Banana Leaf Meal: ಇತ್ತಿಚೀನ ದಿನಗಳಲ್ಲಿ ಆಧುನಿಕರಣದಿಂದ ಎಲ್ಲಾ ಪದ್ದತಿ ಬದಲಾದಂತಿದೆ. ಮೊದಲೆಲ್ಲಾ ಹೆಚ್ಚಾಗಿ ಹಳ್ಳಿಯ ಪ್ರತಿ ಮನೆಗಳಲ್ಲೂ ಬಾಳೆ ಎಲೆ ಊಟ ಕಡ್ಡಾಯವಾಗಿತ್ತು. ಈ ಎಲೆಯಲ್ಲಿ ಊಟ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ..
Lifestyle: ಇತ್ತಿಚೀನ ದಿನಗಳಲ್ಲಿ ಆಧುನಿಕರಣದಿಂದ ಎಲ್ಲಾ ಪದ್ದತಿ ಬದಲಾದಂತಿದೆ. ಮೊದಲೆಲ್ಲಾ ಹೆಚ್ಚಾಗಿ ಹಳ್ಳಿಯ ಪ್ರತಿ ಮನೆಗಳಲ್ಲೂ ಬಾಳೆ ಎಲೆ ಊಟ ಕಡ್ಡಾಯವಾಗಿತ್ತು. ಆದರೆ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ದತಿಯನ್ನು ಕಾರ್ಯಕ್ರಮಗಳಲ್ಲಿ ಮಾತ್ರ ಕಾಣ ಸಿಗುತ್ತದೆ. ಈ ಎಲೆಯಲ್ಲಿ ಊಟ ಮಾಡುವುದು ಸಂಪ್ರಾದಾಯದ ಜೊತೆಗೆ ಊಟದ ರುಚಿ ಹೆಚ್ಚಿಸುತ್ತದೆ. ರುಚಿ ಮಾತ್ರವಲ್ಲ ಅನೇಕ ರೋಗಗಳಿಗೂ ಸರಳ ಮದ್ದಾಗಿದೆ. ಪ್ಲಾಸ್ಟಿಕ್ ತಟ್ಟೆಯಲ್ಲಿ ಊಟ ಮಾಡುವುದರಿಂದ ನಮಗೆ ಅರಿವು ಇಲ್ಲದಂತಯೇ ಕೆಲವು ರೋಗಗಳು ಬರಬಹುದು. ಇದೇ ಕಾರಣಕ್ಕಾಗಿ ಹಿಂದಿನ ಕಾಲದಲ್ಲಿ ಉತ್ತಮ ಆರೋಗ್ಯದ ಜೊತೆ ಹೆಚ್ಚು ಕಾಲ ಬದುಕುತ್ತಿದ್ದರು.
ಬಾಳೆ ಎಲೆಯಲ್ಲಿ ಇಂಗು ಅಂಶವಿರುವುದರಿಂದ ಊಟದ ರುಚಿ ಹೆಚ್ಚುತ್ತದೆ
ಪ್ಲಾಸ್ಟಿಕ್ ಮತ್ತು ಇತರ ಸಾಮಗ್ರಿಗಳಿಂದ ಮಾಡಿದಂತಹ ಪ್ಲೇಟ್ ಗಳಳಲ್ಲಿ ಊಟ ಮಾಡುವುದರಿಂದ ರುಚಿ ಹೋಗುವುದಲ್ಲದೇ ಇದು ಪರಿಸರಕ್ಕೂ ಹಾನಿಕಾರಕವಾಗುತ್ತದೆ.
ಬಾಳೆ ಎಲೆಯಲ್ಲಿ ಊಟ ಆದ ಬಳಿಕ ಇದನ್ನು ದನ ಕರು ಸೇವಿಸಬಹುದಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಎಲೆಯಲ್ಲಿ ಊಟ ಸೇವಿಸುವುದರಿಂದ ಮುನುಷ್ಯನ ಜೊತೆಗೆ ಪ್ರಾಣಿಗೂ ಹಾನಿಕಾರಕವಾಗಿದೆ
ಸ್ಟೆರಿಫೋಮ್ ಪ್ಲೇಟ್ ಗಳು ಮಣ್ಣಿನಲ್ಲಿ ಕರಗುವುದಿಲ್ಲ ಮತ್ತು ಹಾಗೆ ನೂರಾರು ವರ್ಷಗಳ ಕಾಲ ಉಳಿಯಬಹುದು. ಬಾಳೆಎಲೆಯು ಮಣ್ಣಿನಲ್ಲಿ ಬೇಗನೆ ಕರಗುತ್ತದೆ.
ಹೊಟೇಲ್ ಗಳಲ್ಲಿ ಇದನ್ನು ಬಳಸುವುದರಿಂದ ತೊಳೆಯುವ ಅವಶ್ಯಕತೆ ಇಲ್ಲ ಬಿಸಾಡಲು ಅನುಕೂಲವಾಗುತ್ತದೆ.
ಇದರಲ್ಲಿರುವ ಅಂಶವು ದೇಹಕ್ಕೆ ಅಗತ್ಯ ಪೋಷಾಕಾಂಶಗಳನ್ನು ಹೊಂದಿದೆ