ಕೌಲಾಲಂಪುರ: ಕೌಲಾಲಂಪುರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ZEE5 ನ ಚೀಫ್ ಬ್ಯುಸಿನೆಸ್ ಆಫೀಸರ್ ಅರ್ಚನಾ ಆನಂದ್ ಮಲೇಷ್ಯಾ ಮೂಲದ ಟೆಲಿಕಾಂ ಆಪರೇಟರ್ ಸೆಲ್ ಕಾಂ ಜೊತೆ ಸಹಭಾಗಿತ್ವವನ್ನು ಘೋಷಿಸಿದ್ದಾರೆ.
ಈ ಪಾಲುದಾರಿಕೆ ಮೂಲಕ ಸೆಲ್ಕಾಮ್ ಗ್ರಾಹಕರಿಗೆ ಸುರಕ್ಷಿತ ಮತ್ತು ಅನುಕೂಲಕರ ಪಾವತಿ ವಿಧಾನವನ್ನು ಅಪಿಗೇಟ ಡೈರೆಕ್ಟ್ ಕ್ಯಾರಿಂಗ್ ಬಿಲ್ಲಿಂಗ್ ನ್ನು API ಮೂಲಕ ಒದಗಿಸುತ್ತದೆ.ಈ ಮೂಲಕ ಜೀ 5 ಚಂದಾದಾರರಾಗಬಹುದು.
ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ಝೀಇಎಲ್) ನ ಭಾಗವಾಗಿರುವ ಝೀ 5 ಹಿಂದಿ, ಇಂಗ್ಲಿಷ್, ಬೆಂಗಾಲಿ, ಪಂಜಾಬಿ, ಮಲಯಾಳಂ, ತಮಿಳು, ತೆಲುಗು, ಕನ್ನಡ,ಮರಾಠಿ, ಒರಿಯಾ, ಭೋಜ್ಪುರಿ ಮತ್ತು ಗುಜರಾತಿ ಸೇರಿದಂತೆ 12 ಭಾಷೆಗಳಲ್ಲಿ 100,000 ಗಂಟೆಗಳ ಭಾರತೀಯ ಚಲನಚಿತ್ರಗಳು, ಟಿವಿ ಪ್ರದರ್ಶನಗಳು, ಸುದ್ದಿ, ವೀಡಿಯೊಗಳನ್ನು ನೀಡುತ್ತದೆ.ಇದು 60+ ಜನಪ್ರಿಯ ಟಿವಿ ಚಾನೆಲ್ಗಳನ್ನು ಸಹ ನೀಡುತ್ತದೆ.
ಈ ಸಹಯೋಗದೊಂದಿಗೆ ಸೆಂಬರುಥಿ, ಪೂವೆ ಪೂಚೂಡವ ಮತ್ತು ಯಾರದಿ ನೀ ಮೊಹಿನಿ, ಕಲಾಚಿರಿಪ್ಪು, ಅಮೇರಿಕಾ ಮ್ಯಾಪಿಲ್ಲೈ ಮತ್ತು ಡಿ 7 ಸೇರಿದಂತೆ ಮೆಲ್ಸಾಲ್ ಮತ್ತು ಕಲಾವು ಸೆಲ್ಕೋಮ್ ಗ್ರಾಹಕರನ್ನು ಒಳಗೊಂಡಂತೆ ಝೀ5 ತಮಿಳು ಒರಿಜಿನಲ್ಸ್ ನಂತಹ ಉನ್ನತ ತಮಿಳು ಟಿವಿ ಪ್ರದರ್ಶನಗಳನ್ನು ಒಳಗೊಂಡಂತೆ ಝೀ5 ರ ಅದ್ಭುತ ವಿಷಯದ ಶ್ರೇಣಿಯನ್ನು ಈ ಸಹಭಾಗಿತ್ವವು ನೀಡುತ್ತದೆ. ಇದು ಕೇದಾರನಾಥ್ ಮತ್ತು ವೀರ ಡಿ ವಿವಾಹ ಮುಂತಾದ ಬಾಲಿವುಡ್ ಬ್ಲಾಕ್ಬಸ್ಟರ್ಗಳನ್ನೂ ಸಹ ಒಳಗೊಂಡಿದೆ. ಅಲ್ಲದೆ ಆಬ್ಬೈ (ಕುನಾಲ್ ಕೆಮ್ಮು), ಫೈನಲ್ ಕಾಲ್ (ಅರ್ಜುನ್ ರಾಂಪಾಲ್) ಮತ್ತು ರಂಗ್ಬಾಜ್ (ಸಾಕ್ಬಿ ಸಲೀಮ್) ನಂತಹ ಒರಿಜಿನಲ್ ಗಳನ್ನು ಅದು ಒಳಗೊಂಡಿದೆ.
