2018 ರ ಚಳಿಗಾಲದ ಒಲಂಪಿಕ್ಸ್ ನಿಂದ ರಷ್ಯಾಗೆ ನಿಷೇಧ

     

Last Updated : Dec 6, 2017, 01:49 PM IST
2018 ರ ಚಳಿಗಾಲದ ಒಲಂಪಿಕ್ಸ್ ನಿಂದ ರಷ್ಯಾಗೆ ನಿಷೇಧ title=

ಲೌಸಾನೆ:  ರಷ್ಯಾ ದೇಶವನ್ನು 2018 ರ ಚಳಿಗಾಲದ ಒಲಂಪಿಕ್ಸ್ ನಿಂದ ನಿಷೇಧಿಸಲಾಗಿದೆ.ಉದ್ದೀಪನ ಮದ್ದಿಗೆ ಉತ್ತೇಜನ ನೀಡಿರುವ ಹಿನ್ನಲೆಯಲ್ಲಿ ಈ ಕ್ರಮವನ್ನು  ಕೈಗೊಂಡಿದೆ ಎಂದು ಅಂತರಾಷ್ಟ್ರೀಯ ಒಲಂಪಿಕ್ ಸಮಿತಿ ಅಭಿಪ್ರಾಯಪಟ್ಟಿದೆ. ಆದರೆ ರಷ್ಯಾದ ಸ್ಪರ್ಧಿಗಳು ಸ್ವತಂತ್ರವಾಗಿ ಸ್ಪರ್ಧಿಸಬಹುದೆಂದು ಸಮಿತಿ ಹೇಳಿದೆ.

ಈ ಹಿಂದೆ ಹಲವಾರು ಬಾರಿ ರಷ್ಯಾ ಉದ್ದೀಪನ ಮದ್ದು ಸೇವೆನೆಗೆ ಉತ್ತೇಜನ ನೀಡಿದ್ದ ಆರೋಪ ಕೇಳಿ ಬಂದಿತ್ತು.ಇದರ ಪ್ರಮಾಣವು ರಷ್ಯಾದ ಸೋಚಿಯಲ್ಲಿ 2014 ರಲ್ಲಿ ನಡೆದ ಚಳಿಗಾಲದ ಒಲಂಪಿಕ್ಸ್ ನಲ್ಲಿ ತೀವ್ರವಾಗಿತ್ತು. ಆದ್ದರಿಂದ ಸಮಿತಿಯು ಈ ಬಾರಿ ಕಠಿಣ ಕ್ರಮ ತೆಗೆದುಕೊಂಡಿದೆ. 

ಈ ಹಿಂದೆ ಸಮಿತಿಯು  ಹಲವಾರು ದೇಶಗಳನ್ನು ಒಲಂಪಿಕ್ಸ್ ನಿಂದ ಹೊರ ಹಾಕಲ್ಪಟ್ಟಿತ್ತು ಅದರಲ್ಲಿ ಪ್ರಮುಖವಾಗಿ ದಕ್ಷಿಣ ಆಫ್ರಿಕಾ ದೇಶವನ್ನು ವರ್ಣಭೇಧ ನೀತಿಯ ಕಾರಣಗಳಿಗಾಗಿ ಕ್ರೀಡಾಕೂಟದಿಂದ ಹೊರಹಾಕಲ್ಪಟ್ಟಿತ್ತು,ಆದರೆ ಇದುವರೆಗೆ ರಷ್ಯಾ ದೇಶವನ್ನು ಹೊರತು ಪಡಿಸಿ ಯಾವ ದೇಶವು ಕೂಡ ಉದ್ದೀಪನ ಮದ್ದಿನ ವಿಷಯದಲ್ಲಿ ಕ್ರೀಡಾಕೂಟದಿಂದ ನಿಷೇಧಿಸಲ್ಪಟ್ಟಿಲ್ಲ ಎನ್ನುವುದು ಗಮನಾರ್ಹ ವಿಷಯವಾಗಿದೆ. 

Trending News