ನನ್ನ ಹಣ ಸ್ವೀಕರಿಸಿ, ಜೆಟ್ ಏರ್​ವೇಸ್ ಉಳಿಸಿ: ಬ್ಯಾಂಕುಗಳಿಗೆ ಮಲ್ಯ ಒತ್ತಾಯ

ಪಿಎಸ್​ಯು ಬ್ಯಾಂಕುಗಳು ಮತ್ತು ಇತರ ಎಲ್ಲ ಬ್ಯಾಂಕುಗಳಿಂದ ಪಡೆದಿರುವ ಹಣ ಪಾವತಿಸಲು ನಾನು ಸಿದ್ದನಿದ್ದೇನೆ- ವಿಜಯ್ ಮಲ್ಯ

Last Updated : Mar 26, 2019, 11:31 AM IST
ನನ್ನ ಹಣ ಸ್ವೀಕರಿಸಿ, ಜೆಟ್ ಏರ್​ವೇಸ್ ಉಳಿಸಿ: ಬ್ಯಾಂಕುಗಳಿಗೆ ಮಲ್ಯ ಒತ್ತಾಯ title=
File Image

ನವದೆಹಲಿ: "ತಮ್ಮ ಹಣವನ್ನು ಸ್ವೀಕರಿಸಿ, ಜೆಟ್ ಏರ್​ವೇಸ್ ಉಳಿಸು"ವಂತೆ ಭಾರತೀಯ ಬ್ಯಾಂಕುಗಳಿಗೆ ಉದ್ಯಮಿ ವಿಜಯ್ ಮಲ್ಯ ಒತ್ತಾಯಿಸಿದ್ದಾರೆ. 

"ಪಿಎಸ್​ಯು ಬ್ಯಾಂಕುಗಳು ಮತ್ತು ಇತರ ಎಲ್ಲ ಬ್ಯಾಂಕುಗಳಿಂದ ಪಡೆದಿರುವ ಹಣ ಪಾವತಿಸಲು ನಾನು ಸಿದ್ದನಿದ್ದೇನೆ ಎಂದು ಗೌರವಾನ್ವಿತ ಕರ್ನಾಟಕ ಹೈಕೋರ್ಟ್ಗೆ ಈ ಮೊದಲು ಪ್ರಸ್ತಾಪಿಸಿದ್ದೇನೆ. ಇದನ್ನು ಮತ್ತೊಮ್ಮೆ ನಾನು ಪುನರಾವರ್ತಿಸುತ್ತೇನೆ. ಬ್ಯಾಂಕುಗಳು ನನ್ನ ಹಣವನ್ನು ಏಕೆ ತೆಗೆದುಕೊಳ್ಳುವುದಿಲ್ಲ. ಇದು ಜೆಟ್ ಏರ್ವೇಸ್ ಅನ್ನು ಉಳಿಸಲು ಸಹಾಯ ಮಾಡುತ್ತದೆ" ಎಂದು ಮದ್ಯದ ದೊರೆ ಟ್ವೀಟ್ ಮಾಡಿದ್ದಾರೆ. 

ಯುಕೆ ಕೋರ್ಟ್ನಲ್ಲಿ ಪ್ರಸ್ತುತ ವಿಚಾರಣೆ ಎದುರಿಸುತ್ತಿರುವ ಮಲ್ಯ ಮಂಗಳವಾರ ಟ್ವೀಟ್ ಮಾಡಿದ್ದು, "ಬ್ಯಾಂಕುಗಳು ಜೆಟ್ಗೆ ನೀಡಿದ ಸಹಾಯದ ಬಗ್ಗೆಯೂ ದನಿ ಎತ್ತಿದ್ದಾರೆ. ಜೆಟ್ ಏರ್ವೇಸ್ ಅನ್ನು ಉಳಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳು ಏಕೆ ಸಹಾಯ ಮಾಡಿದೆ. ಆದರೆ ಈ ನಡೆ ತನ್ನ ಕಿಂಗ್ಫಿಷರ್ ಏರ್ಲೈನ್ಸ್ ನೊಂದಿಗೆ ಏಕಿರಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ".

