ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗ

ನರೇಂದ್ರ ಮೋದಿ ಅವರ 'ಮಿಷನ್ ಶಕ್ತಿ' ಘೋಷಣೆಯು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಪ್ರಧಾನಿ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ತಮ್ಮ ಪಕ್ಷವನ್ನು ಉಲ್ಲೇಖಿಸಿಲ್ಲ ಅಥವಾ ತಮ್ಮ ಪರವಾಗಿ ಮತ ಚಲಾಯಿಸಲು ಸಹ ಮನವಿ ಮಾಡಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

Last Updated : Mar 29, 2019, 05:45 PM IST
ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗ  title=

ನವದೆಹಲಿ: ನರೇಂದ್ರ ಮೋದಿ ಅವರ 'ಮಿಷನ್ ಶಕ್ತಿ' ಘೋಷಣೆಯು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಪ್ರಧಾನಿ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ತಮ್ಮ ಪಕ್ಷವನ್ನು ಉಲ್ಲೇಖಿಸಿಲ್ಲ ಅಥವಾ ತಮ್ಮ ಪರವಾಗಿ ಮತ ಚಲಾಯಿಸಲು ಸಹ ಮನವಿ ಮಾಡಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರಧಾನಿ ಮೋದಿ ಬುಧವಾರದಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ ಉಪಗ್ರಹ ವಿರೋಧಿ ಕ್ಷಿಪಣಿ (ಎ-ಎಸ್ಎಟಿ) ಯಶಸ್ವಿ ಪರೀಕ್ಷೆ ವಿಚಾರವಾಗಿ ಘೋಷಣೆ ಮಾಡಿದ್ದಾರೆ.ಇದಕ್ಕೆ ಹಲವು ಪ್ರತಿಪಕ್ಷಗಳು ವಿಜ್ನಾನಿಗಳ ಈ ಕಾರ್ಯವನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಸ್ಯಾಟ್ ಯಶಸ್ವಿ ಪರೀಕ್ಷೆಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಕ್ಕೆ ವ್ಯಂಗ್ಯವಾಗಿ ಮೋದಿಗೆ ವಿಶ್ವ ರಂಗಭೂಮಿಯ ಶುಭಾಶಯಗಳನ್ನು ಕೋರಿದ್ದರು.

ಭಾರತ ಅಸ್ಯಾಟ್ ಪರೀಕ್ಷೆಯನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಕೇವಲ ಭೂ, ವಾಯು, ಜಲ ಪ್ರದೇಶಗಳ ರಕ್ಷಣೆಯನ್ನಷ್ಟೇ ಅಲ್ಲದೆ ಅಂತರಿಕ್ಷವನ್ನು ಸಹ ರಕ್ಷಿಸುವ ಸಾಮರ್ಥ್ಯವನ್ನು ಸಾಭೀತುಪಡಿಸಿದೆ.ಆ ಮೂಲಕ ಅಮೇರಿಕಾ, ಚೀನಾ, ರಷ್ಯಾ, ದೇಶದ ನಂತರ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಎನ್ನುವ ಖ್ಯಾತಿಯನ್ನು ಭಾರತ ಪಡೆದಿದೆ.ಪ್ರಧಾನಿ ಮೋದಿ ಮಿಷನ್ ಶಕ್ತಿ ಘೋಷಣೆ ಸಂದರ್ಭದಲ್ಲಿ ಮಾತನಾಡುತ್ತಾ 'ಮಾರ್ಚ್ 27 ದೇಶದ ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.ಅಸ್ಯಾಟ್ ಕ್ಷಿಪಣಿ ಪರೀಕ್ಷೆಯನ್ನು ಕೈಗೊಂಡಿದೆ.ಈ ಮಿಷನ್ ಶಕ್ತಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು' ಎಂದು ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದ್ದರು 
 

Trending News