ತ್ರಿಪುರಾ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರಾದ 60 ಮತದಾನ ಕೇಂದ್ರಗಳ ಸಂಪೂರ್ಣ ಮೇಲ್ವಿಚಾರಣೆಯನ್ನು ಮಹಿಳೆಯರೇ ನಡೆಸಲಿದ್ದಾರೆ ಎಂದು ರಾಜ್ಯ ಚುನಾವಣಾ ಅಧಿಕಾರಿ ಶ್ರೀರಾಮ್ ತಾರಾನಿಕಾಂತಿ ತಿಳಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಆದೇಶ ಪಾಲನೆಯಂತೆ ತ್ರಿಪುರಾದ ಈ 60 ಮತದಾನ ಕೇಂದ್ರಗಳಲ್ಲಿ ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಮತ ಚಲಾಯಿಸಲು ಅವಕಾಶವಿದೆ. ಆದರೆ, ಈ ಮತದಾನ ಕೇಂದ್ರಗಳ ಭದ್ರತಾ ಸಿಬ್ಬಂದಿಯಿಂದ ಮೇಲ್ವಿಚಾರಕರವರೆಗೂ ಮಹಿಳೆಯರೇ ಕಾರ್ಯನಿರ್ವಹಿಸಲಿದ್ದಾರೆ ಎಂದಿದ್ದಾರೆ.
"CEO ಆದೇಶದಂತೆ ರಾಜ್ಯದಲ್ಲಿ 60 ಮಹಿಳಾ ಮತದಾನ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ತ್ರಿಪುರಾದಲ್ಲಿ 60 ವಿಧಾನಸಭಾ ಕ್ಷೇತ್ರಗಳಿದ್ದು, ಕ್ಷೇತ್ರಕ್ಕೊಂದರಂತೆ ಮತದಾನ ಕೇಂದ್ರಗಳನ್ನು ತೆರೆಯಲಾಗುವುದು. ಉಳಿದಂತೆ ರಾಜ್ಯಾದ್ಯಂತ 3324 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.