Hairs on Ears astology : ಶಾಸ್ತ್ರ ಮತ್ತು ಪುರಾಣದಲ್ಲಿ ಎಲ್ಲಾ ಸಮಸ್ಯೆ ಮತ್ತು ಪ್ರತಿಯೊಂದಕ್ಕೂ ಅರ್ಥ ಇರುತ್ತದೆ. ಅಡಿಯಿಂದ ಮುಡಿವರೆಗೂ ನಮ್ಮ ದೇಹದಲ್ಲಿರುವ ರೇಖೆಗಳು ನಮ್ಮ ಭವಿಷ್ಯವನ್ನು ನುಡಿಯುತ್ತವೆ. ಅದರಂತೆ ಕಿವಿಯ ಮೇಲಿನ ಕೂದಲುಗಳು ಸಹ. ಕಿವಿಯಲ್ಲಿ ಕೂದಲು ಇರುವವರು ತುಂಬಾ ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಈ ವಿಚಾರ ಕೆಲವೇ ಜನರಿಗೆ ಗೊತ್ತಿದೆ. ಇಂದು ನಾವು ಕಿವಿ ಕೂದಲಿನ ಬಗ್ಗೆ ಸಾಮುದ್ರಿಕ ಶಾಸ್ತ್ರವು ಏನು ಹೇಳುತ್ತದೆ ಎಂದು ತಿಳಿಯೋಣ..
ಕಿವಿಯ ಒಳಗಿನ ಕೂದಲು : ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕಿವಿಯ ಒಳಗಿನಿಂದ ಕೂದಲು ಹೊರಬರುವವರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಹಣದ ವಿಷಯದಲ್ಲಿಯೂ ಅವರು ತುಂಬಾ ಸಧೃಢರಾಗಿರುತ್ತಾರೆ. ಅವರ ಜೀವನದಲ್ಲಿ ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಅದೃಷ್ಟ ಯಾವಾಗಲೂ ಅವರಿಗೆ ಅನುಕೂಲಕರವಾಗಿರುತ್ತದೆ.
ಇದನ್ನೂ ಓದಿ: Chandra Grahan 2023 : ಇಂದು ರಾತ್ರಿ ಸಂಭವಿಸುವ ʼಚಂದ್ರ ಗ್ರಹಣʼದ ವೇಳೆ ಈ ʼಶಕ್ತಿ ಮಂತ್ರʼ ಜಪಿಸಿ..!
ಕಿವಿಗಳ ಮೇಲೆ ಸಣ್ಣ ಕೂದಲು : ಸಾಮುದ್ರಿಕ ಶಾಸ್ತ್ರದ ಪ್ರಕಾರ ಕಿವಿಯ ಮೇಲೆ ಕೂದಲು ಹೊಂದಿದ್ದರೂ ತುಂಬಾ ಚಿಕ್ಕದಾಗಿದ್ದರೆ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಕಠಿಣ ಪರಿಶ್ರಮದ ಹೊರತಾಗಿಯೂ ಅಂತಹ ಜನರ ವ್ಯಕ್ತಿತ್ವವು ಯಶಸ್ವಿಯಾಗುವುದಿಲ್ಲ. ಅಲ್ಲದೆ, ಅವರು ತಮ್ಮ ಜೀವನದುದ್ದಕ್ಕೂ ಹಣದ ಕೊರತೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.
ಕಿವಿಯ ಹೊರಭಾಗದ ಕೂದಲು : ಸಾಮುದ್ರಿಕ ಶಾಸ್ತ್ರದ ಪ್ರಕಾರ, ಹೊರಗೆ ಕಾಣುವ ಕೂದಲನ್ನು ಹೊಂದಿರುವ ಜನರು, ಅವರು ಎಲ್ಲಿಗೆ ಹೋದರೂ, ತಮ್ಮ ಕಲೆಯಿಂದ ಜನರನ್ನು ಆಕರ್ಷಿಸುತ್ತಾರೆ. ಅಂದರೆ, ಅವರ ವ್ಯಕ್ತಿತ್ವವು ತುಂಬಾ ಪ್ರಭಾವಶಾಲಿಯಾಗಿರುತ್ತದೆ ಅಂತ ಅರ್ಥ. ಅದು ಅವನನ್ನು ಇತರರಿಗಿಂತ ಎದ್ದು ಕಾಣುವಂತೆ ಮಾಡುತ್ತದೆ.
ಇದನ್ನೂ ಓದಿ: ಅರಿಶಿನ ಶಾಸ್ತ್ರಕ್ಕೂ ವಿಜ್ಞಾನಕ್ಕೂ ಇರೋ ಸಂಬಂಧ ಏನು ಗೊತ್ತಾ..?
ಉದ್ದವಾದ ಕೂದಲು : ಕಿವಿಯಲ್ಲಿ ಸಾಮಾನ್ಯಕ್ಕಿಂತ ಉದ್ದವಾದ ಕೂದಲು ಇದ್ದರೆ, ಅವರು ಅದ್ಭುತವಾದ ಪ್ರತಿಭೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಅಂತಹ ಜನರು ದೇವರಲ್ಲಿ ಆಳವಾದ ನಂಬಿಕೆಯನ್ನು ಇಟ್ಟಿರುತ್ತಾರೆ. ಆದ್ದರಿಂದ ಅವರು ಸಾಮಾನ್ಯವಾಗಿ ತಮ್ಮ ಜೀವನವನ್ನು ಆಧ್ಯಾತ್ಮಿಕತೆಯಲ್ಲಿಯೇ ಕಳೆಯುತ್ತಾರೆ. ಅಂತಹ ಜನರು ದೇವರಿಂದ ಆಶೀರ್ವದಿಸಲ್ಪಡುತ್ತಾರೆ ಎಂದು ನಂಬಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.