"ಜಾಗತಿಕ ಮಟ್ಟದಲ್ಲಿ ಉತ್ತೇಜನಗೊಳಿಸುವ ನಿಟ್ಟಿನಲ್ಲಿ ನಾವು ಮುಂದಿನ ವರ್ಷ ಉತ್ತಮ ಯೋಜನೆಯನ್ನು ರೂಪಿಸುತ್ತಿದ್ದೇವೆ.ಆ ನಿಟ್ಟಿನಲ್ಲಿ ಪಾಲುದಾರಿಕೆ ಮಹತ್ವದ್ದಾಗಿದೆ. ಈಗ ಮಲೇಷ್ಯಾ ನಾವು ಕೇಂದ್ರಿಕರಿಸಿದ ಮಾರುಕಟ್ಟೆಯಾಗಿದೆ.ಏಕೆಂದರೆ ಭಾರತೀಯ ಹಾಗೂ ದಕ್ಷಿಣ ಭಾರತದ ಜೊತೆಗೆ ಉತ್ತಮ ಭಾಂಧ್ಯವ್ಯವನ್ನು ಹೊಂದಿದೆ. ಆದ್ದರಿಂದ ಇಲ್ಲಿ ಆನ್ ಲೈನ್ ವಿಡಿಯೋ ಹೆಚ್ಚು ವಿಕ್ಷಿಸಲಾಗುತ್ತದೆ. ಆದ್ದರಿಂದ ಸದ್ಯದಲ್ಲಿ ಮಲಯಾ ಭಾಷೆಯಲ್ಲಿ ಕೂಡ ಸೇವೆ ಲಭ್ಯವಾಗುವ ಹಾಗೆ ಮಾಡುತ್ತೇವೆ. ಈ ಹಿನ್ನಲೆಯಲ್ಲಿ ನಾವು ಸೆಲ್ಕೋಮ್ನಂತಹ ಪ್ರಮುಖ ಸ್ಥಳೀಯ ಆಯೋಜಕರ ಜೊತೆ ಪಾಲುದಾರರಾಗಲು ಸಂತಸವಾಗುತ್ತದೆ ಎಂದು ಝೀ ಇಂಟರ್ನ್ಯಾಷನಲ್ ಮತ್ತು ಜಿ5 ಗ್ಲೋಬಲ್ ಸಿಇಒ ಅಮಿತ್ ಗೋಯೆಂಕಾ ಹೇಳಿದರು.
"ನಾವು ಜಾಗತಿಕವಾಗಿ ನಮ್ಮ ಸಹಭಾಗಿತ್ವ ವಿಸ್ತರಿಸುತ್ತಿದ್ದೇವೆ.ಈ ಹಿನ್ನಲೆಯಲ್ಲಿ ದಕ್ಷಿಣ ಆಗ್ನೇಯ ಏಷ್ಯಾದ ಪ್ರದೇಶದಲ್ಲಿ ನಮ್ಮ ಮೊದಲ ಪಾಲುದಾರಿಕೆ ಭಾಗವಾಗಿ ಸೆಲ್ಕಾಮ್ ಜೊತೆ ಒಪ್ಪಂದ ಘೋಷಿಸಿಕೊಳ್ಳುವುದಕ್ಕೆ ಸಂತಸವಾಗಿದ. ನಾವು ಈಗಾಗಲೇ ಮಲೆಷ್ಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವುದನ್ನು ನಾವು ನೋಡುತ್ತಿದ್ದೇವೆ. ಸೆಲ್ಕಾಂನಂತಹ ಪ್ರಮುಖ ಟೆಲಿಕಾಂ ಆಪರೇಟರ್ನೊಂದಿಗೆ ಸಹಭಾಗಿತ್ವ ಮಾಡಿಕೊಳ್ಳುವ ಮೂಲಕ ಬೃಹತ್ ಗ್ರಾಹಕರನ್ನು ಜೀ 5 ಗೆ ಸೆಳೆಯಲು ಸಹಾಯವಾಗುತ್ತದೆ "ಎಂದು ಅರ್ಚನಾ ಆನಂದ್ ತಿಳಿಸಿದ್ದಾರೆ.
"ಆನ್ಲೈನ್ ವೀಡಿಯೋ ಸ್ಟ್ರೀಮಿಂಗ್ ಒಂದು ಉತ್ತಮ ಅವಕಾಶವಾಗಿದ್ದು ಜೀ5 ನಂತಹ ವೇಗವಾಗಿ ಬೆಳೆಯುತ್ತಿರುವ ವೇದಿಕೆಯೊಂದಿಗೆ ಸೆಲ್ಕೊಂ ಪಾಲುದಾರರಾಗುವುದಕ್ಕೆ ನಾವು ಉತ್ಸುಕರಾಗಿದ್ದೇವೆ" ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೋರನ್ ವಾಸಿಲ್ಜೆವ್ ಹೇಳಿದರು.