ಜೆಟ್ ಏರ್ವೇಸ್ನಲ್ಲಿ ಉದ್ಯೋಗ, ಸಂಪರ್ಕವನ್ನು ಉಳಿಸಲು ಪಿಎಸ್​ಯು ಬ್ಯಾಂಕ್ ಜಾಮೀನು ನೀಡಿದೆ ಎಂದು ನೋಡಿ ಸಂತೋಷವಾಗುತ್ತಿದೆ. ಕಿಂಗ್ಫಿಶರ್ಗೆ ಇದೇ ರೀತಿಯ ಕೆಲಸ ಮಾಡಬೇಕಿತ್ತು ಎಂದು ಬಯಸುವುದಾಗಿ ಮಲ್ಯ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ. 

ಕಿಂಗ್ ಫಿಶರ್ ಮತ್ತು ಅದರ ಉದ್ಯೋಗಿಗಳನ್ನು ಉಳಿಸಲು ನಾನು 4000 ಕ್ಕಿಂತ ಹೆಚ್ಚು ಕೋಟಿಗಳನ್ನು ಹೂಡಿಕೆ ಮಾಡಿದ್ದೇನೆ. ಅದನ್ನು ಸ್ವೀಕರಿಸಲಿಲ್ಲ. ಅದೇ ಪಿಎಸ್​ಯು ಬ್ಯಾಂಕುಗಳು ಭಾರತದ ಅತ್ಯುತ್ತಮ ವಿಮಾನಯಾನ ಸಂಸ್ಥೆಗೆ ಅವಕಾಶ ಮಾಡಿಕೊಡದೆ, ಸಂಪರ್ಕವು ನಿರ್ದಯವಾಗಿ ವಿಫಲಗೊಳ್ಳುತ್ತದೆ." ಎನ್ಡಿಎ ಸರ್ಕಾರದಲ್ಲಿ ಎರೆಡೆರಡು ರೀತಿಯ ಮಾನದಂಡ ಎಂದು ಮತ್ತೊಂದು ಟ್ವೀಟ್ ಮೂಲಕ ಮಲ್ಯ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಜೆಟ್ ಏರ್​ವೇಸ್ ಗೆ ಪಿಎಸ್​ಯು ಬ್ಯಾಂಕುಗಳ ಪರವಾಗಿ 1500 ಕೋಟಿ ರೂಪಾಯಿಗಳ ಪ್ಯಾಕೇಜ್ ಪ್ರಕಟಿಸಿದ ಒಂದು ದಿನದ ನಂತರ ಮಲ್ಯರಿಂದ ಈ ಟ್ವೀಟ್ ಮಾಡಲಾಗಿದೆ. ನಷ್ಟದಲ್ಲಿರುವ ಜೆಟ್ ಏರ್​ವೇಸ್ ವೈಮಾನಿಕ ಸಂಸ್ಥೆಯ ಸಂಸ್ಥಾಪಕ ಹಾಗೂ ಚೇರ್ಮನ್ ನರೇಶ್ ಗೋಯಲ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ಅಷ್ಟೇಯಲ್ಲದೆ ನರೇಶ್ ಗೋಯಲ್ ಮತ್ತವರ ಪತ್ನಿ ಅನಿತಾ ಸಂಸ್ಥೆಯ ಮಂಡಳಿಯಿಂದಲೂ ಹೊರಬಂದಿದ್ದಾರೆ. 1992ರಲ್ಲಿ ನರೇಶ್ ಗೋಯಲ್ ಮತ್ತವರ ಪತ್ನಿ ಅನಿತಾ ಅವರು ಜೆಟ್ ಏರ್​ವೇಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು.
 

Trending News