ನವದೆಹಲಿ: ಐಸಿಐಸಿಐ ಬ್ಯಾಂಕ್ ಮಾಜಿ ಎಂಡಿ ಮತ್ತು ಸಿಇಒ ಚಂದಾ ಕೋಚಾರ್, ಪತಿ ದೀಪಕ್ ಕೋಚಾರ್ ಮತ್ತು ವಿಡಿಯೊಕಾನ್ ನ ವೇಣುಗೋಪಾಲ್ ಧೂತ್ ಐಸಿಐಸಿಐ ಬ್ಯಾಂಕ್-ವೀಡಿಯೊಕಾನ್ ಸಾಲ ಪ್ರಕರಣದ ವಿಚಾರವಾಗಿ ಶನಿವಾರದಂದು ಮುಂಬೈನಲ್ಲಿರುವ ಜಾರಿ ನಿರ್ದೇಶನಾಲಯದ ಎದುರು ಹಾಜರಾದರು.
ಇಡಿ ದಾಳಿ ಮಾಡಿದ ನಂತರ ಇಬ್ಬರು ಶನಿವಾರದಂದು ಮಧ್ಯಾಹ್ನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದ ಕೇಂದ್ರ ಸಂಸ್ಥೆಯ ಪ್ರಾದೇಶಿಕ ಕಚೇರಿಯನ್ನು ತಲುಪಿದರು. ತನಿಖಾಧಿಕಾರಿಯು ಮನಿ ಲಾಂಡರಿಂಗ್ ಕಾಯ್ದೆ (ಪಿಎಂಎಲ್ಎ) ಯನ್ವಯ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂದಾ ಕೊಚಾರ್ ಅವರು ಐಸಿಐಸಿಐ ಬ್ಯಾಂಕಿನ ಮುಖಸ್ಥರಾಗಿದ್ದ ವೇಳೆ ನಡೆದ ಸಾಲ ನೀಡುವಿಕೆಯಲ್ಲಿನ ಅಕ್ರಮಗಳ ತನಿಖೆ ವಿಚಾರವಾಗಿ ನಿನ್ನೆ ಇಡಿ ತಂಡವು ದಕ್ಷಿಣ ಮುಂಬೈ ನಲ್ಲಿರುವ ಚಂದಾ ಕೊಚಾರ್ ಮನೆಯ ಮೇಲೆ ದಾಳಿ ಮಾಡಿತ್ತು.ಇದೇ ವೇಳೆ ಇಡಿ ತಂಡವು ನಿಶಾಂತ್ ಕನೋಡಿಯಾ ನೇತೃತ್ವದ ಮ್ಯಾಟಿಕ್ಸ್ ಗ್ರೂಪ್ನ ಆವರಣವನ್ನು ಹುಡುಕಿತ್ತು.ಈ ಹಿನ್ನಲೆಯಲ್ಲಿ ಇಂದು ಇಡಿ ಕಚೇರಿ ಹಾಜರಿಗಾಗಿ ತಮ್ಮ ಹೇಳಿಕೆಗಳನ್ನು ಆಧಿಕಾರಿಗಳ ಮುಂದೆ ದಾಖಲಿಸಿದ್ದಾರೆ.