ಇಥಿಯೋಪಿಯಾ ವಿಮಾನ ಪತನದ ಬಳಿಕ, ಸ್ಪೈಸ್ ಜೆಟ್ ಮಾಡಲ್ ವಿವರಣೆ ಕೇಳಿದ ಕೇಂದ್ರ ಸರ್ಕಾರ

ಭಾನುವಾರದಂದು ಇಥಿಯೋಪಿಯನ್ ಏರ್ಲೈನ್ಸ್ ಅಪಘಾತದ ನಂತರ ಬೋಯಿಂಗ್ 737 MAX 8 ವಿಮಾನವನ್ನು ಬಳಸಿಕೊಳ್ಳುವ ಬಗ್ಗೆ ಭಾರತ ವಾಯುಯಾನದ ಡಿ.ಜಿ.ಸಿ.ಎ. ಮರುಪರಿಶೀಲನೆ ನಡೆಸಲು ಮುಂದಾಗಿದೆ.ಈ ಹಿನ್ನಲೆಯಲ್ಲಿ ಅದು ಬೋಯಿಂಗ್ ಮತ್ತು ಜೆಟ್ ಏರ್ವೇಸ್ ಮತ್ತು ಸ್ಪೈಸ್ ಜೆಟ್ನಂತಹ ಏರ್ ಲೈನ್ಸ್ ಗಳ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Last Updated : Mar 11, 2019, 12:55 PM IST
ಇಥಿಯೋಪಿಯಾ ವಿಮಾನ ಪತನದ ಬಳಿಕ, ಸ್ಪೈಸ್ ಜೆಟ್ ಮಾಡಲ್ ವಿವರಣೆ ಕೇಳಿದ ಕೇಂದ್ರ ಸರ್ಕಾರ   title=

ನವದೆಹಲಿ: ಭಾನುವಾರದಂದು ಇಥಿಯೋಪಿಯನ್ ಏರ್ಲೈನ್ಸ್ ಅಪಘಾತದ ನಂತರ ಬೋಯಿಂಗ್ 737 MAX 8 ವಿಮಾನವನ್ನು ಬಳಸಿಕೊಳ್ಳುವ ಬಗ್ಗೆ ಭಾರತ ವಾಯುಯಾನದ ಡಿ.ಜಿ.ಸಿ.ಎ. ಮರುಪರಿಶೀಲನೆ ನಡೆಸಲು ಮುಂದಾಗಿದೆ.ಈ ಹಿನ್ನಲೆಯಲ್ಲಿ ಅದು ಬೋಯಿಂಗ್ ಮತ್ತು ಜೆಟ್ ಏರ್ವೇಸ್ ಮತ್ತು ಸ್ಪೈಸ್ ಜೆಟ್ನಂತಹ ಏರ್ ಲೈನ್ಸ್ ಗಳ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೋಯಿಂಗ್ 737 MAX ವಿಮಾನವು ಇಥಿಯೋಪಿಯನ್ ಏರ್ಲೈನ್ ಆದಿಸ್ ಅಬಾಬಾದಿಂದ ಬೆಳಗ್ಗೆ 8.30 ಗಂಟೆಗೆ ಹೊರಟ ಸಂದರ್ಭದಲ್ಲಿ ಪತನಗೊಂಡು ಸುಮಾರು 157 ಜನರನ್ನು ಬಲಿ ತೆಗೆದುಕೊಂಡಿತು.ಆದರೆ ಇದುವರೆಗೆ ಈ ಘಟನೆಗೆ ಕಾರಣಗಳು ತಿಳಿದುಬಂದಿಲ್ಲ ಎನ್ನಲಾಗಿದೆ.ಇನ್ನೊಂದೆಡೆ ಚೀನಾದಲ್ಲಿ ವಾಯುಯಾನದ ಅಧಿಕಾರಿಗಳು ತಮ್ಮ ಬೋಯಿಂಗ್ 737 MAX 8 ಜೆಟ್ ಗಳನ್ನು ಹಾರಾಟವನ್ನು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಭಾರತದಲ್ಲಿ ಈ ಮಾದರಿಯ ವಿಮಾನವನ್ನು ಬಳಸುವ ಸಂಸ್ಥೆಗಳೆಂದರೆ ಅದು ಜೆಟ್ ಏರ್ವೇಸ್ ಮತ್ತು ಸ್ಪೈಸ್ ಜೆಟ್.

1967 ರಿಂದ ಕಾರ್ಯನಿರ್ವಹಿಸುತ್ತಿರುವ 737 MAX 8 ಮಾಡಲ್ ನ್ನು ಅಮೇರಿಕಾ ದೇಶವು ಉತ್ಪಾದನೆ ಮಾಡುತ್ತದೆ. ಈಗ ಬೋಯಿಂಗ್ ಈ ಮಾಡಲ್ ಕುರಿತಾಗಿ ಹೇಳಿಕೆ ನೀಡಿದ್ದು " ಆಕಾಶದಲ್ಲಿ ಹಾರಾಡುವ ಯಾವುದೇ ವಿಮಾನದಂತೆ ಅದು ಸುರಕ್ಷಿತವಾಗಿದೆ ಎಂದು ಹೇಳಿದೆ.
 

Trending News