ಲೋಕಸಭಾ ಚುನಾವಣೆ 2019: ಉತ್ತರ ಪ್ರದೇಶದ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ ಬಿಎಸ್ಪಿ

ಉತ್ತರಪ್ರದೇಶದಲ್ಲಿ ಈಗಾಗಲೇ ಎಸ್ಪಿ-ಬಿಎಸ್ಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಮಾಡಿಕೊಂಡಿವೆ. ಈ ಪ್ರಕಾರ ಉತ್ತರಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಬಿಎಸ್ಪಿ 38, ಎಸ್ಪಿ 37 ಸ್ಥಾನಗಳನ್ನು ಹಂಚಿಕೊಂಡಿದ್ದು, ಮಥುರಾ, ಮುಜಾಫರ್ ಪುರ ಹಾಗೂ ಬಾಗಪತ್ ಕ್ಷೇತ್ರಗಳನ್ನು ಆರ್ ಎಲ್ ಡಿ ಪಕ್ಷಕ್ಕೆ ಬಿಟ್ಟುಕೊಟ್ಟಿವೆ.   

Last Updated : Mar 22, 2019, 03:06 PM IST
ಲೋಕಸಭಾ ಚುನಾವಣೆ 2019: ಉತ್ತರ ಪ್ರದೇಶದ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ ಬಿಎಸ್ಪಿ title=

ನವದೆಹಲಿ: ಉತ್ತರಪ್ರದೇಶದ 11 ಲೋಕಸಭಾ ಕ್ಷೇತ್ರಗಳಿಗೆ ಬಹುಜನ ಸಮಾಜ ಪಕ್ಷ ಶುಕ್ರವಾರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಉತ್ತರಪ್ರದೇಶದಲ್ಲಿ ಈಗಾಗಲೇ ಎಸ್ಪಿ-ಬಿಎಸ್ಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಮಾಡಿಕೊಂಡಿವೆ. ಈ ಪ್ರಕಾರ ಉತ್ತರಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ ಬಿಎಸ್ಪಿ 38, ಎಸ್ಪಿ 37 ಸ್ಥಾನಗಳನ್ನು ಹಂಚಿಕೊಂಡಿದ್ದು, ಮಥುರಾ, ಮುಜಾಫರ್ ಪುರ ಹಾಗೂ ಬಾಗಪತ್ ಕ್ಷೇತ್ರಗಳನ್ನು ಆರ್ ಎಲ್ ಡಿ ಪಕ್ಷಕ್ಕೆ ಬಿಟ್ಟುಕೊಟ್ಟಿವೆ.   

ಇಂದು ಬಹುಜನ ಸಮಾಜ ಪಕ್ಷ ಬಿಡುಗಡೆ ಮಾಡಿದ 11 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೀಗಿದೆ..

ಹಾಜಿ ಫಾಜರ್ಲು ರೆಹಮಾನ್- ಸಹರಾನ್ಪುರ
ಮಳುಕ್ ನಾಗರ್- ಬಿಜನುರ್
ಗಿರೀಶ್ ಚಂದ್ರ- ನಗೀನಾ(ಎಸ್ಸಿ)
ಡ್ಯಾನಿಶ್ ಅಲಿ- ಅಮರೋಹ್
ಮೊಹಮ್ಮದ್ ಯಾಕುಬ್- ಮೀರತ್
ಸತಬೀರ್ ನಾಗರ್- ಗೌತಮಬುದ್ಧ ನಗರ್
ಯೋಗೇಶ್ ಶರ್ಮಾ- ಬುಲಂದರ್ ಶಹರ್(ಎಸ್ಸಿ)
ಅಜೀತ್ ಬಾಲಿಯಾನ್- ಅಲಿಗಢ
ಮನೋಜ್ ಕುಮಾರ್ ಸೋನಿ- ಆಗ್ರಾ(ಎಸ್ಸಿ)
ರಾಜವೀರ್ ಸಿಂಹ- ಫತೇಪುರ್ ಸಿಕ್ರಿ
ರುಚಿ ವೀರಾ- ಆವ್ಲಾ

Trending News