ಲೋಕಸಭಾ ಚುನಾವಣೆಗೆ ಹಾರ್ದಿಕ್ ಪಟೇಲ್ ಸ್ಪರ್ಧಿಸುವಂತಿಲ್ಲ!

2015 ರಲ್ಲಿನ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆ ನೀಡಬೇಕೆಂದು ಹಾರ್ದಿಕ್ ಪಟೇಲ್ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ.ಈ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಚಿಸಿದ್ದ ಹಾರ್ದಿಕ್ ಪಟೇಲ್ ಗೆ ಹಿನ್ನಡೆಯಾಗಿದೆ.

Last Updated : Mar 29, 2019, 05:20 PM IST
 ಲೋಕಸಭಾ ಚುನಾವಣೆಗೆ ಹಾರ್ದಿಕ್ ಪಟೇಲ್ ಸ್ಪರ್ಧಿಸುವಂತಿಲ್ಲ!  title=
Photo courtesy: Twitter

ನವದೆಹಲಿ: 2015 ರಲ್ಲಿನ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆ ನೀಡಬೇಕೆಂದು ಹಾರ್ದಿಕ್ ಪಟೇಲ್ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ.ಈ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಚಿಸಿದ್ದ ಹಾರ್ದಿಕ್ ಪಟೇಲ್ ಗೆ ಹಿನ್ನಡೆಯಾಗಿದೆ.

ಕಳೆದ ವರ್ಷ ಜುಲೈ 2015 ರಲ್ಲಿ ಹಾರ್ದಿಕ್ ಪಟೇಲ್ ಪಾಟಿದಾರ್ ಆಂದೋಲನದಲ್ಲಿ ಉಂಟಾಗಿದ್ದ ಹಿಂಸಾಚಾರದ ವಿಚಾರವಾಗಿ ಎರಡು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದರು.ಆದರೆ ನಂತರ ಅವರಿಗೆ ಜಾಮೀನು ನೀಡಿ 2018ರಲ್ಲಿ ಶಿಕ್ಷೆಯನ್ನು ರದ್ದುಗೊಳಿಸಿತ್ತು, ಆದರೆ ಅವರ ಮೇಲಿನ ಆರೋಪಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು.

ಹಾರ್ದಿಕ್ ಪಟೇಲ್ ಮಾರ್ಚ್ 8 ರಂದು ತಮ್ಮ ಮೇಲಿನ ಆರೋಪಕ್ಕೆ ತಡೆ ನೀಡುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಗುಜರಾತಿನ ಬಿಜೆಪಿ ಸರ್ಕಾರವು ಸಹಿತ ವಿರೋಧ ವ್ಯಕ್ತಪಡಿಸಿತ್ತು. ಸುಪ್ರೀಂಕೋರ್ಟ್ ತೀರ್ಪು ಹಾಗೂ ಜನಪ್ರತಿನಿಧಿ ಕಾಯ್ದೆ ಅನ್ವಯ ಆರೋಪ ಹೊಂದಿರುವ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಈ ಹಿನ್ನಲೆಯಲ್ಲಿ ಈಗ ಗುಜರಾತ್ ಹೈಕೋರ್ಟ್ ಹಾರ್ದಿಕ್ ಪಟೇಲ್ ಅವರ ಅರ್ಜಿಯನ್ನು ತಿರಸ್ಕರಿಸಿರುವುದಕ್ಕೆ ಹಿನ್ನಡೆಯಾಗಿದೆ.

 

Trending News