Rahu Ketu Transit 2023: ಜ್ಯೋತಿಷ್ಯದಲ್ಲಿ ರಾಹು-ಕೇತುವನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ರಾಹು-ಕೇತುಗಳು ಜೂನ್ 26 ರಂದು ಅಶ್ವಿನಿ ನಕ್ಷತ್ರವನ್ನು ಪ್ರವೇಶಿಸಿದ್ದಾರೆ. ಈ ಬದಲಾವಣೆಯು ಅನೇಕ ರಾಶಿಗಳಿಗೆ ಏರಿಳಿತಗಳಿಂದ ಕೂಡಿರಬಹುದು. ಆದರೆ ಈ 5 ರಾಶಿಯವರ ಭಾಗ್ಯ ಬೆಳಗಲಿದ್ದಾರೆ.
Rahu Ketu Effect 2023: ವೈದಿಕ ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳಿಗೆ ಅದರದೇ ಆದ ಪ್ರಾಮುಖ್ಯತೆ ಇದೆ. ಮತ್ತೊಂದೆಡೆ, ರಾಹು-ಕೇತುಗಳನ್ನು ನೆರಳು ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಗ್ರಹಗಳ ನಕ್ಷತ್ರ ಬದಲಾವಣೆಯು ಎಲ್ಲಾ 12 ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸೋಮವಾರದಂದು ರಾಹು-ಕೇತು ಸ್ಥಾನವನ್ನು ಬದಲಾಯಿಸಿದ್ದಾರೆ. ರಾಹು ಮತ್ತು ಕೇತುಗಳು ಅಶ್ವಿನಿ ನಕ್ಷತ್ರವನ್ನು ಪ್ರವೇಶಿಸಿದ್ದಾರೆ. ಛಾಯಾ ಗ್ರಹವಾದ ರಾಹು - ಕೇತುಗಳ ಸ್ಥಾನ ಬದಲಾವಣೆಯು ಕೆಲವು ರಾಶಿಗಳಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಅನೇಕ ಜನರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಆಗುಲಿದೆ.
ವೃಶ್ಚಿಕ ರಾಶಿ: ಈ ಜನರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮನಸ್ಸು ಆಧ್ಯಾತ್ಮಿಕತೆಯಲ್ಲಿ ತೊಡಗಲಿದೆ. ಈ ಸಮಯದಲ್ಲಿ ನೀವು ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು. ನಿಮ್ಮ ಕೆಲಸಗಳಲ್ಲಿ ಯಶಸ್ವಿಯಾಗಬಹುದು.
ಧನು ರಾಶಿ: ರಾಹು - ಕೇತು ಆರ್ಥಿಕ ಲಾಭವನ್ನು ನೀಡಲಿದ್ದಾರೆ. ಈ ಜನರ ಜೀವನದಲ್ಲಿ ಸುಧಾರಣೆ ಕಂಡುಬರುತ್ತದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ನೀವು ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ.
ತುಲಾ ರಾಶಿ: ಈ ಸಮಯ ನಿಮಗೆ ಅನುಕೂಲಕರವಾಗಲಿದೆ. ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳು ಕಂಡುಬರುತ್ತವೆ. ಸಂಬಂಧಗಳಲ್ಲಿ ಸುಧಾರಣೆ ಇರುತ್ತದೆ. ಈ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಾರೆ. ಸೃಜನಶೀಲ ಕೆಲಸಗಳಲ್ಲಿ ಪ್ರಗತಿ ಕಂಡುಬರುವುದು. ಸಂಶೋಧನೆಯಿಂದ ಉತ್ತಮ ಫಲಿತಾಂಶಗಳನ್ನು ಕಾಣಬಹುದು.
ಮೇಷ ರಾಶಿ: ಈ ರಾಶಿಯವರಿಗೆ ವಿಶೇಷ ಲಾಭವಾಗಲಿದೆ. ವೈವಾಹಿಕ ಜೀವನದಲ್ಲಿ ಬರುವ ತೊಂದರೆಗಳು ದೂರವಾಗುತ್ತವೆ. ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳ ಬಾಗಿಲು ತೆರೆಯುತ್ತದೆ. ಪ್ರೀತಿ ಸಂಬಂಧಗಳಲ್ಲಿ ಒಲವು ಹೆಚ್ಚಾಗುತ್ತದೆ. ಸಂಬಂಧವು ಮೊದಲಿಗಿಂತ ಬಲವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗಲಿವೆ.
ಕುಂಭ ರಾಶಿ: ಈ ಜನರ ಜೀವನದ ಮೇಲೆ ಶುಭ ಪರಿಣಾಮಗಳು ಕಂಡುಬರುತ್ತವೆ. ಕುಟುಂಬದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ತಂದೆಯೊಂದಿಗೆ ನಡೆಯುತ್ತಿರುವ ವಿಷಯಗಳು ಸುಧಾರಿಸುತ್ತವೆ. ಕಷ್ಟಗಳು ದೂರವಾಗುವುದು. ಕಠಿಣ ಪರಿಶ್ರಮದ ಫಲವನ್ನು ಯಶಸ್ಸಿನ ರೂಪದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಧನಲಾಭವಾಗಲಿದೆ.