Junior Asia Cup 2023: ಜಪಾನ್ ನ ಗಿಫು ಪ್ರಾಂತ್ಯದ ಕಕಮಿಗಹರದಲ್ಲಿ ನಡೆದ ಮಹಿಳಾ ಜೂನಿಯರ್ ಏಷ್ಯಾಕಪ್ 2023ರ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡ ಶನಿವಾರ ಆತಿಥೇಯ ಜಪಾನ್ ಅನ್ನು 1-0 ಗೋಲುಗಳಿಂದ ಸೋಲಿಸಿದೆ. ಸುನಿಲಿಟಾ ಟೊಂಪೊ (47) ಪಂದ್ಯದ ಏಕೈಕ ಗೋಲು ಬಾರಿಸಿದರು.
ಇದನ್ನೂ ಓದಿ: ಧೋನಿಯಂತೇ ವಿಕೆಟ್ ಕೀಪಿಂಗ್… DRS ತೆಗೆದುಕೊಳ್ಳವಲ್ಲೂ ಮಾಹಿಗೆ ಸರಿಸಮಾನ ಈ ಆಟಗಾರ!
ಈ ಗೆಲುವಿನ ಬಳಿಕ ಜೂನಿಯರ್ ಏಷ್ಯಾಕಪ್ ನ ಫೈನಲ್ ನಲ್ಲಿ ಭಾರತೀಯ ತಂಡವು ಎರಡನೇ ಬಾರಿಗೆ ಸ್ಥಾನ ಗಳಿಸಿದೆ. ಇದಕ್ಕೂ ಮೊದಲು ಭಾರತೀಯ ತಂಡವು 2012 ರಲ್ಲಿ ಫೈನಲ್ ತಲುಪಿತು. ಫೈನಲ್ ಪಂದ್ಯವು ನವೆಂಬರ್ 29 ರಿಂದ ಡಿಸೆಂಬರ್ 10 ರವರೆಗೆ ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆಯಲಿದೆ.
ಇದನ್ನೂ ಓದಿ: ದಾಸವಾಳ ಹೂ ಪೂಜೆ ಬಳಕೆ ಮಾತ್ರವಲ್ಲ; ಅದರಲ್ಲೂ ಅಡಗಿದೆ ಆರೋಗ್ಯದಾಯಕ ಗುಣಗಳು..
ಭಾರತೀಯ ತಂಡ ಪ್ರಾಬಲ್ಯ:
ಈ ಪಂದ್ಯದಲ್ಲಿ ಜಪಾನ್ ಒತ್ತಡಕ್ಕೆ ತರುವಲ್ಲಿ ಭಾರತೀಯ ತಂಡವು ಒಂದು ಪ್ರಮುಖ ಆಟವನ್ನು ಆಡಿದೆ. ಆದರೆ ಆತಿಥೇಯರು ಭಾರತವನ್ನು ಆರಂಭಿಕ ಮುನ್ನಡೆ ಸಾಧಿಸುವುದನ್ನು ತಡೆಯುವ ಕೆಲಸ ಮಾಡಲಿಲ್ಲ. ಬಳಿಕ ಭಾರತದ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಜಪಾನ್ ಸಹ ಕೆಲವು ಪೆನಾಲ್ಟಿಗಳನ್ನು ಗೆದ್ದಿತು. ಆದರೆ ಅಂತಿಮ ಹಂತದಲ್ಲಿ ಪ್ರಾಬಲ್ಯ ಸಾಧಿಸಿದ ಭಾರತ ಗೆಲುವನ್ನು ಸಾಧಿಸಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