/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ತುಮಕೂರು: ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್‌ಗಳಲ್ಲಿ ಒಂದಾದ ಪಾವಗಡ ತಾಲೂಕಿನ ತಿರುಮಣಿ ಬಳಿಯಿರುವ ಪಾವಗಡ ಸೋಲಾರ್ ಪಾರ್ಕ್‌ಗೆ  ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇಂಧನ ಸಚಿವ ಕೆ.ಜೆ ಜಾರ್ಜ್ ಬುಧವಾರ ಭೇಟಿ ನೀಡಿದರು.

ಸೋಲಾರ್ ಪಾರ್ಕ್‌ನ  ಆಡಳಿತ ಕಟ್ಟಡದ ಸಭಾಂಗಣಕ್ಕೆ ಸಚಿವರನ್ನು ಆತ್ಮೀಯವಾಗಿ ಬರ ಮಾಡಿಕೊಂಡ ಇಂಧನ ಇಲಾಖೆ ಅಧಿಕಾರಿಗಳು,  13,000 ಎಕರೆಯ ವಿಶಾಲ ವ್ಯಾಪ್ತಿಯ ಸೌರ ಸ್ಥಾವರದ 2,000- ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಬಗ್ಗೆ ವಿಸ್ತೃತ ವಿವರಣೆ ನೀಡಿದರು.

ನಂತರ ಇಬ್ಬರು ಸಚಿವರು ಸೋಲಾರ್ ಪಾರ್ಕ್ ಮತ್ತು ಕೆಎಸ್‌ಪಿಡಿಸಿಎಲ್ ಮಾಸ್ಟರ್ ಸಬ್‌ಸ್ಟೇಷನ್, ಪಿಜಿಸಿಐಎಲ್ ಸಬ್‌ಸ್ಟೇಷನ್ ಮತ್ತು ಬ್ಲಾಕ್ ಸಂಖ್ಯೆ 40ಕ್ಕೆ ಭೇಟಿ ನೀಡಿದರು. ಇಂಧನ ಅಭಿವೃದ್ಧಿಯಲ್ಲಿ ರಾಜ್ಯದ ಸಾಧನೆ ಮತ್ತು  ಇಡೀ ರಾಷ್ಟ್ರಕ್ಕೆ ಅದರ ಪ್ರಯೋಜನದ ಬಗ್ಗೆ ಸಚಿವರಿಗೆ ಅಧಿಕಾರಿಗಳು ವಿವರಿಸಿದರು. ಅಲ್ಲದೇ, ಸೌರ ಫಲಕಗಳನ್ನು ಸ್ವಚ್ಛಗೊಳಿಸಲು ರೋಬೋಟ್‌ಗಳನ್ನು ಬಳಸುವ ಕುರಿತು ಪ್ರಾತ್ಯಕ್ಷಿಕೆಯನ್ನು ಸಚಿವರಿಬ್ಬರು ವೀಕ್ಷಿಸಿದರು.

ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಮಾತನಾಡಿ, "ಪಾವಗಡ ಸೋಲಾರ್ ಪಾರ್ಕ್- ಸ್ವಚ್ಛ ಮತ್ತು ಸುಸ್ಥಿರ ಇಂಧನ ಪರಿಹಾರಗಳಿಗೆ ನಮ್ಮ ಬದ್ಧತೆಯ ಕುರುಹಾಗಿದೆ.  ಸರ್ಕಾರ ಮತ್ತು ನವೀಕರಿಸಬಹುದಾದ ಇಂಧನ ಉದ್ಯಮದ ನಡುವಿನ ಬಾಂಧವ್ಯ ಉತ್ತಮ ಪಡಿಸುವ ಜತೆಗೆ ಹೂಡಿಕೆ, ಸಹಯೋಗವನ್ನು ಉತ್ತೇಜಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ. ಮುಖ್ಯವಾಗಿ, ಉದ್ಯೋಗ ಸೃಷ್ಟಿಗೆ ಹೊಸ ಮಾರ್ಗಗಳನ್ನು ಅನ್ವೇಷಿಸುವುದು ನಮ್ಮ ಗುರಿ,”ಎಂದು ವಿವರಿಸಿದರು. 

“ಶುದ್ಧ ಇಂಧನ ಉತ್ಪಾದನೆಗೆ ರಾಷ್ಟ್ರ ಹಾಕಿಕೊಂಡಿರುವ ಗುರಿಗೆ ನಮ್ಮ ಸೋಲಾರ್ ಪಾರ್ಕ್ ಈಗಾಗಲೇ ದೊಡ್ಡ ಕೊಡುಗೆ ನೀಡಿದೆ. ಅದರ ಅತ್ಯಾಧುನಿಕ ದ್ಯುತಿವಿದ್ಯುಜ್ಜನಕ ಫಲಕಗಳು, ಅತ್ಯಾಧುನಿಕ ತಂತ್ರಜ್ಞಾನ, ಸುಧಾರಿತ ವಿದ್ಯುತ್  ಸಂಗ್ರಹ ವ್ಯವಸ್ಥೆ ಮತ್ತು ಸಮರ್ಥ ಗ್ರಿಡ್ ಏಕೀಕರಣದೊಂದಿಗೆ, ಸೋಲಾರ್ ಪಾರ್ಕ್  ವರ್ಷಕ್ಕೆ 4.5 ಶತಕೋಟಿ ಸೌರ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.  ಆ ಮೂಲಕ ವಾರ್ಷಿಕ 3.6 ಮಿಲಿಯನ್ ಟನ್‌ಗಳಷ್ಟು  CO2 ಹೊರಸೂಸುವಿಕೆಯನ್ನು ತಗ್ಗಿಸಲು ನೆರವಾಗುತ್ತಿದೆ. ನವೀಕರಿಸಬಹುದಾದ ಇಂಧನ ಮೂಲಗಳು ನಮ್ಮ ಪರಿಸರ ಮತ್ತು ಆರ್ಥಿಕತೆಯ ಮೇಲೆ ಬೀರಬಹುದಾದ ಪ್ರಭಾವವನ್ನು ಈ ಅಂಕಿಅಂಶಗಳೇ ಸಾರಿ ಹೇಳುತ್ತವೆ,”ಎಂದರು. 

ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸರ್ಕಾರದ ಅಚಲ ಬೆಂಬಲ ಮತ್ತು ಪಾವಗಡ ಸೋಲಾರ್ ಪಾರ್ಕ್‌ನ ಗಮನಾರ್ಹ ಸಾಧನೆಗಳನ್ನು ಎತ್ತಿ ಹಿಡಿಯುವುದು ಸಚಿವರ ಭೇಟಿಯ ಉದ್ದೇಶವಾಗಿತ್ತು. ಸೋಲಾರ್ ಪಾರ್ಕ್  ಅಭಿವೃದ್ಧಿ ಮತ್ತು  ನವೀನ ನಿರ್ವಹಣಾ ವಿಧಾನಗಳ ಮಾಹಿತಿ ಪಡೆದ Sri. ಡಿಕೆ ಶಿವಕುಮಾರ್ ಮತ್ತು  Sri. ಕೆಜೆ ಜಾರ್ಜ್ ಅವರು, ಉದ್ಯಾನವನದ ನಿರ್ವಹಣಾ ತಂಡ, ಎಂಜಿನಿಯರ್‌ಗಳು ಮತ್ತು ಪರಿಸರ ತಜ್ಞರು ಸೇರಿದಂತೆ ಯೋಜನೆಯ ಭಾಧ್ಯಸ್ಥರೊಂದಿಗೆ ಚರ್ಚೆ ನಡೆಸಿದರು.

ಸಚಿವರೊಂದಿಗೆ ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ Sri. ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ  Sri. ಪಂಕಜ್ ಕುಮಾರ್ ಪಾಂಡೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL) ದ ವ್ಯವಸ್ಥಾಪಕ ನಿರ್ದೇಶಕ  Sri. ಕೆ.ಪಿ. ರುದ್ರಪ್ಪಯ್ಯ,  ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತ (KSPCDL)ದ  ಪ್ರತಿನಿಧಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Section: 
English Title: 
Pavagada Solar Park – A testament to commitment to renewable energy and sustainable development.
News Source: 
Home Title: 

ಪಾವಗಡ ಸೋಲಾರ್ ಪಾರ್ಕ್- ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಗೆ ಸಾಕ್ಷಿ

ಪಾವಗಡ ಸೋಲಾರ್ ಪಾರ್ಕ್- ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಗೆ ಸಾಕ್ಷಿ
Yes
Is Blog?: 
No
Tags: 
Facebook Instant Article: 
Yes
Highlights: 

ನಂತರ ಇಬ್ಬರು ಸಚಿವರು ಸೋಲಾರ್ ಪಾರ್ಕ್ ಮತ್ತು ಕೆಎಸ್‌ಪಿಡಿಸಿಎಲ್ ಮಾಸ್ಟರ್ ಸಬ್‌ಸ್ಟೇಷನ್, ಪಿಜಿಸಿಐಎಲ್ ಸಬ್‌ಸ್ಟೇಷನ್ ಮತ್ತು ಬ್ಲಾಕ್ ಸಂಖ್ಯೆ 40ಕ್ಕೆ ಭೇಟಿ ನೀಡಿದರು

ಇಂಧನ ಅಭಿವೃದ್ಧಿಯಲ್ಲಿ ರಾಜ್ಯದ ಸಾಧನೆ ಮತ್ತು  ಇಡೀ ರಾಷ್ಟ್ರಕ್ಕೆ ಅದರ ಪ್ರಯೋಜನದ ಬಗ್ಗೆ ಸಚಿವರಿಗೆ ಅಧಿಕಾರಿಗಳು ವಿವರಿಸಿದರು

ಅಲ್ಲದೇ, ಸೌರ ಫಲಕಗಳನ್ನು ಸ್ವಚ್ಛಗೊಳಿಸಲು ರೋಬೋಟ್‌ಗಳನ್ನು ಬಳಸುವ ಕುರಿತು ಪ್ರಾತ್ಯಕ್ಷಿಕೆಯನ್ನು ಸಚಿವರಿಬ್ಬರು ವೀಕ್ಷಿಸಿದರು

Mobile Title: 
ಪಾವಗಡ ಸೋಲಾರ್ ಪಾರ್ಕ್- ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಗೆ ಸಾಕ್ಷಿ
Manjunath N
Prashobh Devanahalli
Publish Later: 
No
Publish At: 
Wednesday, June 14, 2023 - 15:41
Created By: 
Manjunath Naragund
Updated By: 
Manjunath Naragund
Published By: 
Manjunath Naragund
Request Count: 
1
Is Breaking News: 
No
Word Count: 
329