯ ತುಂಬಿ, ಭರವಸೆ ನೀಡಿದ್ದಾರೆ. ಚುನಾವಣೆಯಲ್ಲಿ ಗೆಲುವು ಖಚಿತ ಎಂದರು.
ಎಪ್ರಿಲ್ 03, 1962 ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಜಯಪ್ರದಾ ಇಂದು ತಮ್ಮ 57ನೇ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ತೆಲುಗು ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ಜಯಪ್ರದಾ ಈವರೆಗೂ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.