Shani Vakri Effect 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವು ತನ್ನ ನಿಗದಿತ ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ಉದಯವಾಗುತ್ತದೆ, ಅಸ್ತವಾಗುತ್ತದೆ. ಹಿಮ್ಮುಖ ಚಲನೆ ಆರಂಭಿಸುತ್ತದೆ. ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹ ಎಂದು ಕರೆಯಲ್ಪಡುತ್ತದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಜನವರಿಯಲ್ಲಿ ಸ್ವರಾಶಿ ಕುಂಭವನ್ನು ಪ್ರವೇಶಿಸಿರುವ ಶನಿಯು, ಜೂನ್ 5 ರಂದು ಕುಂಭ ರಾಶಿಯಲ್ಲಿಯೇ ತನ್ನ ನಡೆಯನ್ನು ಬದಲಿಸಲಿದ್ದಾನೆ. ಅಂದರೆ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ.
ಯಾವುದೇ ಗ್ರಹವು ಹಿಮ್ಮುಖ ಚಲನೆ ಆರಂಭಿಸಿದಾಗ ಅದರ ಪರಿಣಾಮವು ಅನೇಕ ಪಟ್ಟು ಹೆಚ್ಚಾಗುತ್ತದೆ. ಶನಿಯು 139 ದಿನಗಳವರೆಗೆ ಹಿಮ್ಮುಖವಾಗಿ ಚಲಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಈ 3 ರಾಶಿಯವರಿಗೆ ವಿಶೇಷ ಲಾಭ ದೊರೆಯುತ್ತದೆ. ಅವರ ಸಂಪತ್ತಿನಲ್ಲಿ ಅಪಾರ ಹೆಚ್ಚಳವಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ : Lunar Eclipse 2023: ಬುದ್ಧ ಪೂರ್ಣಿಮೆಯಂದು ಚಂದ್ರಗ್ರಹಣ, ಈ ರಾಶಿಯವರಿಗೆ ಭರ್ಜರಿ ಲಾಟರಿ
ಶನಿಯ ಹಿಮ್ಮುಖ ಚಲನೆಯಿಂದ ಲಾಭ ಪಡೆಯುವ ರಾಶಿಗಳಿವು :
ಧನು ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಗ್ರಹದ ನಡೆಯಲ್ಲಿನ ಬದಲಾವಣೆ ಈ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ಈ ರಾಶಿಯ ಮೂರನೇ ಮನೆಯಲ್ಲಿ ಶನಿಯು ಸಾಗಲಿದ್ದಾನೆ. ಶನಿಯು ಧನು ರಾಶಿಯ 12 ನೇ ಮನೆಯ ಅಧಿಪತಿ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಶೌರ್ಯ ಹೆಚ್ಚುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹಣವನ್ನು ಉಳಿಸುವುದು ಸಾಧ್ಯವಾಗುತ್ತದೆ.
ತುಲಾ ರಾಶಿ :
ಶನಿದೇವನ ಹಿಮ್ಮುಖ ಚಲನೆಯು ತುಲಾ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಈ ರಾಶಿಯ ಐದನೇ ಮನೆಯಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭವಾಗುತ್ತದೆ. ಶನಿಯು ಈ ಮನೆಯಲ್ಲಿ 139 ದಿನಗಳ ಕಾಲ ಇರುತ್ತಾನೆ. ಆಕಸ್ಮಿಕವಾಗಿ ವಿತ್ತೀಯ ಪ್ರಯೋಜನಗಳಾಗುವುದು. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಬರಬಹುದು. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ. ತುಲಾ ರಾಶಿಯ ನಾಲ್ಕನೇ ಮನೆಯ ಅಧಿಪತಿ ಶನಿದೇವ. ಆಸ್ತಿ, ರಿಯಲ್ ಎಸ್ಟೇಟ್ ಸೇರಿದಂತೆ ಶನಿಗೆ ಸಂಬಂಧಿಸಿದ ಕೆಲಸ ಮಾಡುವವರು ಅದ್ಭುತ ಯಶಸ್ಸನ್ನು ಪಡೆಯುತ್ತಾರೆ.
ಇದನ್ನೂ ಓದಿ : ಶನಿಯ ರಾಶಿಯಲ್ಲಿ ಪ್ಲುಟೊ ಗ್ರಹ ಸಂಚಾರ: ಈ ರಾಶಿಯವರಿಗೆ ಧನ ವೃಷ್ಟಿ
ಮಿಥುನ ರಾಶಿ :
ಶನಿದೇವನ ಹಿಮ್ಮುಖ ಚಲನೆಯು ಮಿಥುನ ರಾಶಿಯ ಜನರ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯ ಒಂಬತ್ತನೇ ಮನೆಯಲ್ಲಿ ಶನಿಯ ಸಂಚಾರವಾಗಲಿದೆ. ಈ ರಾಶಿಯಲ್ಲಿ ಶನಿಯು 139 ದಿನಗಳವರೆಗೆ ಇರುತ್ತಾನೆ. ಇದರಿಂದ ಈ ರಾಶಿಯವರು ಅದೃಷ್ಟವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ ಈ ಸಮಯದಲ್ಲಿ ಫಾರಿನ್ ಟ್ರಿಪ್ ಕೂಡಾ ಸಾಧ್ಯವಾಗಬಹುದು. ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಇದು ಉತ್ತಮ ಸಮಯ. ಅಷ್ಟೇ ಅಲ್ಲ ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.