ಬೆಂಗಳೂರು: ಕಾಣೆಯಾಗಿರುವ ಪತಿಯನ್ನು ಹುಡುಕಿ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆವೋರ್ವಳು ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ.
ಎರಡೂವರೆ ವರ್ಷಗಳ ಹಿಂದೆ ಮಹಾರಾಷ್ಟ್ರದ ನಾಗಪುರ ಮೂಲದವರಾದ ಜೈ ಮತ್ತು ಜಿನಿಶಾ ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ಹಲವು ದಿನಗಳಿಂದ ಪತಿ ಕಾಣೆಯಾಗಿದ್ದು, ಈ ಬಗ್ಗೆ ಮಹಿಳೆ ಜಿನಿಶಾ ಹೆಚ್.ಎಸ್.ಆರ್.ಠಾಣೆ ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಆದರೆ, ಪೊಲೀಸರು ಈ ದೂರಿನ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿನಿಶಾ ಅಸಮಾಧಾನ ಹೊರಹಾಕಿದ್ದಾರೆ.
"ನನಗೆ ಒಂದು ವರ್ಷದ ಪುಟ್ಟ ಮಗುವಿದೆ, ನಾನು ಬೆಂಗಳೂರಿನಲ್ಲಿ ಒಬ್ಬಳೇ ವಾಸವಾಗಿದ್ದೇನೆ. ಈಗಾಗಲೇ ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ. ಒಂದು ವೇಳೆ ಪೊಲೀಸರು ಪತಿಯನ್ನು ಹುಡುಕಿಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಅದಕ್ಕೆ ಬೆಂಗಳೂರು ಪೊಲೀಸರೇ ಹೊಣೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಿದ್ದಾಳೆ.