ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಓ) ಅಧ್ಯಕ್ಷ ಜಿ. ಸತೀಶ ರೆಡ್ಡಿಯವರಿಗೆ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿ ಕ್ಷೇತ್ರದಲ್ಲಿನ ಕೊಡುಗೆಗಾಗಿ ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ಪ್ರಶಸ್ತಿಯನ್ನು ನೀಡಲಾಗಿದೆ.
ಡಾ. ರೆಡ್ಡಿ ಅವರು, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಯಾಗಿ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ನ ನಿರ್ದೇಶಕ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಮೇ 2015 ರಲ್ಲಿ ರಕ್ಷಣಾ ಮಂತ್ರಿಗಳಿಗೆ ವೈಜ್ಞಾನಿಕ ಸಲಹೆಗಾರರಾಗಿ ನೇಮಿಸಲಾಯಿತು.
DRDO Chief G. Satheesh Reddy has been conferred with an award by the American Institute of Aeronautics and Astronautics for his contribution to the field of missile technology development. pic.twitter.com/Tm686Hyc1c
— ANI (@ANI) March 2, 2019
ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್ ಮಿಸೈಲ್ ಕಾಂಪ್ಲೆಕ್ಸ್ ಲ್ಯಾಬೋರೇಟರೀಸ್ - ಎಎಸ್ಎಲ್, ಡಿಆರ್ಡಿಎಲ್ ಮತ್ತು ಆರ್ಸಿಐ, ಐಟಿಆರ್, ಟಿಬಿಆರ್ಎಲ್ ಮತ್ತು ಇತರ ತಾಂತ್ರಿಕ ಸಂಸ್ಥೆಗಳ ನೇತೃತ್ವವನ್ನು ವಹಿಸಿದ್ದಾರೆ.ಜೆಎನ್ಟಿಯು ಅನಂತಪುರದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದರು ಮತ್ತು ಜೆಎನ್ಟಿಯು ಹೈದರಾಬಾದ್ ನಿಂದ ತಮ್ಮ ಸ್ನಾತ್ತಕೋತ್ತರ ಮತ್ತು ಪಿಎಚ್ಡಿ ಪಡೆದರು. 1986 ರಲ್ಲಿ ಹೈದರಾಬಾದ್ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ(ಡಿಆರ್ಡಿಎಲ್)ಕ್ಕೆ ಸೇರಿದರು.